ತಾಲಿಬಾನ್‌ನ ಹೊಸ ಕಾನೂನುಗಳಿಗೆ ಮಾನವ ಹಕ್ಕುಗಳ ಸಂಘಟನೆಗಳಿಂದ ವಿರೋಧ
(ಮೌಲಾನಾ ಎಂದರೆ ಇಸ್ಲಾಂ ಧರ್ಮದ ವಿದ್ವಾಂಸ)

ಕಾಬೂಲ್ (ಅಫ್ಘಾನಿಸ್ತಾನ) – ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹಿಬತುಲ್ಲಾ ಅಖುಂದ್‌ಜಾದಾ ಅಂಗೀಕರಿಸಿದ ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ‘ಗುಲಾಮಗಿರಿ’ಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. ವಿವಿಧ ಕಲಂಗಳಲ್ಲಿ ‘ಗುಲಾಮ’ ಮತ್ತು ‘ಯಜಮಾನ’ ಎಂಬ ಪದಗಳನ್ನು ಕಾನೂನು ವರ್ಗೀಕರಣವಾಗಿ ಬಳಸಲಾಗಿದೆ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಇಂದು ಗುಲಾಮಗಿರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ತಾಲಿಬಾನ್ ತನ್ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದಕ್ಕೆ ಸ್ಥಾನ ನೀಡಿರುವುದನ್ನು ಮಾನವ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.
❓ Will a Maulana who rapes a woman go unpunished in Taliban-ruled Afghanistan?
⚠️ New laws by the Taliban spark global outrage, yet India’s so-called “progressive” lobby; loud about Muslim insecurity in India, goes silent.
Remember this hypocrisy.
📌 What the new laws say: 1️⃣… pic.twitter.com/O1KRk5nl4z
— Sanatan Prabhat (@SanatanPrabhat) January 28, 2026
ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಮೌಲವಿಗೆ ಶಿಕ್ಷೆಯಾಗುವುದಿಲ್ಲವೇ? ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ಯಾರಾದರೂ ಮುಲ್ಲಾ ಅಥವಾ ಮೌಲವಿ (ಇಸ್ಲಾಂ ಧರ್ಮದ ನಾಯಕ) ಅಪರಾಧ ಎಸಗಿದರೆ, ಅವರ ಮೇಲೆ ಸಾಮಾನ್ಯ ನಾಗರಿಕರಂತೆ ವಿಚಾರಣೆ ನಡೆಸಲಾಗುವುದಿಲ್ಲ. ಅವರಿಗೆ ಕೇವಲ ‘ತಿಳುವಳಿಕೆ’ ಹೇಳಿ ಬಿಡಲಾಗುವುದು. ಈ ಇಸ್ಲಾಮಿಕ್ ಧಾರ್ಮಿಕ ಏಕಸ್ವಾಮ್ಯದ ಅರ್ಥವೇನೆಂದರೆ – ನಾಳೆ ಯಾರಾದರೂ ಧರ್ಮಗುರುಗಳು ಮಹಿಳೆಯ ಮೇಲೆ ಅತ್ಯಾಚಾರ ಮಾಡಿದರೂ, ದರೋಡೆ ಅಥವಾ ಕೊಲೆ ಮಾಡಿದರೂ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
ಸಮಾಜದ ವರ್ಗೀಕರಣದ ಆಧಾರದ ಮೇಲೆ ಶಿಕ್ಷೆ ನಿರ್ಧಾರ! ತಾಲಿಬಾನ್ ಅಫ್ಘಾನ್ ಸಮಾಜವನ್ನು ನಾಲ್ಕು ಶ್ರೇಣಿಗಳಾಗಿ ವಿಂಗಡಿಸಿದೆ – ಉಲೆಮಾ (ಉನ್ನತ ಶ್ರೇಣಿ), ಅಶ್ರಫ್, ಮಧ್ಯಮ ವರ್ಗ ಮತ್ತು ಕೆಳ ವರ್ಗ. ಅಪರಾಧಕ್ಕಾಗಿ ನೀಡಲಾಗುವ ಶಿಕ್ಷೆಯು ವ್ಯಕ್ತಿಯ ಸಾಮಾಜಿಕ ಸ್ತರವನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ.
ಕಾನೂನಿನಲ್ಲಿ ಪತಿಯನ್ನು ‘ಪತ್ನಿಯ ಯಜಮಾನ’ ಎಂದು ಉಲ್ಲೇಖಿಸಲಾಗಿದೆ!
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಪತಿಯನ್ನು ‘ಪತ್ನಿಯ ಯಜಮಾನ’ (ಮಾಲೀಕ) ಎಂದು ಸಂಬೋಧಿಸಲಾಗಿದೆ. ಇದರ ಮೂಲಕ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮತ್ತು ಶೋಷಣೆಗೆ ಒಂದು ರೀತಿಯಲ್ಲಿ ಕಾನೂನುಬದ್ಧ ಮಾನ್ಯತೆ ನೀಡಿದಂತಾಗಿದೆ ಎಂದು ಹೇಳಲಾಗುತ್ತಿದೆ. ಮಧ್ಯಕಾಲೀನ ಯುಗಕ್ಕಿಂತಲೂ ಭೀಕರ ಕಾನೂನುಗಳು! – ಮಾನವ ಹಕ್ಕು ಸಂಘಟನೆಗಳ ಆರೋಪ ಮಾನವ ಹಕ್ಕು ಸಂಘಟನೆ ‘ರವಾದಾರಿ’ ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಮಂಡಳಿಯು ಈ ಕಾನೂನುಗಳನ್ನು ತೀವ್ರವಾಗಿ ಖಂಡಿಸಿವೆ. “ಈ ಕಾನೂನುಗಳು ಮಧ್ಯಕಾಲೀನ ಯುಗಕ್ಕಿಂತಲೂ ಭೀಕರವಾಗಿವೆ ಮತ್ತು ಮಾನವ ಘನತೆಯನ್ನು ಉಲ್ಲಂಘಿಸುತ್ತವೆ” ಎಂದು ಟೀಕಿಸಿವೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ; ದಂಡದ ಬಳಿಕ ಬಿಡುಗಡೆ : Child Abuse Verdict