|

ಮುಂಬಯಿ: ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೋಲ್ಹೆ ಅವರ ಹತ್ಯೆ ಪ್ರಕರಣದ ಆರೋಪಿ ಪಶುವೈದ್ಯ ಯೂಸುಫ್ ಖಾನ್‌ಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. 2022 ರಲ್ಲಿ ಉಮೇಶ್ ಕೋಲ್ಹೆ ಅವರ ಹತ್ಯೆ ನಡೆದಿತ್ತು. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಬೆಂಬಲಾರ್ಥವಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಕ್ಕಾಗಿ ಅವರನ್ನು ಹತ್ಯೆ ಮಾಡಲಾಗಿತ್ತು.
ಯೂಸುಫ್ ಖಾನ್‌ನ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ಉಚ್ಚ ನ್ಯಾಯಾಲಯ: “ಮೇಲ್ನೋಟಕ್ಕೆ ಈ ಪ್ರಕರಣವು ಕೇವಲ ಹತ್ಯೆಯಲ್ಲ, ಬದಲಾಗಿ ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿದೆ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗೆ ಪ್ರತಿಕಾರ ತೀರಿಸಿಕೊಳ್ಳಲು ಆರೋಪಿಯು ಸಂಚು ರೂಪಿಸಿದ್ದನು. ಹೀಗಾಗಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದಲೇ ಉಮೇಶ್ ಅವರ ಹತ್ಯೆ ಮಾಡಲಾಗಿದೆ” ಎಂದು ಹೇಳಿತು.
ನ್ಯಾ .ಎ.ಎಸ್. ಗಡ್ಕರಿ ಮತ್ತು ಶ್ಯಾಮ್ ಸಿ. ಚಾಂದಕ್ ಅವರ ಪೀಠ ನೀಡಿದ ತೀರ್ಪು:
1. ತನಿಖಾ ಸಂಸ್ಥೆಗಳು ಸಲ್ಲಿಸಿರುವ ಪುರಾವೆಗಳನ್ನು ಗಮನಿಸಿದರೆ, ಇದು ಕೇವಲ ಸಾಮಾನ್ಯ ಅಪರಾಧ ಅಥವಾ ಹಿಂಸಾಚಾರದ ಕೃತ್ಯವಲ್ಲ ಎಂಬುದು ತಿಳಿಯುತ್ತದೆ. ಆದ್ದರಿಂದ, ಆರೋಪಿಗೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (UAPA) ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸಿರುವುದು ಸರಿಯಾಗಿದೆ.
2. ಯೂಸುಫ್ ಖಾನ್ ಹಿಂದಿಯಲ್ಲಿ ಒಂದು ಸಂದೇಶವನ್ನು ಬರೆದಿದ್ದನು. ಅದರಲ್ಲಿ ಅವನು ಕೋಲ್ಹೆ ಅವರಿಗೆ ಪಾಠ ಕಲಿಸುವಂತೆ ಜನರಿಗೆ ಕರೆ ನೀಡಿದ್ದನು.
3. ಯೂಸುಫ್‌ನ ವಾದದ ಪ್ರಕಾರ, ಅವನು ಕೋಲ್ಹೆ ಅವರ ವ್ಯವಹಾರವನ್ನು ಬಹಿಷ್ಕರಿಸಲು ಬಯಸಿದ್ದನು. ಆದರೆ ಪುರಾವೆಗಳ ಆಧಾರದ ಮೇಲೆ ಈ ವಾದವನ್ನು ನಂಬಲು ಸಾಧ್ಯವಾಗಿಲ್ಲ. ಕೇವಲ ವ್ಯವಹಾರವನ್ನು ನಿಲ್ಲಿಸುವ ಉದ್ದೇಶವಿದ್ದಿದ್ದರೆ, ಆ ಸಂದೇಶವು ಗ್ರಾಹಕರಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ಆದರೆ ಖಾನ್ ಈ ಸಂದೇಶವನ್ನು ಹಲವಾರು ವಾಟ್ಸಾಪ್ ಗುಂಪುಗಳಿಗೆ ಕಳುಹಿಸಿದ್ದನು. ಇದರಿಂದ ಪ್ರಚೋದನೆ ನೀಡುವುದು ಮತ್ತು ಓರ್ವ ವ್ಯಕ್ತಿಯನ್ನು ಗುರಿ ಮಾಡುವುದೇ ಅವನ ಮುಖ್ಯ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಯೂಸುಫ್ ಖಾನ್ ಪರ ವಕೀಲರು ವಾದ ಮಂಡಿಸುತ್ತಾ, “ಇದು ಕೇವಲ ವ್ಯವಹಾರಿಕ ವಿವಾದ” ಎಂದು ಹೇಳಿದರು. ಆದರೆ ಆರೋಪಿಯು ಉದ್ದೇಶಪೂರ್ವಕವಾಗಿಯೇ ಪ್ರಚೋದನೆ ನೀಡಿದ್ದರಿಂದ ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು.
ಉಮೇಶ್ ಕೋಲ್ಹೆ ಹತ್ಯೆಯ ಹಿನ್ನೆಲೆಉಮೇಶ್ ಕೋಲ್ಹೆ ಅವರು ಅಮರಾವತಿಯಲ್ಲಿ ಔಷಧದ ಅಂಗಡಿಯನ್ನು ನಡೆಸುತ್ತಿದ್ದರು. ಜೂನ್ 21, 2022 ರ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಮರಳುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಕಥಿತ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿತ್ತು. ಜೂನ್ 14, 2022 ರಂದು ಕೋಲ್ಹೆ ಅವರು ನೂಪುರ್ ಶರ್ಮಾ ಅವರ ಬೆಂಬಲಾರ್ಥವಾಗಿ ವಾಟ್ಸಾಪ್ ಗುಂಪೊಂದರಲ್ಲಿ ಚಿತ್ರ ಮತ್ತು ಸಂದೇಶವನ್ನು ಹಂಚಿಕೊಂಡಿದ್ದರು. ಈ ಹೇಳಿಕೆಯಿಂದ ಉಂಟಾದ ಹಿಂಸಾಚಾರದ ನಡುವೆಯೇ ಈ ಹತ್ಯೆ ನಡೆದಿತ್ತು. ಸರಕಾರಿ ವಕೀಲರು, ಈ ಹತ್ಯೆಯು ಆಕಸ್ಮಿಕ ಕೃತ್ಯವಾಗಿರದೆ, ಪೂರ್ವಯೋಜಿತ ಸಂಚಿನ ಭಾಗವಾಗಿತ್ತು ಎಂದು ವಾದಿಸಿದ್ದರು. |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !