ಕಾನ್ಪುರ (ಉತ್ತರ ಪ್ರದೇಶ)ದಲ್ಲಿ ದುರ್ಗಾ ದೇವಾಲಯದ ಸಮೀಪದ ಜಮೀನಿನಲ್ಲಿ 100ಕ್ಕೂ ಹೆಚ್ಚು ಗೋವುಗಳ ಅವಶೇಷಗಳು ಪತ್ತೆ – Kanpur Cow Carcass

ಮುಸ್ಲಿಮರೊಂದಿಗೆ ಶಾಮೀಲಾಗಿದ್ದ ಪೊಲೀಸರ ಅಮಾನತು

ಕಾನ್ಪುರ (ಉತ್ತರ ಪ್ರದೇಶ) – ಇಲ್ಲಿನ ಗಢನ್‌ಪುರ ಪ್ರದೇಶದ ಶ್ರೀ ದುರ್ಗಾದೇವಿ ಮಂದಿರದ ಸಮೀಪವಿರುವ ಜಮೀನಿನಲ್ಲಿ 100ಕ್ಕೂ ಹೆಚ್ಚು ಗೋವುಗಳ ಅವಶೇಷಗಳು ಪತ್ತೆಯಾಗಿದ್ದು, ತೀವ್ರ ಸಂಚಲನ ಮೂಡಿಸಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು. ಜಮೀನಿನ ಮಾಲೀಕ ಮೊಹಮ್ಮದ್ ಶಾಕಿರ್ ಮತ್ತು ಆತನ ಸಹಚರರನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದರು. (ಆರೋಪಿಗಳ ಬಂಧನಕ್ಕೆ ಆಗ್ರಹವನ್ನೇಕೆ ಮಾಡಬೇಕಾಗುತ್ತದೆ? ಪೊಲೀಸರಿಗೆ ಇದು ತಿಳಿಯುವುದಿಲ್ಲವೇ! – ಸಂಪಾದಕರು). ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ.

1. ಮಾಧ್ಯಮಗಳ ವರದಿಯ ಪ್ರಕಾರ, ಜನವರಿ 12ರ ರಾತ್ರಿ ಶ್ರೀ ದುರ್ಗಾದೇವಿ ಮಂದಿರದ ಹತ್ತಿರವಿರುವ ಜಮೀನಿನಲ್ಲಿ ಗೋವುಗಳ ತಲೆಗಳು, ಮೂಳೆಗಳು ಮತ್ತು ಚರ್ಮ ಪತ್ತೆಯಾಗಿವೆ.

2. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ತಲುಪಿದರು. ಸಂಬಂಧಪಟ್ಟ ಜಮೀನು ಮಾಲೀಕನೇ ಗೋಹತ್ಯೆ ಮಾಡಿದ್ದಾನೆ ಎಂದು ಅವರು ಆರೋಪಿಸಿದರು. ಅಲ್ಲದೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ ಎಂದು ದೂರಿದರು.

3. ಪೊಲೀಸ್ ತನಿಖೆಯಲ್ಲಿ, ಸ್ಮಶಾನಕ್ಕೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಗೋವುಗಳ ಅವಶೇಷಗಳನ್ನು ತಗಡಿನ ಬೇಲಿಯಿಂದ ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

4. ಪ್ರಾಥಮಿಕ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲಿನ ಆರೋಪಗಳು ಸಾಬೀತಾದ ನಂತರ, ಜಂಟಿ ಪೊಲೀಸ್ ಕಮಿಷನರ್ ಅಶುತೋಷ್ ಕುಮಾರ್ ಅವರು ಬಿಲ್ಹೌರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಸರೋಜ, ಚೌಕಿ ಉಸ್ತುವಾರಿ ಪ್ರೇಮವೀರ್ ಸಿಂಗ್, ಪೊಲೀಸ್ ಅಧಿಕಾರಿ ಅಫ್ತಾಬ್ ಆಲಂ ಮತ್ತು ಕಾನ್ಸ್‌ಟೇಬಲ್ ದಿಲೀಪ್ ಗಂಗ್ವಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ.

5. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಶುತೋಷ್ ಕುಮಾರ್ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಪೊಲೀಸರನ್ನು ಕೇವಲ ಅಮಾನತು ಮಾಡಿದರೆ ಸಾಲದು, ಅವರನ್ನು ಸೇವೆಯಿಂದ ವಜಾಗೊಳಿಸಿ ಜೈಲಿಗೆ ಅಟ್ಟಬೇಕು!