
(ಸಿ.ಡಿ.ಎಸ್. ಎಂದರೆ ‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ ಅಂದರೆ ಮೂರೂ ಸೇನಾಪಡೆಗಳ ಮುಖ್ಯಸ್ಥರು)
ಪುಣೆ: “‘ಆಪರೇಷನ್ ಸಿಂದೂರ್ ’ ಕೇವಲ ನಿಂತಿದೆಯಷ್ಟೇ, ಮುಗಿದಿಲ್ಲ. ಈ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ‘ಚೀಫ್ ಆಫ್ ಡಿಫೆನ್ಸ್ ಫೋರ್ಸ್’ನಂತಹ ಹೊಸ ಹುದ್ದೆಯನ್ನು ಸೃಷ್ಟಿಸಬೇಕಾಯಿತು. ಈ ಆಪರೇಷನ್ ಪಾಕಿಸ್ತಾನಕ್ಕೆ ತನ್ನ ಸಂವಿಧಾನವನ್ನೇ ತಿದ್ದುಪಡಿ ಮಾಡಲು ಅನಿವಾರ್ಯಗೊಳಿಸಿತು. ನೆರೆಯ ರಾಷ್ಟ್ರವು ದೊಡ್ಡ ಮಟ್ಟದ ಸೋಲನ್ನು ಎದುರಿಸಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ,” ಎಂದು ಸಿ.ಡಿ.ಎಸ್. ಜನರಲ್ ಅನಿಲ್ ಚೌಹಾಣ್ ಹೇಳಿದರು. ಅವರು ‘ಪುಣೆ ಪಬ್ಲಿಕ್ ಪಾಲಿಸಿ ಫೆಸ್ಟಿವಲ್’ನಲ್ಲಿ ಮಾತನಾಡುತ್ತಿದ್ದರು.
ಜನರಲ್ ಚೌಹಾಣ್ ಮಾತು ಮುಂದುವರೆಸಿ, “ಪಾಕಿಸ್ತಾನದಲ್ಲಿ ಸಂಭವಿಸಿದ ಬದಲಾವಣೆಗಳನ್ನು ಗಮನಿಸಿದರೆ, ‘ಆಪರೇಷನ್ ಸಿಂದೂರ್’ ಮೂಲಕ ಆ ದೇಶದ ಹಲವಾರು ನ್ಯೂನತೆಗಳು ಮತ್ತು ದೌರ್ಬಲ್ಯಗಳು ಬಹಿರಂಗಗೊಂಡಿವೆ ಎಂಬುದು ತಿಳಿಯುತ್ತದೆ. ಪಾಕಿಸ್ತಾನದ ಸಂವಿಧಾನದ 243 ನೇ ವಿಧಿಯನ್ನು ತಿದ್ದುಪಡಿ ಮಾಡುವ ಮೂಲಕ ಅದರ ಉನ್ನತ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ‘ಜಾಯಿಂಟ್ ಚೀಫ್ ಆಫ್ ಸ್ಟಾಫ್ ಕಮಿಟಿ’ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಲಾಗಿದೆ. ಅದರ ಬದಲಾಗಿ ‘ಚೀಫ್ ಆಫ್ ಡಿಫೆನ್ಸ್ ಫೋರ್ಸಸ್’ ಎಂಬ ಹುದ್ದೆಯನ್ನು ಸೃಷ್ಟಿಸಲಾಗಿದೆ. ಈ ಹುದ್ದೆಯನ್ನು ಕೇವಲ ಸೇನಾ ಮುಖ್ಯಸ್ಥರೇ ನಿಭಾಯಿಸುವ ಅವಕಾಶವು ‘ಜಂಟಿ ಕಾರ್ಯಾಚರಣೆಯ’ ತತ್ವಕ್ಕೆ ವಿರುದ್ಧವಾಗಿದೆ. ಇದಲ್ಲದೆ ಪಾಕಿಸ್ತಾನದಲ್ಲಿ ‘ನ್ಯಾಷನಲ್ ಸ್ಟ್ರಾಟಜಿ ಕಮಾಂಡ್’ ಅನ್ನು ಸಹ ಸ್ಥಾಪಿಸಲಾಗಿದೆ.”
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ