ಅಮೆರಿಕ ಜಪ್ತಿ ಮಾಡಿದ ರಷ್ಯಾದ ನೌಕೆಯಲ್ಲಿ ೩ ಭಾರತೀಯರು ! Indian Crew Russian Ship Seize

ವಾಷಿಂಗ್ಟನ (ಅಮೆರಿಕ) – ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಅಮೆರಿಕವು ರಷ್ಯಾದ ತೈಲ ಸಾಗಣೆ ನೌಕೆಯನ್ನು ವಶಪಡಿಸಿಕೊಂಡಿದೆ. ಜನವರಿ ೭ ರಂದು ನಡೆಸಿದ ಈ ಕಾರ್ಯಾಚರಣೆಯಲ್ಲಿ ನೌಕೆಯಲ್ಲಿದ್ದ ಸಿಬ್ಬಂದಿಗಳ ಪೈಕಿ ೩ ಭಾರತೀಯ ನಾಗರಿಕರು ಇರುವ ಮಾಹಿತಿ ಹೊರಬಂದಿದೆ. ಅವರೊಂದಿಗೆ ಉಕ್ರೇನ್‌ನ ೧೭, ಜಾರ್ಜಿಯಾದ ೬ ಮತ್ತು ರಷ್ಯಾದ ೨ ನಾಗರಿಕರು ಸಹ ಸೇರಿದ್ದಾರೆ.

ಈ ನೌಕೆಯ ಹೆಸರು ‘ಮರಿನೆರಾ’ ಎಂದಾಗಿದ್ದು, ಅಮೆರಿಕವು ಕಳೆದ ತಿಂಗಳಿಂದ ‘ಬೆಲ್ಲಾ ೧’ ಎಂಬ ನೌಕೆಯನ್ನು ಹುಡುಕುತ್ತಿತ್ತು. ಈ ನೌಕೆಯ ಮೂಲ ಹೆಸರು ‘ಬೆಲ್ಲಾ ೧’ ಎಂದಾಗಿದ್ದು, ರಶಿಯಾ ಇತ್ತೀಚೆಗಷ್ಟೇ ಅದರ ಹೆಸರನ್ನು ‘ಮರಿನೆರಾ’ ಎಂದು ಬದಲಿಸಿತ್ತು. ಹಾಗಿದ್ದರೂ ರಶಿಯಾದ ರಕ್ಷಣಾ ಸಚಿವಾಲಯವು ಹೊರಡಿಸಿದ ಪ್ರಕಟಣೆಯಲ್ಲಿ, ‘ಅಮೆರಿಕವು ಹಡಗಿನ ಸಿಬ್ಬಂದಿಗಳಿಗೆ ಮಾನವೀಯತೆಯಿಂದ ಮತ್ತು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅವರನ್ನು ಆದಷ್ಟು ಬೇಗ ಅವರ ತಾಯ್ನಾಡಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದೆ.