ಹಿಂದೂ ದೇವಸ್ಥಾನದ ಭೂಮಿ ಮಾರಾಟದ ೩೦ ವರ್ಷಗಳ ಹಳೆಯ ವ್ಯವಹಾರವನ್ನು ರದ್ದುಗೊಳಿಸಿದ ಮದ್ರಾಸ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯವು ೧೫ ಡಿಸೆಂಬರ್ ೨೦೨೫ ರಂದು ಅರುಳಮಿಗು ಅಣ್ಣಾಮಲೈನಾಥರ ದೇವಸ್ಥಾನಕ್ಕೆ ಸೇರಿದ ೧೧೦ ಕೋಟಿ ರೂಪಾಯಿ ಮೌಲ್ಯದ ೩.೯೩ ಎಕರೆ ಭೂಮಿಯ ಮಾರಾಟದ ವ್ಯವಹಾರವನ್ನು ರದ್ದುಗೊಳಿಸಿದೆ. ಇದರಿಂದ ಸುಮಾರು ೩೦ ವರ್ಷಗಳಿಂದ ನಡೆಯುತ್ತಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ೧೯೯೦ ರ ದಶಕದಲ್ಲಿ ನಡೆದ ಈ ಮಾರಾಟವು ಕಾನೂನುಬಾಹಿರವಾಗಿತ್ತು ಎಂದು ನ್ಯಾಯಾಲಯವು ನಮೂದಿಸಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳಿದ್ದವು ಮತ್ತು ಧಾರ್ಮಿಕ ಸಂಪತ್ತಿನ ಸಂರಕ್ಷಣೆಯ ಉದ್ದೇಶಕ್ಕೆ ಈ ವ್ಯವಹಾರವು ಸಂಪೂರ್ಣ ವಿರುದ್ಧವಾಗಿತ್ತು.
೧. ಈ ಪ್ರಕರಣದಲ್ಲಿ ಅನೇಕ ಪಕ್ಷಕಾರರಿದ್ದರು. ಅವರಲ್ಲಿ ಸುಮಾರು ೯೦ ಜನರು ಮುಸಲ್ಮಾನರಾಗಿದ್ದರು ಮತ್ತು ಕನಿಷ್ಠ ೨ ಮಸೀದಿಗಳೂ ಇದರಲ್ಲಿ ಸೇರಿದ್ದವು.
೨. ದೇವಸ್ಥಾನದ ಭೂಮಿಯನ್ನು ಖಾಸಗಿ ಆಸ್ತಿಯಂತೆ ಮಾರಾಟ ಮಾಡಲು ಸಾಧ್ಯವಿಲ್ಲ. ಅದನ್ನು ದೇವತೆ ಮತ್ತು ಭಕ್ತರ ಹಿತದೃಷ್ಟಿಯಿಂದ ಸುರಕ್ಷಿತವಾಗಿಡುವುದು ಅವಶ್ಯಕವಾಗಿದೆ. ಈ ಭೂಮಿಯನ್ನು ಪುನಃ ದೇವಸ್ಥಾನದ ವಶಕ್ಕೆ ನೀಡಬೇಕು ಎಂದು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ವಿಶ್ವಸ್ತರು ಕೇವಲ ಸಂರಕ್ಷಕರು, ಮಾಲೀಕರಲ್ಲ!
ಹಿಂದೂ ಧಾರ್ಮಿಕ ಮತ್ತು ಧರ್ಮಾರ್ಥ ದತ್ತಿ ಇಲಾಖೆಯ ಅಧೀನದಲ್ಲಿ ಕೆಲಸ ಮಾಡುವ ವಿಶ್ವಸ್ತರು ಮತ್ತು ಅಧಿಕಾರಿಗಳು ದೇವಸ್ಥಾನದ ಸಂಪತ್ತಿನ ಮಾಲೀಕರಲ್ಲ, ಬದಲಾಗಿ ಕೇವಲ ಸಂರಕ್ಷಕರು ಮಾತ್ರ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಕಾನೂನಿನ ಸಂರಕ್ಷಣಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಯಾವುದೇ ವ್ಯವಹಾರವನ್ನು ನಂತರ ಸರಕಾರಿ ಆದೇಶಗಳ ಮೂಲಕ ಬೆಂಬಲಿಸಿದರೂ, ಅದು ಕಾನೂನುಬದ್ಧವಾಗಲು ಸಾಧ್ಯವಿಲ್ಲ. ಈ ಕಾನೂನಿನಲ್ಲಿರುವ ಕಡ್ಡಾಯ ನಿಯಮಗಳು ಕೇವಲ ಔಪಚಾರಿಕತೆಯಲ್ಲ, ಬದಲಾಗಿ ಧಾರ್ಮಿಕ ಸಂಪತ್ತಿನ ದುರುಪಯೋಗ ಮತ್ತು ಅತಿಕ್ರಮಣವನ್ನು ತಡೆಯಲು ಇರುವ ಭದ್ರ ಬುನಾದಿಯಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !