ನೇಪಾಳ: ಮುಸ್ಲಿಮರಿಂದ ಹಿಂದೂ ವಿರೋಧಿ ವಿಡಿಯೋ ಪ್ರಸಾರ: ಮಸೀದಿ ಧ್ವಂಸ

ಮುಸ್ಲಿಮರಿಂದ ಹಿಂಸಾಚಾರ; 7 ಪೊಲೀಸರಿಗೆ ಗಾಯ

ಕಾಠ್ಮಂಡು (ನೇಪಾಳ) – ಭಾರತದ ಗಡಿಯ ಸಮೀಪವಿರುವ ನೇಪಾಳದ ಧನುಷಾ ಜಿಲ್ಲೆಯಲ್ಲಿ, ಮುಸ್ಲಿಮರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂದೂ ವಿರೋಧಿ ವಿಡಿಯೋ ಪ್ರಸಾರವಾದ ನಂತರ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆ ಡಿಸೆಂಬರ್ ೪ ರಂದು ಸಂಭವಿಸಿದೆ. ಈ ಘಟನೆಯ ನಂತರ ಮುಸ್ಲಿಮರು ಸಹ ಹಿಂಸಾಚಾರ ನಡೆಸಿದರು. ಈ ಹಿಂಸಾಚಾರದಲ್ಲಿ ೭ ಪೊಲೀಸರು ಗಾಯಗೊಂಡರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ಯಾವುದೇ ಕೃತ್ಯಗಳಲ್ಲಿ ಜನರು ಭಾಗಿಯಾಗದಂತೆ ಜಿಲ್ಲಾಧಿಕಾರಿ ಭೋಲಾ ದಾಹಾಲ್ ಅವರು ಮನವಿ ಮಾಡಿದ್ದಾರೆ. ‘ಟಿಕ್‌ಟಾಕ್’ ಆ್ಯಪ್‌ನಲ್ಲಿ ವಿಡಿಯೋ ಪ್ರಸಾರ ಮಾಡಿದ್ದ ಮತ್ತು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ೩ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮುಸ್ಲಿಂ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ವಿರೋಧಿ ವಿಷಯವನ್ನು ಪ್ರಸಾರ ಮಾಡಿದ್ದಾರೆಂಬ ಆರೋಪವಿದೆ.

ಸಂಪಾದಕೀಯ ನಿಲುವು

ಹಿಂದೂಗಳ ವಿರುದ್ಧ ವಿಡಿಯೋ ಪ್ರಸಾರ ಮಾಡಿದ್ದಲ್ಲದೆ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!