ಬಾಂಗ್ಲಾದೇಶಿ ಆಟಗಾರ ಮುಸ್ತಫಿಜುರ್ ರೆಹಮಾನ್‌ನನ್ನು ತಂಡದಿಂದ ಕೈಬಿಡಿ! – BCCI Orders KKR

  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಭಾರತೀಯ ಹಿಂದೂಗಳು ನಡೆಸಿದ ಪ್ರತಿಭಟನೆಯ ಪರಿಣಾಮ!

  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ‘ಕೋಲಕಾತಾ ನೈಟ್ ರೈಡರ್ಸ್’ ತಂಡಕ್ಕೆ ಆದೇಶ!

ಮುಂಬಯಿ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ, ‘ಇಂಡಿಯನ್ ಪ್ರೀಮಿಯರ್ ಲೀಗ್’ (IPL) ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಕೋಲಕಾತಾ ನೈಟ್ ರೈಡರ್ಸ್’ ತಂಡದ ಪರವಾಗಿ ಆಡುತ್ತಿರುವ ಬಾಂಗ್ಲಾದೇಶಿ ಆಟಗಾರ ಮುಸ್ತಫಿಜುರ್ ರೆಹಮಾನ್‌ನನ್ನು ವಜಾಗೊಳಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿತ್ತು. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಬಿಸಿಸಿಐ ಕೋಲಕಾತಾ ನೈಟ್ ರೈಡರ್ಸ್ ತಂಡಕ್ಕೆ ರೆಹಮಾನ್‌ನನ್ನು ತಂಡದಿಂದ ತೆಗೆದುಹಾಕುವಂತೆ ಆದೇಶ ನೀಡಿದೆ. ನಟ ಶಾರುಖ್ ಖಾನ್ ಈ ತಂಡದ ಮಾಲೀಕರಾಗಿದ್ದಾರೆ. ರೆಹಮಾನ್‌ನನ್ನು ತಂಡದ ಪರ ಆಡಲು 9 ಕೋಟಿ 20 ಲಕ್ಷ ರೂಪಾಯಿಗಳಿಗೆ ಖರೀದಿಸಲಾಗಿತ್ತು.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಸುದ್ದಿ ಸಂಸ್ಥೆಗೆ ತಿಳಿಸಿರುವಂತೆ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಬಿಸಿಸಿಐ ಕೋಲಕಾತಾ ನೈಟ್ ರೈಡರ್ಸ್ ತಂಡದಿಂದ ರೆಹಮಾನ್‌ನನ್ನು ಕೈಬಿಡಲು ಆದೇಶಿಸಿದೆ. ಒಂದು ವೇಳೆ ಕೋಲಕಾತಾ ನೈಟ್ ರೈಡರ್ಸ್ ತಂಡವು ಬದಲಿ ಆಟಗಾರನಿಗಾಗಿ ಬೇಡಿಕೆ ಇಟ್ಟರೆ, ಬಿಸಿಸಿಐ ಅದಕ್ಕೆ ಅನುಮತಿ ನೀಡಲಿದೆ ಎಂದು ತಿಳಿಸಿದೆ.

ಐಪಿಎಲ್ ನಿಯಮಗಳ ಪ್ರಕಾರ, ಒಂದು ತಂಡವು ಸ್ವತಃ ಆಟಗಾರನನ್ನು ಕೈಬಿಟ್ಟರೆ ಅವನಿಗೆ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ; ಆದರೆ ತಂಡ ಮತ್ತು ಆಟಗಾರನ ನಡುವೆ ಪರಸ್ಪರ ಒಪ್ಪಿಗೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡರೆ ಯಾವುದಾದರೂ ಪರಿಹಾರ ಕಂಡುಕೊಳ್ಳಬಹುದು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾಹಿತಿ ಇದ್ದರೂ ಸಹ, ನಟ ಶಾರುಖ್ ಖಾನ್ ಅವರು ರೆಹಮಾನ್‌ನನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಹೇಗೆ? ಇದು ಖಾನ್ ಅವರ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ನಟರು ಹಿಂದೂಗಳ ಬೆಂಬಲದಿಂದಲೇ ದೊಡ್ಡವರಾಗಿದ್ದಾರೆ ಎಂಬದನ್ನು ಸದಾ ಮರೆಯುತ್ತಾರೆ, ಆದ್ದರಿಂದ ಈಗ ಹಿಂದೂಗಳು ಅವರಿಗೆ ಅದನ್ನು ನೆನಪಿಸಿಕೊಡಬೇಕು!