ಚಲನ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಚೀನಾ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಟೀಕೆ
(ಟೀಸರ್ ಎಂದರೆ ಸಣ್ಣ ಜಾಹೀರಾತು)

ನವ ದೆಹಲಿ – ನಟ ಸಲ್ಮಾನ್ ಖಾನ್ ಅವರ ‘ಬ್ಯಾಟಲ್ ಆಫ್ ಗಲ್ವಾನ್’ ಎಂಬ ಹಿಂದಿ ಚಲನಚಲನ ಚಿತ್ರವು ಶೀಘ್ರದಲ್ಲೇ ತೆರೆಕಾಣಲಿದೆ. ಇತ್ತೀಚೆಗಷ್ಟೇ ಇದರ ಟೀಸರ್ ಬಿಡುಗಡೆಯಾಗಿದೆ. ಈ ಚಲನ ಚಿತ್ರವು 2020ರಲ್ಲಿ ಲಡಾಖ್‌ನ ಚೀನಾ ಗಡಿಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಆಧಾರಿತವಾಗಿದೆ. ಟೀಸರ್ ಬಿಡುಗಡೆಯಾದ ಕೂಡಲೇ ಚೀನಾದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’, “ಈ ಚಲನ ಚಿತ್ರವು ಸತ್ಯಾಂಶಗಳನ್ನು ತಿರುಚಿ ಏಕಪಕ್ಷೀಯ ಕಥೆಯನ್ನು ತೋರಿಸುತ್ತಿದೆ” ಎಂದು ಆರೋಪಿಸಿದೆ. ಅಲ್ಲದೆ, “ಈ ಚಲನ ಚಿತ್ರದಿಂದ ಭಾರತ-ಚೀನಾ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗಬಹುದು” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.
China rattled by Salman Khan’s Battle of Galwan 🇮🇳🎬
Soon after the teaser dropped, China’s state-controlled mouthpiece lashed out at the film.
When a movie is set to expose China’s provocations and India’s firm response, panic in Beijing is natural.
A deceitful regime being… pic.twitter.com/09bxyECAa5
— Sanatan Prabhat (@SanatanPrabhat) December 30, 2025
1. ‘ಗ್ಲೋಬಲ್ ಟೈಮ್ಸ್’ ಪ್ರಕಟಿಸಿದ ಲೇಖನದಲ್ಲಿ, ‘ಬ್ಯಾಟಲ್ ಆಫ್ ಗಲ್ವಾನ್’ ಚಲನ ಚಿತ್ರದಲ್ಲಿ ಸಂಘರ್ಷದ ನೈಜ ಪರಿಸ್ಥಿತಿಯನ್ನು ಬದಲಾಯಿಸಿ ತೋರಿಸಲಾಗಿದ್ದು, ಅದರಲ್ಲಿ ಭಾರತದ ಪರವಾದ ದೃಷ್ಟಿಕೋನವನ್ನು ಮಂಡಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ.
2. ಚೀನಾದ ತಥಾಕಥಿತ ಸೇನಾ ವಿಶ್ಲೇಷಕರ ಪ್ರಕಾರ, ಇಂತಹ ಚಲನ ಚಿತ್ರಗಳಿಂದ ವಾಸ್ತವ ಬದಲಾಗುವುದಿಲ್ಲ; ಆದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
3. ಈ ಲೇಖನದ ಮೂಲಕ ಚೀನಾ ಮತ್ತೊಮ್ಮೆ ಗಲ್ವಾನ್ ಸಂಘರ್ಷಕ್ಕೆ ಭಾರತವನ್ನೇ ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸಿದೆ ಮತ್ತು ತನ್ನ ಸೈನಿಕರು ಕೇವಲ ‘ರಕ್ಷಣಾತ್ಮಕ’ ಪಾತ್ರವನ್ನು ವಹಿಸಿದ್ದರು ಎಂದು ವಾದಿಸಿದೆ.
ಭಾರತೀಯ ಸೈನಿಕರ ಶೌರ್ಯದ ಚರ್ಚೆಯು ಚೀನಾವನ್ನು ಅಸ್ವಸ್ಥಗೊಳಿಸುತ್ತಿದೆ
ಗಲ್ವಾನ್‌ನಲ್ಲಿ ಭಾರತೀಯ ಸೈನಿಕರು ತೋರಿದ ಪರಾಕ್ರಮ ಮತ್ತು ಬಲಿದಾನದ ಕಥೆಯು ವ್ಯಾಪಕವಾಗಿ ಜಗತ್ತಿಗೆ ತಿಳಿದರೆ, ‘ಚೀನಾದ ಅಸಲಿ ಮುಖವಾಡ ಕಳಚಿಬೀಳುತ್ತದೆ’ ಎಂಬ ಭಯ ಅವರಿಗಿದೆ. ಆದ್ದರಿಂದ ಈ ಚಲನ ಚಿತ್ರವನ್ನು ‘ಪ್ರಚಾರದ ಚಲನ ಚಿತ್ರ’ (Propaganda) ಎಂದು ಕರೆಯಲು ಪ್ರಯತ್ನಿಸಲಾಗುತ್ತಿದೆ. ಚೀನಾ ಇಂದಿಗೂ ಸತ್ಯವನ್ನು ಒಪ್ಪಿಕೊಳ್ಳುವ ಬದಲು ವಿಷಯಗಳಿಗೆ ಬೇರೆ ಬಣ್ಣ ಬಳಿಯುವ ತನ್ನ ನಿಲುವಿಗೆ ಅಂಟಿಕೊಂಡಿದೆ ಎಂಬುದು ‘ಗ್ಲೋಬಲ್ ಟೈಮ್ಸ್’ ಲೇಖನದಿಂದ ಸ್ಪಷ್ಟವಾಗುತ್ತದೆ.
ಸಂಪಾದಕೀಯ ನಿಲುವುಚಲನ ಚಿತ್ರದಲ್ಲಿ ಚೀನಾದ ಕುತಂತ್ರಗಳು ಮತ್ತು ಅದಕ್ಕೆ ಭಾರತ ನೀಡಿದ ಪ್ರತ್ಯುತ್ತರದ ನೈಜ ಘಟನೆಗಳನ್ನು ತೋರಿಸಲಾಗುತ್ತಿದೆ. ಸುಳ್ಳುಗಾರ ಚೀನಾಗೆ ಇದರಿಂದ ಹೊಡೆತ ಬೀಳುವುದು ಖಚಿತ! ಹಾಗಾಗಿ ಅವರು ಆಕ್ರೋಶ ವ್ಯಕ್ತಪಡಿಸುವುದರಲ್ಲಿ ಆಶ್ಚರ್ಯವೇನಿದೆ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ