
ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದಿನ ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಅಂಗೀಕರಿಸಲ್ಪಟ್ಟಿದ್ದ, ಮದರಸಾ ಶಿಕ್ಷಕರನ್ನು ಕಾನೂನು ಕ್ರಮದಿಂದ ರಕ್ಷಿಸುವ ವಿಧೇಯಕವನ್ನು ಈಗಿನ ಯೋಗಿ ಆದಿತ್ಯನಾಥ ಸರಕಾರವು ಹಿಂಪಡೆದಿದೆ. ಈ ವಿಧೇಯಕದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು ಮತ್ತು ಮದರಸಾಗಳಿಗೆ ಅಪರಿಮಿತ ಅಧಿಕಾರಗಳನ್ನು ನೀಡಲಾಗಿತ್ತು.
೧. ಸಚಿವ ಓಂ ಪ್ರಕಾಶ ರಾಜಭರ ಅವರು ಮಾತನಾಡುತ್ತಾ, ೨೦೦೬ ರಲ್ಲಿ ಉತ್ತರಪ್ರದೇಶ ಮದರಸಾ ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ವೇತನ ವಿಧೇಯಕವನ್ನು ಅಂಗೀಕರಿಸಲಾಗಿತ್ತು ಎಂದು ತಿಳಿಸಿದರು.
೨. ಈ ವಿಧೇಯಕದ ಪ್ರಕಾರ, ಮದರಸಾದ ಯಾವುದೇ ಶಿಕ್ಷಕ ಅಥವಾ ಸಿಬ್ಬಂದಿಯ ವಿರುದ್ಧ ತನಿಖೆ ಅಥವಾ ಮೊಕದ್ದಮೆಯನ್ನು ದಾಖಲಿಸಲು ಅವಕಾಶವಿರಲಿಲ್ಲ. ವೇತನ ನೀಡುವಲ್ಲಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗೆ ಶಿಕ್ಷೆ ನೀಡುವ ಸೌಲಭ್ಯವೂ ಈ ವಿಧೇಯಕದಲ್ಲಿತ್ತು.
೩. ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ನಂತರ, ಅಂದಿನ ರಾಜ್ಯಪಾಲ ರಾಮ ನಾಯ್ಕ ಅವರು ಈ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.
೪. ಈ ವಿಧೇಯಕವು ಸಂವಿಧಾನದ ಚೌಕಟ್ಟಿನಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ಕಾರಣದಿಂದಾಗಿ ಸಮಾಜವಾದಿ ಪಕ್ಷದ ಸರಕಾರದ ಕಾಲದಲ್ಲಿ ಈ ವಿಧೇಯಕವು ಜಾರಿಗೆ ಬರಲು ಸಾಧ್ಯವಾಗಿರಲಿಲ್ಲ.
೫. ೨೦೧೭ ರಲ್ಲಿ ಅಧಿಕಾರಕ್ಕೆ ಬಂದ ಭಾಜಪ ಸರಕಾರಕ್ಕೆ ರಾಷ್ಟ್ರಪತಿಗಳು ಈ ವಿಧೇಯಕವನ್ನು ಮರಳಿ ಕಳುಹಿಸಿದರು.
೬. ಅನೇಕ ಲೋಪದೋಷಗಳಿದ್ದ ಕಾರಣ, ಕೇಂದ್ರ ಸರಕಾರವು ಸಂವಿಧಾನದ ಚೌಕಟ್ಟಿಗೆ ಅನುಗುಣವಾಗಿ ಹೊಸ ವಿಧೇಯಕವನ್ನು ತರುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಈಗ ರಾಜ್ಯ ಸಚಿವ ಸಂಪುಟವು ಈ ಹಳೆಯ ವಿಧೇಯಕವನ್ನು ಹಿಂಪಡೆಯುವ ಪ್ರಸ್ತಾವನೆಗೆ ಸಮ್ಮತಿ ನೀಡಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ