
ಪ್ರಯಾಗರಾಜ್ (ಉತ್ತರ ಪ್ರದೇಶ) – ಗುಸ್ತಾಖ್-ಎ-ನಬಿ (ಪೈಗಂಬರರ ಅಪಮಾನ ಮಾಡುವವರಿಗೆ) ಶಿಕ್ಷೆಯೆಂದು ‘ಸರ್ ತನ್ ಸೆ ಜುದಾ’ ಘೋಷಣೆಗಳನ್ನು ಕೂಗುವುದು ಕೇವಲ ಕಾನೂನು ವಿರೋಧಿ ಮಾತ್ರವಲ್ಲ, ಇದು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಗೆ ನೇರ ಸವಾಲಾಗಿದೆ. ಇಂತಹ ಘೋಷಣೆಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಧಾರ್ಮಿಕ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲ. ಇವು ಸಾಮಾನ್ಯ ನಾಗರಿಕರನ್ನು ಹಿಂಸೆ ಮತ್ತು ಸಶಸ್ತ್ರ ದಂಗೆಗೆ ಪ್ರಚೋದಿಸುವಂತಿವೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಅರುಣ ಕುಮಾರ ಸಿಂಗ್ ದೇಶವಾಲ ಅವರ ಏಕಸದಸ್ಯ ಪೀಠವು ಬರೇಲಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಬಂಧಿತನಾಗಿದ್ದ ರಿಹಾನ್ ಎಂಬಾತನ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ ಈ ಮಾತನ್ನು ಹೇಳಿತು.
ನ್ಯಾಯಾಲಯವು,
೧. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ; ಆದರೆ ಇದಕ್ಕೆ ಸ್ಪಷ್ಟವಾದ ಸಾಂವಿಧಾನಿಕ ಮಿತಿಗಳಿವೆ. ಒಂದು ಗುಂಪು ಕಾನೂನನ್ನು ಕೈಗೆತ್ತಿಕೊಂಡು ಶಿರಚ್ಛೇದದಂತಹ ಮರಣದಂಡನೆಗೆ ಆಗ್ರಹಿಸುವಾಗ ಅದು ನೇರವಾಗಿ ಕಾನೂನಿನ ಅವಮಾನವಾಗುತ್ತದೆ. ಇಸ್ಲಾಂ ಧರ್ಮದ ಹೆಸರಿನಲ್ಲಿ ನೀಡಲಾಗುವ ಇಂತಹ ಹಿಂಸಾತ್ಮಕ ಘೋಷಣೆಗಳು ವಾಸ್ತವದಲ್ಲಿ ಮಹಮ್ಮದ್ ಪೈಗಂಬರರ ಆದರ್ಶಗಳಿಗೂ ವಿರುದ್ಧವಾಗಿವೆ.
೨. ಮಹಮ್ಮದ್ ಪೈಗಂಬರರು ತಮ್ಮ ಜೀವನದಲ್ಲಿ ಅಪಮಾನ ಮತ್ತು ಯಾತನೆಗಳನ್ನು ಅನುಭವಿಸಿದರೂ ದಯೆ, ಕರುಣೆ ಮತ್ತು ಕ್ಷಮಾಶೀಲತೆಯ ಮಾರ್ಗವನ್ನೇ ಅನುಸರಿಸಿದ್ದರು. ಅವರು ತಾಯಿಫ್ ನಗರಕ್ಕೆ ಹೋದಾಗ ಅಲ್ಲಿನ ಮುಸ್ಲಿಮೇತರ ನೆರೆಯ ಮಹಿಳೆಯೊಬ್ಬಳು ಅವರ ಹಾದಿಯಲ್ಲಿ ಕಸ ಹಾಕಿ ತೊಂದರೆ ಕೊಡುತ್ತಿದ್ದಳು. ಆದರೂ ಪೈಗಂಬರರು ಎಂದಿಗೂ ಪ್ರತಿಕ್ರಿಯಿಸಲಿಲ್ಲ. ಆ ಮಹಿಳೆ ಅನಾರೋಗ್ಯಕ್ಕೆ ಒಳಗಾದಾಗ ಪೈಗಂಬರರು ಅವಳನ್ನು ಭೇಟಿಯಾಗಲು ಹೋಗಿದ್ದರು. ಇದರ ಪರಿಣಾಮವಾಗಿ ಆ ಮಹಿಳೆಯು ಇಸ್ಲಾಂ ಧರ್ಮವನ್ನು ಸ್ವೀಕರಿಸಿದಳು. ಈ ಕೃತಿಯಿಂದ ಕೆಟ್ಟದ್ದನ್ನು ಒಳ್ಳೆಯತನದಿಂದ ದೂರ ಮಾಡುವ ಪೈಗಂಬರರ ದೃಢ ಸಿದ್ಧಾಂತವು ಕಂಡುಬರುತ್ತದೆ. ಆದ್ದರಿಂದ ಅಪಮಾನ ಮಾಡುವವರ ಶಿರಚ್ಛೇದ ಮಾಡುವ ಘೋಷಣೆ ನೀಡುವುದು ಮಹಮ್ಮದ್ ಪೈಗಂಬರರ ಆದರ್ಶಗಳಿಗೂ ಅಪಮಾನವೇ ಆಗಿದೆ.
೩. ‘ಸರ್ ತನ್ ಸೆ ಜುದಾ’ ಘೋಷಣೆಗಳ ಉಗಮವು ಭಾರತದ ಸಾಂಸ್ಕೃತಿಕ, ಕಾನೂನುಬದ್ಧ ಅಥವಾ ಧಾರ್ಮಿಕ ಪರಂಪರೆಗಳಿಗೆ ಸಂಬಂಧಿಸಿದ್ದಲ್ಲ. ಅವು ನೆರೆಯ ದೇಶದ ದೇವನಿಂದೆಯ ಕಾನೂನುಗಳಿಂದ ಮತ್ತು ಅಲ್ಲಿನ ಹಿಂಸಾತ್ಮಕ ಘಟನೆಗಳಿಂದ ಪ್ರಭಾವಿತವಾಗಿವೆ. ‘ನಾರಾ-ಎ-ತಕ್ಬೀರ್’ ಅಥವಾ ‘ಜೈ ಶ್ರೀರಾಮ್’ ಅಂತಹ ಧಾರ್ಮಿಕ ಘೋಷಣೆಗಳಿಗೂ ಮತ್ತು ಹಿಂಸೆಗೆ ಪ್ರಚೋದಿಸುವ ಘೋಷಣೆಗಳಿಗೂ ಸ್ಪಷ್ಟವಾದ ವ್ಯತ್ಯಾಸವಿದೆ. ಧಾರ್ಮಿಕ ಘೋಷಣೆಗಳನ್ನು ದುರುದ್ದೇಶಪೂರ್ವಕವಾಗಿ ಜನರನ್ನು ಹೆದರಿಸಲು ಅಥವಾ ಹಿಂಸೆಯನ್ನು ಪ್ರಚೋದಿಸಲು ಬಳಸದಿದ್ದರೆ, ಅವು ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ.
ಸಂಪಾದಕೀಯ ನಿಲುವುಇಂತಹ ಘೋಷಣೆಗಳನ್ನು ದೇಶದಲ್ಲಿ ನಿಷೇಧಿಸಿ, ಈ ಘೋಷಣೆ ಹೇಳುವವರಿಗೆ ಆಜೀವ ಕಾರಾಗೃಹ ಶಿಕ್ಷೆ ವಿಧಿಸುವ ಕಾನೂನು ತರುವುದು ಆವಶ್ಯಕವಾಗಿದೆ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ