ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ಗುಜರಾತಿನ ಶಂಖತಜ್ಞ ಶ್ರೀ ಸಮೀರ್ ಪಾಂಡ್ಯ ಅವರು ಡಿಸೆಂಬರ್ ೧೪ ರಂದು ಶಂಖನಾದ ಮಹೋತ್ಸವದ ಆರಂಭದಲ್ಲಿ ಕೆಲವು ನಿಮಿಷಗಳ ಕಾಲ ವಿಶಿಷ್ಟವಾದ ಶಂಖನಾದವನ್ನು ಮಾಡಿದರು. ಅವರ ಈ ಶಂಖನಾದ ಕೇಳಿ ಸಭೆಯಲ್ಲಿದ್ದವರು ಜೋರಾದ ಚಪ್ಪಾಳೆಯೊಂದಿಗೆ ಪ್ರತಿಕ್ರಿಯಿಸಿದರು. ಸಮೀರ್ ಪಾಂಡ್ಯ ಅವರು ಶಂಖದ ಬಗ್ಗೆ ವಿಶೇಷ ಸಂಶೋಧನೆ ನಡೆಸಿದ್ದಾರೆ. ಅವರು ಗುಜರಾತಿನ ಕಾಲೇಜಿನಲ್ಲಿ ಶಂಖನಾದ ಚಿಕಿತ್ಸೆ ಮತ್ತು ಶಂಖ ವಿಜ್ಞಾನ ಶಾಸ್ತ್ರದ ಕುರಿತು ಮಾರ್ಗದರ್ಶನ ನೀಡುತ್ತಾರೆ. ಅವರು ಶಂಖನಾದದ ಮೂಲಕ ಚಿಕಿತ್ಸೆಯನ್ನೂ ಮಾಡುತ್ತಾರೆ. “ಇಂದು ನಾನು ಮಾಡುವ ಶಂಖನಾದವು ಸೂಕ್ಷ್ಮ ಪರಿಣಾಮವನ್ನು ಬೀರುತ್ತದೆ ಮತ್ತು ನನಗೆ ನಿಮ್ಮೆಲ್ಲರ ಆಶೀರ್ವಾದವೂ ಸಿಗುತ್ತದೆ!” ಎಂದು ಶಂಖನಾದ ಮಾಡುವ ಮೊದಲು ಶ್ರೀ. ಪಾಂಡ್ಯ ಹೇಳಿದರು.
‘ಭಾರತ್ ಮಂಡಪಂ’ ಸನಾತನ ರಾಷ್ಟ್ರಮಯವಾಯಿತು!
‘ಭಾರತ್ ಮಂಡಪಂ’ನಲ್ಲಿ ಸಾಮಾನ್ಯವಾಗಿ ಕೈಗಾರಿಕೆಗಳು, ಹೂಡಿಕೆ ಮತ್ತು ಸ್ವಲ್ಪ ಮಟ್ಟಿಗೆ ಆಧ್ಯಾತ್ಮಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೈಗಾರಿಕೆ, ಹೂಡಿಕೆಗಳ ಸಮಾವೇಶಗಳು, ಸಭೆಗಳಿಗೆ ‘ಭಾರತ್ ಮಂಡಪಂ’ ಪ್ರಸಿದ್ಧವಾಗಿದೆ; ಆದರೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಿಮಿತ್ತ ಮಂಡಪಂನಲ್ಲಿರುವ ಸ್ಟ್ಯಾಂಡೀ ಬ್ಯಾನರ್‌ಗಳು, ‘ಡಿಸ್‌ಪ್ಲೇ ಬೋರ್ಡ್’ಗಳು, ಊಟದ ಕೋಣೆಯ ಸಮೀಪವಿರುವ ಚಿಕ್ಕ ‘ಸ್ಕ್ರೀನ್’ಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಹಾಗೂ ಸನಾತನ ರಾಷ್ಟ್ರದ ಮಾಹಿತಿಯಿರುವ ಫಲಕಗಳಿಂದಾಗಿ ‘ಭಾರತ್ ಮಂಡಪಂ’ ಸನಾತನ ರಾಷ್ಟ್ರಮಯವಾಗಿತ್ತು.
‘ಜೈ ಶ್ರೀರಾಮ್’ ಘೋಷಣೆಯಿಂದ ಮೊಳಗಿದ ‘ಭಾರತ್ ಮಂಡಪಂ’

ಡಿಸೆಂಬರ್ ೧೪ ರಂದು ಉದ್ಘಾಟನೆ, ಗ್ರಂಥ ಪ್ರಕಟಣೆ ಮತ್ತು ಗಣ್ಯರ ಮಾರ್ಗದರ್ಶನದ ಅವಧಿ ಮುಗಿದ ನಂತರ ನಾಲ್ಕನೇ ಮಹಡಿಯ ಸಭಾಂಗಣದಿಂದ ಹೊರಬರುತ್ತಿದ್ದ ಹಿಂದೂತ್ವವಾದಿಗಳು ಚಲಿಸುವ ಮೆಟ್ಟಿಲುಗಳಿಂದ (ಎಸ್ಕೆಲೇಟರ್) ಇಳಿಯುವಾಗ, ‘ಭಾರತ್ ಮಂಡಪಂ’ ಕಟ್ಟಡದ ವಿವಿಧ ಮಹಡಿಗಳಲ್ಲಿ, ಕಟ್ಟಡದ ಹೊರಗೆ ಹೋಗುವಾಗ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಹೊರಟರು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಹಿಂದೂತ್ವವಾದಿಗಳು ಬಹಳ ಉತ್ಸಾಹಿತರಾಗಿದ್ದರು, ಸಂತೃಪ್ತರಾಗಿದ್ದರು ಮತ್ತು ಎಲ್ಲರ ಮುಖದಲ್ಲಿಯೂ ‘ಕಾರ್ಯಕ್ರಮದಿಂದ ಬಹಳಷ್ಟು ಏನೋ ಲಭಿಸಿತು’ ಎಂಬ ಭಾವವಿತ್ತು.
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಮಾಧ್ಯಮಗಳ ಭರ್ಜರಿ ಪ್ರತಿಕ್ರಿಯೆ!೭೮ ಪ್ರತಿನಿಧಿಗಳು ಉಪಸ್ಥಿತ!ಶಂಖನಾದ ಮಹೋತ್ಸವಕ್ಕಾಗಿ ‘ಎಬಿಪಿ ಲೈವ್’, ‘ಎಬಿಪಿ ನ್ಯೂಸ್’, ‘ಟೈಮ್ಸ್ ನೌ’, ‘ರಿಪಬ್ಲಿಕ್ ಭಾರತ್’, ‘ಸಿ.ಎನ್.ಎನ್. ಐ.ಬಿ.ಎನ್.’, ‘ನ್ಯೂಸ್ ೧೮’ ಮುಂತಾದ ಪ್ರಸಿದ್ಧ ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳ ೭೮ ಪ್ರತಿನಿಧಿಗಳು ಡಿಸೆಂಬರ್ ೧೩ ರಂದು ವರದಿ ಮತ್ತು ವಿಶೇಷ ವರದಿ (ಸ್ಪೆಷಲ್ ಸ್ಟೋರಿ) ಮಾಡಲು ಆಗಮಿಸಿದ್ದರು. ‘ರಿಪಬ್ಲಿಕ್ ಭಾರತ್’ ವಾಹಿನಿಯು ಮಹೋತ್ಸವದ ನೇರ ಪ್ರಸಾರವನ್ನು ತಮ್ಮ ‘ಡಿಜಿಟಲ್’ ವಾಹಿನಿಯ ಮೂಲಕ ಮಾಡಿತು. ‘ಎಬಿಪಿ ನ್ಯೂಸ್’ನಿಂದ ಮಹೋತ್ಸವದ ಪ್ರಸಾರ‘ಎಬಿಪಿ ನ್ಯೂಸ್’ ಸುದ್ದಿವಾಹಿನಿಯು ಬೆಳಗಿನ ಅಧಿವೇಶನದಲ್ಲಿ ಶಸ್ತ್ರ ಪ್ರದರ್ಶನ ಮತ್ತು ಇತರ ಪ್ರದರ್ಶನಗಳ ವಿವರವಾದ ವರದಿಯನ್ನು ನೀಡಿತು. ಇದರಿಂದ ಕಾರ್ಯಕ್ರಮವು ಅವರ ವೀಕ್ಷಕರಾದ ಕೋಟ್ಯಂತರ ಜನರನ್ನು ತಲುಪಿತು. |
ವಿಶಿಷ್ಟ ಕ್ಷಣಗಳು

೧. ಡಿಸೆಂಬರ್ ೧೪ ರಂದು ಕಾರ್ಯಕ್ರಮವು ‘ಪ್ಲಾನೆಟರಿ ಹಾಲ್’ನಲ್ಲಿ ನಡೆಯಿತು. ಈ ಸಭಾಂಗಣದಲ್ಲಿ ಕಾರ್ಯಕ್ರಮದ ಪ್ರವೇಶದ್ವಾರಗಳಿಗೆ ವಿಶಿಷ್ಟ ಹೆಸರುಗಳನ್ನು ನೀಡಲಾಗಿತ್ತು. ಶಂಖದ್ವಾರ, ಕಮಲದ್ವಾರ, ಸ್ವಸ್ತಿಕದ್ವಾರ, ಕಲಶದ್ವಾರ, ತ್ರಿಶೂಲದ್ವಾರ, ಧನುಷ್ಯದ್ವಾರ, ಗದಾ ದ್ವಾರ ಎಂದು ಹೆಸರಿಸಲಾಗಿತ್ತು.
೨. ಮಹೋತ್ಸವದ ಸ್ಥಳದ ಒಂದು ಪ್ರವೇಶದ್ವಾರದಲ್ಲಿ ಕಪ್ಪು ಬಣ್ಣದ ನಾಯಿ ಬಂದಿತ್ತು. ಅದರ ಮೂಲಕ ಶ್ರೀ ಕಾಲಭೈರವ ದೇವರು ದರ್ಶನ ನೀಡಿ ಆಶೀರ್ವಾದ ಮಾಡಿದ್ದಾರೆ ಎಂದು ಒಬ್ಬ ಸಾಧಕರಿಗೆ ಅನಿಸಿತು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ