ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
ಶಂಖನಾದ ಮಹೋತ್ಸವದಲ್ಲಿ ನಡೆದ ಚರ್ಚಾಗೋಷ್ಠಿಯಲ್ಲಿ ಗಣ್ಯ ವಕ್ತಾರರ ಸರ್ವಾನುಮತ!

ನವದೆಹಲಿ, ಡಿಸೆಂಬರ್ 14 (ವಾರ್ತೆ) – ಸನಾತನ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೇ ಪರಿಸರದ ಬಗ್ಗೆ ಯೋಚಿಸಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಮರಗಳು, ಪರ್ವತಗಳು ಮತ್ತು ನದಿಗಳಿಗೆ ದೇವತೆಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ, ಸನಾತನ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಪರಿಸರದ ರಕ್ಷಣೆ ಆಗೇ ಆಗುತ್ತದೆ ಎಂದು ಈ ಚರ್ಚಾಗೋಷ್ಠಿಯಲ್ಲಿ ಎಲ್ಲಾ ಗಣ್ಯರು ಒಮ್ಮತದಿಂದ ಸ್ವೀಕರಿಸಿದರು. ‘ಸನಾತನ ಸಂಸ್ಕೃತಿ, ಪರಿಸರ ಮತ್ತು ಇತಿಹಾಸದ ರಕ್ಷಣೆ’ ಎಂಬ ವಿಷಯದ ಕುರಿತು ನಡೆದ ಚರ್ಚಾಗೋಷ್ಠಿಯಲ್ಲಿ ಗಣ್ಯರು ಭಾಗವಹಿಸಿದ್ದರು. ಈ ಚರ್ಚಾಗೋಷ್ಠಿಯನ್ನು ‘ಜಂಬೂ ಟಾಕ್ಸ್’ ಸಂಪಾದಕರಾದ ಶ್ರೀ. ನಿಧೀಶ್ ಗೋಯಲ್ ಅವರು ನಡೆಸಿಕೊಟ್ಟರು. ಈ ಚರ್ಚಾಗೋಷ್ಠಿಯಲ್ಲಿ ಹರಿಯಾಣದ ಬಾಲಾಜಿ ಕಾಲೇಜಿನ ಶ್ರೀ. ಜಗದೀಶ ಚೌಧರಿ, ಉದಯಪುರದ ‘ಪ್ರತಾಪ್ ಗೌರವ ಕೇಂದ್ರ’ದ ಶ್ರೀ. ಅನುರಾಗ್ ಸಕ್ಸೇನಾ ಮತ್ತು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರೊ. ರಾಮಾದೇವಿ ಅವರು ಭಾಗವಹಿಸಿದ್ದರು.
ಸನಾತನವನ್ನು ಅಳವಡಿಸಿಕೊಂಡರೆ ಪರಿಸರಕ್ಕೆ ಹಾನಿಯಾಗುವುದಿಲ್ಲ! – ಜಗದೀಶ್ ಚೌಧರಿ
ವ್ಯಕ್ತಿಯು ಯಾವಾಗ ಆಧುನಿಕದೆಡೆ ಸಾಗುತ್ತಾನೆ, ಆಗ ಸಮಸ್ಯೆಗಳು ಉದ್ಭವಿಸುತ್ತವೆ. ಈಗ ಮನುಷ್ಯರು ‘ಅಲ್ಟ್ರಾ ಮಾಡರ್ನ್’ ಆಗುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳು ಬರಲಿವೆ. ದೆಹಲಿಯಲ್ಲಿ ವ್ಯಕ್ತಿ ಎಷ್ಟು ದೊಡ್ಡವನಾಗುತ್ತಾನೋ, ಅಷ್ಟು ಹೆಚ್ಚು ಕಸವನ್ನು ಆತನ ಮನೆಯಿಂದ ಹೊರಹಾಕಲಾಗುತ್ತದೆ. ದೆಹಲಿಯ ನಾಲ್ಕೂ ಮುಖ್ಯ ರಸ್ತೆಗಳ ಗಡಿಗಳಲ್ಲಿ ಕಸದ ರಾಶಿಗಳು ಸಂಗ್ರಹವಾಗಿವೆ. ಆ ಗಡಿಗಳಲ್ಲಿರುವ ಕಸವನ್ನು ತೆಗೆದುಹಾಕಲು ನಾನು ಹರಿಯಾಣ ಸರಕಾರದ ವಿರುದ್ಧ ಮೊಕದ್ದಮೆ ಹೂಡಿದ್ದೆ. ಕಸದ ಸಮಸ್ಯೆ ದೊಡ್ಡದಾಗಿದೆ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ. ಸನಾತನವನ್ನು ಅಳವಡಿಸಿಕೊಂಡರೆ ಮಾಲಿನ್ಯವಾಗುವುದಿಲ್ಲ, ಪರಿಸರಕ್ಕೆ ಹಾನಿಯಾಗುವುದಿಲ್ಲ; ಏಕೆಂದರೆ ನಾವು ಮರಗಳು, ನದಿಗಳು ಮತ್ತು ಪರ್ವತಗಳನ್ನು ಪೂಜಿಸುತ್ತೇವೆ.
ಮಹಾರಾಣಾ ಪ್ರತಾಪ್ ಅವರ ನಿಜವಾದ ಇತಿಹಾಸವನ್ನು ಬೆಳಕಿಗೆ ತರಲಾಗುವುದು! – ಅನುರಾಗ ಸಕ್ಸೇನಾ
ಮಹಾರಾಣಾ ಪ್ರತಾಪ ಅವರನ್ನು ಹಿಡಿಯಲು ಮಾನ್ ಸಿಂಹ ಒಂದೂವರೆ ತಿಂಗಳ ಮುಂಚೆಯೇ ಮಹಾರಾಣಾ ಪ್ರತಾಪ ಅವರ ರಾಜ್ಯದ ಬಳಿ ಬೀಡುಬಿಟ್ಟಿದ್ದನು. ಮಹಾರಾಣಾ ಪ್ರತಾಪ ಅವರು ಕೋಪಗೊಂಡು ಹೋರಾಡಲು ಹೊರಗೆ ಬರಲಿ ಮತ್ತು ಅವರನ್ನು ರಾಜ್ಯದ ಹೊರಗೆ ಸೋಲಿಸಬಹುದು ಎಂಬುದು ಇದರ ಉದ್ದೇಶವಾಗಿತ್ತು. ರಾಣಾ ಪ್ರತಾಪ್ ಅವರ ರಾಜ್ಯದ ಭಾಗವು ಪರ್ವತಗಳಿಂದ ಕೂಡಿದ್ದರಿಂದ, ಅಲ್ಲಿ ಪ್ರತಾಪ್ ಅವರೊಂದಿಗೆ ಹೋರಾಡುವುದು ಮತ್ತು ಅವರನ್ನು ಸೋಲಿಸುವುದು ಕಷ್ಟವಾಗಿತ್ತು. ಅಕ್ಬರ್ ಸ್ವತಃ ದೊಡ್ಡ ಪ್ರತಿಜ್ಞೆ ಮಾಡಿ ರಾಣಾ ಪ್ರತಾಪ್ ಅವರನ್ನು ಹಿಡಿಯಲು ದೆಹಲಿಯವರೆಗೆ ಬಂದನು; ಆದರೆ ಸ್ವತಃ ಮುಂದೆ ಹೋಗದೆ ಇತರರನ್ನು ಕಳುಹಿಸಿದನು. ‘ಹಳದಿಘಾಟಿ ಯುದ್ಧದಲ್ಲಿ ಅಕ್ಬರ್‌ನ ಸೇನೆ ಅನೇಕ ಬಾರಿ ಸೋಲುತ್ತಿತ್ತು’ ಎಂದು ಯುದ್ಧದಲ್ಲಿ ಭಾಗವಹಿಸಿದ ಅಕ್ಬರ್‌ನ ಸೈನಿಕನೇ ಬರೆದಿದ್ದಾನೆ. ಹಾಗಾದರೆ ಕೊನೆಯಲ್ಲಿ ಯುದ್ಧವನ್ನು ಸೋತರು ಎಂದು ಹೇಗೆ ಬರೆಯಬಹುದು? ಅಂದರೆ ಮುಖ್ಯ ಇತಿಹಾಸ ಬೇರೆಯೇ ಇದೆ. ಆ ನೈಜ ಇತಿಹಾಸವನ್ನು ಬೆಳಕಿಗೆ ತರಬೇಕು. ನಾವು ಅದನ್ನು ತರುತ್ತೇವೆ.
‘ತಿರುಮಲ ತಿರುಪತಿ’ಯನ್ನು ಪುಣ್ಯಕ್ಷೇತ್ರವನ್ನಾಗಿ ಮಾಡೋಣ! – ಪ್ರೊ. ರಾಮಾದೇವಿ
‘ತಿರುಮಲ ತಿರುಪತಿ’ ಪುಣ್ಯಕ್ಷೇತ್ರವಾಗಿದೆ; ಆದರೆ ಇಂದು ಅದನ್ನು ಹಾಳುಮಾಡಲಾಗುತ್ತಿದೆ. ತಿರುಪತಿಯನ್ನು ಪುಣ್ಯಕ್ಷೇತ್ರವನ್ನಾಗಿ ಮಾಡೋಣ. ನಮ್ಮಲ್ಲಿ ಉತ್ತಮ ಸಂವಿಧಾನ ಮತ್ತು ಉತ್ತಮ ಜನರಿದ್ದಾರೆ. ಆದ್ದರಿಂದ ತಿರುಮಲ ದೇವಸ್ಥಾನಕ್ಕೆ ಆಗುತ್ತಿರುವ ಹಾನಿಯನ್ನು ನಿರ್ಲಕ್ಷಿಸಬೇಡಿ. ದೇವರು, ದೇಶ ಮತ್ತು ಧರ್ಮ ಪ್ರತ್ಯೇಕವಾಗಿಲ್ಲ. ಎಲ್ಲವೂ ಒಂದೇ. ಆದ್ದರಿಂದ, ನಾವು ಅವುಗಳನ್ನು ಉಳಿಸಲು ಪ್ರಯತ್ನಿಸೋಣ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ