ಜನಸಂಖ್ಯಾ ನಿಯಂತ್ರಣಕ್ಕಾಗಿ ಹಿಂದುಗಳಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಹುರುಳಿಲ್ಲದ ಸಲಹೆ!

ಧಾರವಾಡ – ನಾವೆಲ್ಲರೂ ಮನುಷ್ಯರು ಮತ್ತು ಮನುಷ್ಯರಂತೆ ಬದುಕಬೇಕು. ಈ ಹಿನ್ನೆಲೆಯಲ್ಲಿ ಅಂತರಜಾತಿ ವಿವಾಹಗಳು ಹೆಚ್ಚೆಚ್ಚು ಆಗಬೇಕು. ಅಂತರಜಾತಿ ವಿವಾಹಗಳಿಂದ ಸಮಾನತೆ ಬರುತ್ತದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ೧ ಅಥವಾ ೨ ಮಕ್ಕಳನ್ನು ಮಾತ್ರ ಹೆರಬೇಕು, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಲಹೆ ನೀಡಿದರು. ಶಾಸಕ ಕೋನರೆಡ್ಡಿ ಅವರ ಪುತ್ರ ನವೀನ್ ಅವರ ವಿವಾಹದ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು. ಅದೇ ಸಮಯದಲ್ಲಿ, ಇತರ ೭೫ ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿ ಈ ಸಲಹೆಯನ್ನು ನೀಡಿದರು.
೧. ಇಲ್ಲಿ ಸಿದ್ದರಾಮಯ್ಯನವರು ಮಾತನಾಡಿ, ಕೋನರೆಡ್ಡಿಯವರು ಕೇವಲ ತಮ್ಮ ಮಗನ ಮದುವೆ ಮಾಡದೇ ೭೫ ಜೋಡಿಗಳಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಲಾಗಿದೆ. ಇದು ಕೇವಲ ಮದುವೆಯಲ್ಲ, ಒಂದು ದೊಡ್ಡ ಜಾತ್ರೆಯಂತೆ ಭಾಸವಾಗುತ್ತಿದೆ, ಎಂದು ಅವರು ವಿವರಿಸಿದರು. (ಸಾಮೂಹಿಕ ವಿವಾಹಗಳು ಕಡಿಮೆ ಖರ್ಚಿನ ದೃಷ್ಟಿಯಿಂದ ಉತ್ತಮವಾಗಿದ್ದರೂ, ಇದರಿಂದ ರಾಜಕೀಯ ಸ್ವಾರ್ಥವನ್ನು ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜನರಿಗೆ ಅನಿಸುತ್ತದೆ! – ಸಂಪಾದಕರು)
೨. ಮುಸಲ್ಮಾನ ಮತ್ತು ಕ್ರೈಸ್ತ ಪಂಥದ ಜನರು ಹಿಂದುಗಳೊಂದಿಗೆ ವಿವಾಹವಾಗುತ್ತಿದ್ದಾರೆ. (ಇದರ ಹಿಂದೆ ಲವ್ ಜಿಹಾದ್ ಇದೆ. ಬೇರೇನೂ ಇಲ್ಲ, ಇದನ್ನು ಸಿದ್ದರಾಮಯ್ಯನವರು ಹೇಳುತ್ತಿಲ್ಲ ಎಂಬುದನ್ನು ಗಮನಿಸಬೇಕು. ಎಷ್ಟು ಮುಸಲ್ಮಾನ ಮತ್ತು ಕ್ರೈಸ್ತ ಯುವತಿಯರು ಹಿಂದು ಯುವಕರೊಂದಿಗೆ ವಿವಾಹವಾಗುತ್ತಾರೆ ಎಂಬುದರ ಅಂಕಿಅಂಶಗಳನ್ನು ಸಿದ್ದರಾಮಯ್ಯನವರು ನೀಡುವರೆ ? – ಸಂಪಾದಕರು)
ಸಂಪಾದಕೀಯ ನಿಲುವುಈ ನಿಯಮ ಕೇವಲ ಹಿಂದುಗಳಿಗೆ ಮಾತ್ರ ಅನ್ವಯಿಸುತ್ತದೆಯೇ? ವಾಸ್ತವವಾಗಿ ಹಿಂದುಗಳಿಗೆ ಈ ಸಲಹೆಯ ಅಗತ್ಯವೂ ಇಲ್ಲ; ಏಕೆಂದರೆ ಬಹುಸಂಖ್ಯಾತ ಹಿಂದುಗಳು ೧ ಅಥವಾ ೨ ಮಕ್ಕಳನ್ನು ಮಾತ್ರವೇ ಹೆರುತ್ತಾರೆ. ೪ ವಿವಾಹಗಳನ್ನು ಮಾಡಿಕೊಂಡು ಬಹಳಷ್ಟು ಮಕ್ಕಳನ್ನು ಹೆರುವ ಮುಸಲ್ಮಾನರಿಗೆ ಮುಖ್ಯಮಂತ್ರಿಗಳು ಈ ಸಲಹೆಯನ್ನು ಏಕೆ ನೀಡುತ್ತಿಲ್ಲ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!