‘ಬಾಬರನೊಂದಿಗೆ ನನನಗೆ ಯಾವುದೇ ಸಂಬಂಧವಿಲ್ಲ!’

ಬಾಬರಿ ಮಸೀದಿ ನಿರ್ಮಿಸಲು ಯತ್ನಿಸಿದ ಶಾಸಕ ಹುಮಾಯೂ ಕಬೀರ್ ಅವರ ತೋರಿಕೆಯ ಹೇಳಿಕೆ

ಮುರ್ಷಿದಾಬಾದ್ (ಬಂಗಾಳ) – ಬಾಬರನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಬೆಲ್ಡಾಂಗಾದಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಗೆ ‘ಬಾಬರಿ’ ಎಂದು ಹೆಸರಿಡುವ ಹಿಂದೆ ಯಾವುದೇ ವಿಶೇಷ ಉದ್ದೇಶವಿಲ್ಲವೆಂದು ತೃಣಮೂಲ ಕಾಂಗ್ರೆಸ್ ನಿಂದ ಅಮಾನತುಗೊಂಡ ಶಾಸಕ ಹುಮಾಯೂ ಕಬೀರ್ ಅವರು ಹೇಳಿದ್ದಾರೆ..
ಕಬೀರ್ ಈ ಹಿಂದೆ ಭಾಜಪದಲ್ಲಿಯೂ ಇದ್ದರು. ಈ ಕುರಿತು ಅವರನ್ನು ಪ್ರಶ್ನಿಸಿದಾಗ, ಭಾಜಪ ಕಾರ್ಯಕ್ಷೇತ್ರವು ಕೇವಲ ಹಿಂದೂ ಸಮಾಜದ ಹಿತಾಸಕ್ತಿಗಳಿಗೆ ಮಾತ್ರ ಸೀಮಿತವಾಗಿತ್ತು; ಆದರೆ ನಾನು ಸ್ವತಃ ಮುಸಲ್ಮಾನನಾಗಿದ್ದು, ನನಗೆ ಮುಸಲ್ಮಾನ ಸಮುದಾಯದ ಹಿತದ ಕಾರ್ಯವೇ ನನಗೆ ಮುಖ್ಯವಾಗಿದೆಯೆಂದು ಹೇಳಿದರು.

ಸಂಪಾದಕೀಯ ನಿಲುವು

ಬಾಬರನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದಾದರೆ, ಅವನ ಹೆಸರಿನಲ್ಲಿ ಮಸೀದಿ ಕಟ್ಟುವ ಉದ್ದೇಶವೇನು? ಮುಸಲ್ಮಾನರ ಮತಗಳಿಗಾಗಿ ಬಾಬರನ ವಿವಾದ ಸೃಷ್ಟಿಸುವ ಇಂತಹ ನಾಯಕರ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾರಾಗೃಹಕ್ಕೆ ಹಾಕಬೇಕು.