|

ಮುಂಬಯಿ – ಗೊಂಡಿಯಾ ಜಿಲ್ಲೆಯ ಗೌಸಿಯಾ ಮಸೀದಿಯು ನಮಾಜಿಗೆ ಧ್ವನಿವರ್ಧಕ ಬಳಸಲು ಅರ್ಜಿಯ ಮೂಲಕ ಅನುಮತಿ ಕೇಳಿತ್ತು; ಆದರೆ ಆ ಅನುಮತಿಯನ್ನು ಮುಂಬಯಿ ಉಚ್ಚ ನ್ಯಾಯಾಲಯದ ನಾಗಪುರ ವಿಭಾಗವು ತಿರಸ್ಕರಿಸಿದೆ. ‘ಯಾವುದೇ ಧರ್ಮವು ಶಾಂತಿಯನ್ನು ಭಂಗಗೊಳಿಸಿ ಪೂಜೆಯನ್ನು ಕಲಿಸುವುದಿಲ್ಲ. ಯಾವುದೇ ಧರ್ಮವು ಧ್ವನಿವರ್ಧಕ ಅಥವಾ ಡ್ರಮ್ ಬಾರಿಸಿ ಪ್ರಾರ್ಥನೆ ಮಾಡಲು ಅನುಮತಿ ನೀಡಿಲ್ಲ’ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಅನಿಲ್ ಪನ್ಸಾರೆ ಮತ್ತು ರಾಜ್ ವಾಕೋಡೆ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.
ಅರ್ಜಿದಾರರ ಮನವಿಯನ್ನು ತಿರಸ್ಕರಿಸುವಾಗ ವಿಭಾಗೀಯ ಪೀಠವು ಸ್ಪಷ್ಟಪಡಿಸಿದೆ…
೧. ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕದ ಬಳಕೆ ಕಡ್ಡಾಯ ಅಥವಾ ಅಗತ್ಯ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ.
೨. ಶಬ್ದ ಮಾಲಿನ್ಯದ ಪ್ರಶ್ನೆ ಪದೇ ಪದೇ ಉದ್ಭವಿಸುತ್ತಿದೆ. ಈ ಪರಿಸ್ಥಿತಿ ಗಂಭೀರವಾಗಿರುವುದರಿಂದ ಮಹಾರಾಷ್ಟ್ರ ಸರಕಾರವು ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡಬೇಕು.
೩. ನ್ಯಾಯಾಲಯವು ‘ಶಬ್ದ ಮಾಲಿನ್ಯವು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವಾಗಿದೆ. ಶಬ್ದ ಮಾಲಿನ್ಯದಿಂದ ದೇಹದಲ್ಲಿ ಹಾನಿಕಾರಕ ರಾಸಾಯನಿಕಗಳು ಹೆಚ್ಚಾಗುತ್ತವೆ. ಇದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಆಕ್ರಮಣಶೀಲತೆ, ಆಯಾಸ ಮತ್ತು ಇತರ ಕಾಯಿಲೆಗಳು ಬರಬಹುದು’ ಎಂದು ಹೇಳಿದೆ.
೪. ಧಾರ್ಮಿಕ ಸ್ಥಳಗಳ ಬಳಿ ನಿಯಮಗಳನ್ನು ಉಲ್ಲಂಘಿಸಿ ಭಜನೆ ಮತ್ತು ‘ಅಜಾನ್’ (ಪ್ರಾರ್ಥನೆಗೆ ಕರೆಯುವುದು) ಆಯೋಜಿಸಲಾಗುತ್ತದೆ. ಇದು ಕಾನೂನಿನ ನೇರ ಉಲ್ಲಂಘನೆಯಾಗಿದ್ದು, ಅದನ್ನು ನಿಯಂತ್ರಿಸುವುದು ಅಗತ್ಯವಾಗಿದೆ.
೫. ನ್ಯಾಯಾಲಯವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಶಬ್ದ ಮಾಲಿನ್ಯದಿಂದ ಮುಕ್ತವಾಗಿರುವ ನಾಗರಿಕರ ಹಕ್ಕಿನ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸಿತು. ಸರ್ವೋಚ್ಚ ನ್ಯಾಯಾಲಯದ ಶಬ್ದ ಮಾಲಿನ್ಯದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
೬. ನಿಯಮಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿಯುತ್ತವೆ. ಅವುಗಳನ್ನು ಪಾಲಿಸದಿದ್ದಲ್ಲಿ ದಂಡಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
೭. ವಿಭಾಗೀಯ ಪೀಠವು ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿತು. ಸರ್ವೋಚ್ಚ ನ್ಯಾಯಾಲಯದ ೨೦೦೫ ರ ಐತಿಹಾಸಿಕ ತೀರ್ಪಿನ ಉಲ್ಲೇಖ ನೀಡಿದ ನ್ಯಾಯಾಲಯವು, ‘ಕಲಂ ೨೧ ರ ಅಡಿಯಲ್ಲಿ ಜೀವಿಸುವ ಹಕ್ಕು ಕೇವಲ ಜೀವಿಸುವ ಹಕ್ಕು ಮಾತ್ರವಲ್ಲ, ಗೌರವದಿಂದ ಜೀವಿಸುವ ಹಕ್ಕು ಸಹ ಆಗಿದೆ’ ಎಂದು ಹೇಳಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”