ಗುಜರಾತ್ ಅರ್ಜಿಗೆ ಕೊಂಕಣ ಮಾವು ಬೆಳೆಗಾರರ ವಿರೋಧ! Valsad Hapoos Mangoes GI Certification

ಮಾವಿನ ಹಣ್ಣಿಗೆ ‘ವಲ್ಸಾಡ್ ಹಾಪೂಸ್’ ಹೆಸರಿನಲ್ಲಿ ಭೌಗೋಳಿಕ ಸೂಚ್ಯಂಕ ಪಡೆಯಲು ಗುಜರಾತ್‌ನ ಪ್ರಯತ್ನ!

ಮುಂಬಯಿ – ಗುಜರಾತ್‌ನ ಗಾಂಧಿನಗರ ಮತ್ತು ನವಸಾರಿ ವಿಶ್ವವಿದ್ಯಾಲಯಗಳು ‘ಕೊಂಕಣ ಹಾಪೂಸ್’ ಮಾವಿನ ಮೇಲೆ ಹಕ್ಕು ಸಾಧಿಸಿ, ‘ವಲ್ಸಾಡ್ ಹಾಪೂಸ್’ ಹೆಸರಿನಲ್ಲಿ ಭೌಗೋಳಿಕ ಸೂಚ್ಯಂಕ ಪಡೆಯಲು 2023 ರಲ್ಲಿ ಅರ್ಜಿ ಸಲ್ಲಿಸಿದ್ದವು. ಈ ಕುರಿತಾದ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಅರ್ಜಿಯ ಕುರಿತು ಅಕ್ಟೋಬರ್ 30 ರಂದು ಮೊದಲ ವಿಚಾರಣೆ ನಡೆದಿದೆ. ಇದರ ಪರಿಣಾಮವಾಗಿ ಕೊಂಕಣದ ಮಾವು ಬೆಳೆಗಾರರು ಆತಂಕಗೊಂಡಿದ್ದಾರೆ.

ಜಗತ್ತಿನಲ್ಲಿ, ‘ಕೊಂಕಣ ಹಾಪೂಸ್’ ಮಾವಿನ ಹಣ್ಣಿಗೆ ದೊರೆತ ಮೊದಲ ಮತ್ತು ಏಕೈಕ ಭೌಗೋಳಿಕ ಸೂಚ್ಯಂಕವಾಗಿದೆ. ಈ ಮಾನ್ಯತೆಯು ಕೊಂಕಣದ ಹಾಪೂಸ್ ಉತ್ಪಾದಕರಿಗೆ ಸುರಕ್ಷಿತ ಮಾರುಕಟ್ಟೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೊಂಕಣ ಹಾಪೂಸ್‌ಗೆ 2018 ರಲ್ಲಿ ಭೌಗೋಳಿಕ ಸೂಚ್ಯಂಕ ದೊರೆತಿದೆ. ಇದಕ್ಕೂ ಮುನ್ನ, 2022 ರಲ್ಲಿ ‘ನಾರಾಯಣಗಾಂವ್ ಕೃಷಿ ವಿಜ್ಞಾನ ಕೇಂದ್ರ’ವು ‘ಹಾಪೂಸ್ ಮಾವು’ ಹೆಸರಿನಲ್ಲಿ ಭೌಗೋಳಿಕ ಸೂಚ್ಯಂಕಕ್ಕಾಗಿ ಅರ್ಜಿ ಸಲ್ಲಿಸಿದೇ.

ಈ ಅರ್ಜಿಗೆ ‘ಕೊಂಕಣ ಮಾವು ಉತ್ಪಾದಕರು ಮತ್ತು ಮಾರಾಟಗಾರರ ಸಂಘಟನೆ’ಯ ಅಧ್ಯಕ್ಷರಾದ ಡಾ. ವಿವೇಕ್ ಭಿಡೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರು, “ಒಂದು ವೇಳೆ ವಲ್ಸಾಡ್ ಹಾಪೂಸ್‌ಗೆ ಮಾನ್ಯತೆ ದೊರೆತರೆ, ಕೊಂಕಣದ ರೈತರಿಗೆ ನಷ್ಟವಾಗುತ್ತದೆ. ಈ ಹಿಂದೆ ಆಫ್ರಿಕಾದ ಮಲಾವಿ ದೇಶದಿಂದ ಬರುತ್ತಿದ್ದ ‘ಮಲಾವಿ ಹಾಪೂಸ್’ ಹೆಸರಿಗೂ ಸಂಘಟನೆಯು ಆಕ್ಷೇಪ ವ್ಯಕ್ತಪಡಿಸಿತ್ತು. ‘ಕೊಂಕಣ ಹಾಪೂಸ್’ ಎಂಬ ಹೆಸರು ಕೊಂಕಣದ ನಾಲ್ಕು ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ನಿರ್ದಿಷ್ಟ ಮಾವಿನ ಹಣ್ಣಿಗೆ ಮಾತ್ರ ಸೀಮಿತವಾಗಿದೆ. ಭವಿಷ್ಯದಲ್ಲಿ ‘ಶಿವನೇ ಹಾಪೂಸ್’ ಮತ್ತು ‘ಕರ್ನಾಟಕ ಹಾಪೂಸ್’ ಗಾಗಿ ಅರ್ಜಿ ಸಲ್ಲಿಸಿದರೆ, ಅದಕ್ಕೂ ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು.”