ಮಾಂಸಾಹಾರ ಸೇವಿಸದ ಮಹಿಳಾ ಪತ್ರಕರ್ತಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನುಡಿಮುತ್ತು : ‘ಜೀವನದಲ್ಲಿ ನೀವು ಏನನ್ನೋ ಮಿಸ್ ಮಾಡ್ಕೊತಾ ಇದ್ದೀರಿ’

ಬೆಂಗಳೂರು – ಮಾಂಸಾಹಾರ ಸೇವಿಸದ ಒಬ್ಬ ಮಹಿಳಾ ಪತ್ರಕರ್ತಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ‘ನೀವು ಜೀವನದಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೀರಿ’ ಎಂದು ಹೇಳಿರುವುದು ಬೆಳಕಿಗೆ ಬಂದಿದೆ. ಸಿದ್ಧರಾಮಯ್ಯನವರು ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಉಪಾಹಾರಕ್ಕಾಗಿ ಹೋಗಿದ್ದರು. ಉಪಾಹಾರದ ನಂತರ ಅವರಿಬ್ಬರೂ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಬ್ಬ ಮಹಿಳಾ ಪತ್ರಕರ್ತಿಗೆ, ‘ನಿಮಗೆ ಚಿಕನ್ ಇಷ್ಟವೇ?’ಎಂದು ಕೇಳಿದರು. ಇದಕ್ಕೆ ಆ ಮಹಿಳಾ ಪತ್ರಕರ್ತೆ, ‘ನಾನು ಶುದ್ಧ ಸಸ್ಯಾಹಾರಿ’ ಎಂದು ಉತ್ತರಿಸಿದರು. ಇದಕ್ಕೆ ಸಿದ್ಧರಾಮಯ್ಯನವರು ಮತ್ತೆ ಅವರಿಗೆ ‘ಶುದ್ಧ ಅಂದರೆ ಏನು? ನೀವು ಮೊಟ್ಟೆ ತಿನ್ನುತ್ತೀರಾ?’ ಎಂದು ಕೇಳಿದರು. ಇದಕ್ಕೆ ಮಹಿಳಾ ಪತ್ರಕರ್ತೆ ‘ಇಲ್ಲ’ಎಂದು ಉತ್ತರಿಸಿದರು. ಆಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ನೀವು ಜೀವನದಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೀರಿ’ ಎಂದು ಹೇಳಿಕೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾಅವರು ಮುಖ್ಯಮಂತ್ರಿಗಳಿಗಾಗಿ ಸಾಂಪ್ರದಾಯಿಕ ನಾಟಿ ಕೋಳಿ ಅಡುಗೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಸಂಗ ಸಂಭವಿಸಿತು.

ಸಂಪಾದಕೀಯ ನಿಲುವು

ಯಾರಿಗೆ ಕೇವಲ ‘ತಿನ್ನುವುದರಲ್ಲಿ’ ಮಾತ್ರ ಆಸಕ್ತಿ ಇದೆಯೋ, ಅವರಿಂದ ಇದಕ್ಕಿಂತ ಬೇರೆ ಹೇಳಿಕೆಯನ್ನು ನಿರೀಕ್ಷಿಸಲು ಏನಿದೆ?