‘ಶಿಕ್ಷಣ ಸಂಸ್ಥೆಯು ಕಾಲೇಜಿಗಾಗಿ ತನ್ನದೇ ಭೂಮಿಯನ್ನು ಪಡೆಯಲಿ ಮತ್ತು ಸರಕಾರದ ಅನುದಾನ ಪಡೆಯುವುದನ್ನು ನಿಲ್ಲಿಸಲಿ!’ : Omar Abdullah

ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಿಗೆ ಪ್ರವೇಶದ ಕುರಿತು ಮುಖ್ಯಮಂತ್ರಿ ಅಬ್ದುಲ್ಲಾ ಅವರ ಆಕ್ಷೇಪಾರ್ಹ ಹೇಳಿಕೆ.

ಶ್ರೀನಗರ (ಜಮ್ಮು-ಕಾಶ್ಮೀರ): ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳಲಾಗುತ್ತದೆ. ಒಂದು ವೇಳೆ ಶಿಕ್ಷಣ ಸಂಸ್ಥೆಯು ಧರ್ಮಾಧಾರಿತ ವ್ಯವಸ್ಥೆ ಮಾಡಲು ಬಯಸುವುದಾದರೆ, ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಸಂಸ್ಥೆಯು ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಲಿ. ಕಾಲೇಜಿನ ಭೂಮಿಯ ವೆಚ್ಚವನ್ನು ಅವರೇ ಭರಿಸಲಿ. ಸರಕಾರದಿಂದ ಸಿಗುವ ಅನುದಾನವನ್ನು ಬಿಟ್ಟುಬಿಡಲಿ, ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಹೇಳಿಕೆ ನೀಡಿದರು.

ಈ ಕಾಲೇಜಿನಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಹೆಚ್ಚು ಸ್ಥಾನಗಳನ್ನು ನೀಡುತ್ತಿರುವುದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಅವರು ಮಾತನಾಡುತ್ತಿದ್ದರು. ಭಾಜಪ ಸಂಸದರ ನಿಯೋಗವು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬಳಿ ಈ ಕಾಲೇಜಿನ ವಿಚಾರವನ್ನು ಪ್ರಸ್ತಾಪಿಸಿದ ನಂತರ ಓಮರ್ ಅಬ್ದುಲ್ಲಾ ಅವರು ಈ ಪ್ರತಿಕ್ರಿಯೆ ನೀಡಿದರು. ಕಾಲೇಜಿನ ಆವರಣದಲ್ಲಿ ‘ಗುರುಕುಲ’ ಸ್ಥಾಪಿಸುವ ಕಲ್ಪನೆಯ ಬಗ್ಗೆ ಕೇಳಿದಾಗ, ಅವರಿಗೆ ಯಾರೂ ತಡೆಯೊಡ್ಡಿಲ್ಲ,ಎಂದು ಅಬ್ದುಲ್ಲಾ ಹೇಳಿದರು.

‘ನೀಟ್’ ನಿಯಮಾನುಸಾರ ಪ್ರವೇಶ ನೀಡಲಾಗುತ್ತದೆ.

ಅಬ್ದುಲ್ಲಾ ಅವರು ಮುಂದುವರಿದು, ಕಾಲೇಜಿನಲ್ಲಿ ಪ್ರವೇಶಗಳು ಕೇವಲ ಅರ್ಹತೆಯ ಆಧಾರದ ಮೇಲೆ ಮಾತ್ರ ನಡೆಯುತ್ತವೆ. ಮತ್ತು ಸಂಸ್ಥೆಯು ‘ನೀಟ್’ನ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್, ಅಂದರೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ. ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಈ ಪರೀಕ್ಷೆ ನೀಡುವುದು ಕಡ್ಡಾಯವಾಗಿದೆ) ನಿಯಮಗಳನ್ನು ಅನುಮೋದಿಸಿದೆ. ಒಂದು ವೇಳೆ ಧರ್ಮದ ಆಧಾರದ ಮೇಲೆ ಪ್ರವೇಶ ಹಂಚಿಕೆ ಮಾಡುವುದಾದರೆ, ಅವರನ್ನು ಯಾರೂ ತಡೆಯುವುದಿಲ್ಲ; ಆದರೆ ‘ನೀಟ್’ನಲ್ಲಿ ಕೇವಲ ಅರ್ಹತೆಯನ್ನು ನೋಡಲಾಗುತ್ತದೆ. ಅರ್ಹತೆಯ ಪ್ರಕಾರ ಹೆಸರು ಬರದಿದ್ದರೆ, ಅದರ ಜವಾಬ್ದಾರಿಯನ್ನು ಇತರರ ಮೇಲೆ ಹೊರಿಸಲು ಸಾಧ್ಯವಿಲ್ಲ, ಎಂದರು. ( ‘ಅರ್ಹತೆ’ ಹೊಂದಿರುವ ಮುಸಲ್ಮಾನರು ಮುಂದೆ ವೈದ್ಯರಾದ ನಂತರ ಎಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬುದನ್ನು ಇಡೀ ಜಗತ್ತು ದೆಹಲಿಯ ಸ್ಫೋಟದ ಮೂಲಕ ನೋಡಿದೆ. ಈ ವಿಷಯವನ್ನು ಓಮರ್ ಅಬ್ದುಲ್ಲಾ ಅವರು ನೆನಪಿನಲ್ಲಿಡಬೇಕು – ಸಂಪಾದಕರು)

ಸಂಪಾದಕೀಯ ನಿಲುವು

ಸರಕಾರವು ಭೂಮಿ ಮತ್ತು ಅನುದಾನವನ್ನು ನೀಡುತ್ತಿದೆ; ಆದ್ದರಿಂದ ಹಿಂದೂಗಳ ಹಣದಿಂದ ನಡೆಯುವ ಕಾಲೇಜಿನಲ್ಲಿ ಅತಿ ಹೆಚ್ಚು ಮುಸಲ್ಮಾನ ವಿದ್ಯಾರ್ಥಿಗಳು ಕಲಿಯುವುದು ಸಹಜ ಎಂದು ಅಬ್ದುಲ್ಲಾ ಅವರು ಪರೋಕ್ಷವಾಗಿ ಹೇಳಲು ಬಯಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಹಾಗಾದರೆ, ಈ ದೇಶದಲ್ಲಿ ಹಿಂದೂಗಳೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ ಮತ್ತು ಅವರೇ ಹೆಚ್ಚು ತೆರಿಗೆ ನೀಡುತ್ತಾರೆ. ಆದ್ದರಿಂದ ಇಡೀ ದೇಶದಲ್ಲಿ ಮುಸಲ್ಮಾನರ ಸಂಸ್ಥೆಗಳು ತಮ್ಮ ಸ್ವಂತ ವೆಚ್ಚದಲ್ಲಿಯೇ ಪ್ರತಿಯೊಂದು ಕೆಲಸವನ್ನು ಮಾಡಬೇಕು, ಸರಕಾರದಿಂದ ಯಾವುದೇ ಸಹಾಯ ಪಡೆಯಬಾರದು ಎಂದು ಈಗ ಹಿಂದೂಗಳು ಹೇಳಬೇಕಿದೆ.