‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೂ ರಾಷ್ಟ್ರದ ಪರಿಕಲ್ಪನೆಯು ಸಂವಿಧಾನಬಾಹಿರವಂತೆ!’ – Sujat Anti Hindu Statement

ವಂಚಿತ ಬಹುಜನ ಒಕ್ಕೂಟದ ಅಧ್ಯಕ್ಷ ಪ್ರಕಾಶ ಅಂಬೇಡ್ಕರ ಅವರ ಹೊಸ ಆವಿಷ್ಕಾರ

ಮುಂಬಯಿ, ಡಿಸೆಂಬರ್ 1 – ರಾಷ್ಟ್ರೀಯ ಸ್ವಯಂಸೇವಕ ಸಂಘದ ಮನುವಾದಿ ಹಿಂದುತ್ವದ ವಿಚಾರಧಾರೆಯು ಅಥವಾ ಭಾರತವು ಹಿಂದೂ ರಾಷ್ಟ್ರವಾಗಬೇಕು ಎಂಬ ವಿಚಾರಧಾರೆಯು ರಾಷ್ಟ್ರಕ್ಕೆ ವಿಶ್ವಾಸಘಾತ ಮಾಡುವಂತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ವಿಚಾರಧಾರೆಯು ರಾಷ್ಟ್ರವಿರೋಧಿಯಾಗಿದೆ. ಭಾರತದ ಗುರುತು ಕೇವಲ ಒಂದು ಧರ್ಮದಿಂದ ಮಾತ್ರ ಇರಬೇಕು ಎಂಬ ಸಂಘದ ವಿಚಾರಧಾರೆಯು ಸಂವಿಧಾನ, ಸಮಾನತಾವಾದಿ ಸಿದ್ಧಾಂತ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಚಿಂತನೆಗಳ ಮೇಲಿನ ದಾಳಿಯಾಗಿದೆ ಎಂದು ವಂಚಿತ ಬಹುಜನ ಒಕ್ಕೂಟದ ಅಧ್ಯಕ್ಷ ಪ್ರಕಾಶ ಅಂಬೇಡ್ಕರ ಅವರು ತಮ್ಮ ‘ಎಕ್ಸ್’ ಖಾತೆಯ ಮೂಲಕ ನುಡಿಮುತ್ತುಗಳನ್ನು ಉದುರಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ವಿಭಜನೆಯ ಸಮಯದಲ್ಲಿ ಎಲ್ಲ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ಭಾರತದಲ್ಲಿ ಹಿಂದೂಗಳಿರಬೇಕು’, ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ತಮ್ಮ ‘ಥಾಟ್ಸ್ ಆಫ್ ಪಾಕಿಸ್ತಾನ್’  ಪುಸ್ತಕದಲ್ಲಿ ಬರೆದಿದ್ದಾರೆ. ಅದನ್ನು ಪ್ರಕಾಶ ಅಂಬೇಡ್ಕರ ಓದಬೇಕು!