|

ಕ್ಯಾನ್ಬೆರಾ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದ ‘ಥಿಂಕ್ ಟ್ಯಾಂಕ್’ (ಅಧ್ಯಯನ ಗುಂಪು) ‘ಲೋವಿ ಇನ್‌ಸ್ಟಿಟ್ಯೂಟ್’ ಹೇಳಿರುವ ಪ್ರಕಾರ, ಭಾರತವು ಈಗ ‘ಏಷ್ಯಾ ಪವರ್ ಇಂಡೆಕ್ಸ್-೨೦೨೫’ ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಶಕ್ತಿಯಾಗಿದೆ. ‘ಆಪರೇಷನ್ ಸಿಂದೂರ್’ ನಲ್ಲಿ ಭಾರತದ ಸಾಧನೆಯು ಅದರ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರಿಂದ ಅದು ಜಪಾನ್ ಅನ್ನು ಹಿಂದಿಕ್ಕಿದೆ. ಈ ಶ್ರೇಯಾಂಕದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಏಷ್ಯಾದಲ್ಲಿ ಇಲ್ಲದಿದ್ದರೂ ಅದರ ದೊಡ್ಡ ಪ್ರಭಾವದಿಂದಾಗಿ ಈ ಪಟ್ಟಿಯಲ್ಲಿ ಅದರ ಹೆಸರನ್ನು ಸೇರಿಸಲಾಗಿದೆ. ಇದರ ಜೊತೆಗೆ, ಹೂಡಿಕೆಗಾಗಿ ಭಾರತವು ವೇಗವಾಗಿ ಆಕರ್ಷಕವಾಗುತ್ತಿದೆ. ಅಮೆರಿಕದ ನಂತರ ಅತಿ ಹೆಚ್ಚು ವಿದೇಶಿ ಹೂಡಿಕೆ ಭಾರತಕ್ಕೆ ಬರುತ್ತಿದೆ ಮತ್ತು ಈ ನಿಟ್ಟಿನಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ. ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ಪೂರೈಕೆ ಸರಣಿಯನ್ನು ಚೀನಾದಿಂದ ಹೊರಗೆ ವಿಸ್ತರಿಸಲು ಬಯಸಿರುವುದು ಇದಕ್ಕೆ ಕಾರಣವಾಗಿದೆ. ವೇಗದ ಆರ್ಥಿಕ ಬೆಳವಣಣಿಗೆ ಮತ್ತು ಹೆಚ್ಚುತ್ತಿರುವ ಮಿಲಿಟರಿ ಸಾಮರ್ಥ್ಯದ ಆಧಾರದ ಮೇಲೆ ಭಾರತವು ಈ ಸ್ಥಾನಮಾನವನ್ನು ಪಡೆದುಕೊಂಡಿದೆ.

೧. ಅಂಕಿಅಂಶಗಳ ಪ್ರಕಾರ, ೨೦೨೪ ರಲ್ಲಿ ಭಾರತವು ೩೯.೧ ಅಂಕಗಳೊಂದಿಗೆ ಮಧ್ಯಮ ಶಕ್ತಿಯ ವರ್ಗದಲ್ಲಿತ್ತು. ಈ ವರ್ಷ ಭಾರತದ ಅಂಕಗಳು ೦.೯ ರಷ್ಟು ಹೆಚ್ಚಾಗಿ ೪೦ ಕ್ಕೆ ತಲುಪಿವೆ. ಇದರ ನಂತರ, ಭಾರತವು ದೊಡ್ಡ ಶಕ್ತಿಯ ವರ್ಗಕ್ಕೆ ಸೇರಿಕೊಂಡಿದೆ.
೨. ಈ ಪಟ್ಟಿಯಲ್ಲಿ ಪಾಕಿಸ್ತಾನವು ೧೪.೫ ಅಂಕಗಳೊಂದಿಗೆ ೧೬ ನೇ ಸ್ಥಾನದಲ್ಲಿದೆ.
೩. ‘ಏಷ್ಯಾ ಪವರ್ ಇಂಡೆಕ್ಸ್-೨೦೨೫’ ರಲ್ಲಿ, ೨೭ ದೇಶಗಳನ್ನು ೧೩೧ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ಸಂಪನ್ಮೂಲಗಳು, ಆರ್ಥಿಕತೆ, ಮಿಲಿಟರಿ ಶಕ್ತಿ ಮತ್ತು ಅಂತರರಾಷ್ಟ್ರೀಯ ಪ್ರಭಾವ ಸೇರಿವೆ.
೪. ಭಾರತದಲ್ಲಿ ವಿದೇಶಿ ಹೂಡಿಕೆ ಹೆಚ್ಚಾದ ಕಾರಣ, ‘ಎಕನಾಮಿಕ್ ರಿಲೇಶನ್ ಇಂಡೆಕ್ಸ್’ (ಆರ್ಥಿಕ ಸಂಬಂಧಗಳ ಶ್ರೇಯಾಂಕ) ನಲ್ಲಿ ಭಾರತವು ೯ ನೇ ಸ್ಥಾನಕ್ಕೆ ತಲುಪಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !