|

ಸಿಡ್ನಿ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾ ಸರಕಾರವು ಇರಾನ್‌ನ ರಾಯಭಾರಿಗೆ ೭ ದಿನಗಳ ಒಳಗೆ ದೇಶವನ್ನು ತೊರೆಯಲು ಆದೇಶಿಸಿದೆ. ಜೊತೆಗೆ, ಇರಾನ್‌ನ ಸೈನ್ಯದ ಅಂಗವಾಗಿರುವ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (ಐ.ಆರ್.ಜಿ.ಸಿ.) ಅನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದೆ.
🇦🇺 Australia cracks down on IRGC 🇮🇷🔥
Declares Iran’s Islamic Revolutionary Guard Corps (IRGC) a terrorist organisation 🚫
Australia orders Iran’s ambassador to leave within 7 days ⏳
🕍 Reportedly linked to plots targeting the Jewish community
💥 Recent Sydney & Melbourne… pic.twitter.com/suQ3gD7zLl
— Sanatan Prabhat (@SanatanPrabhat) November 27, 2025
ದ್ವಿತೀಯ ಮಹಾಯುದ್ಧದ ನಂತರ ಆಸ್ಟ್ರೇಲಿಯಾವು ಯಾವುದೇ ದೇಶದ ರಾಯಭಾರಿಯನ್ನು ದೇಶದಿಂದ ಹೊರಹಾಕಿದ್ದು ಇದು ಮೊದಲ ಬಾರಿಗೆ. ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆಗಳು ತಿಳಿಸಿರುವಂತೆ, ‘ಐ.ಆರ್.ಜಿ.ಸಿ.’ ಆಸ್ಟ್ರೇಲಿಯಾದಲ್ಲಿರುವ ಯಹೂದಿ ಸಮುದಾಯದ ಮೇಲೆ ದಾಳಿ ಮಾಡಲು ಸಂಚು ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
೧. ಅಕ್ಟೋಬರ್ ೨೦೨೪ ರಲ್ಲಿ ಸಿಡ್ನಿಯ ‘ಲೂಯಿಸ್ ಕಾಂಟಿನೆಂಟಲ್ ಕಿಚನ್’ ಮೇಲೆ ದಾಳಿ ನಡೆದಿತ್ತು ಮತ್ತು ಡಿಸೆಂಬರ್ ೨೦೨೪ ರಲ್ಲಿ ಮೆಲ್ಬೋರ್ನ್‌ನ ಅದಾಸ್ ಇಸ್ರೇಲ್ ಸಿನಗಾಗ್ (ಪ್ರಾರ್ಥನಾ ಮಂದಿರ) ಮೇಲೆ ದಾಳಿ ನಡೆದಿತ್ತು. ಈ ಎರಡೂ ಘಟನೆಗಳು ಸಂಘಟಿತ ಭಯೋತ್ಪಾದಕ ದಾಳಿಗಳೆಂದು ಆಸ್ಟ್ರೇಲಿಯಾ ಹೇಳಿದೆ. ಗುಪ್ತಚರ ವರದಿಯ ನಂತರ ‘ಐ.ಆರ್.ಜಿ.ಸಿ.’ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಯಿತು.
೨. ಈ ನಿರ್ಧಾರವು ಅಮೆರಿಕಾ ಮತ್ತು ಯುರೋಪ್‌ನ ನೀತಿಗಳಿಗೆ ಅನುಗುಣವಾಗಿದೆ; ಏಕೆಂದರೆ ಅಮೆರಿಕಾ ಈಗಾಗಲೇ ‘ಐ.ಆರ್.ಜಿ.ಸಿ.’ ಅನ್ನು ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !