ಸುರಂಗ ಮಾರ್ಗಗಳ ಯೋಜನೆಗೆ ‘ಪಾತಾಳ ಲೋಕ’ ಎಂದು ಹೆಸರಿಡಲಾಗಿದೆ !

ಮುಂಬಯಿ – ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಅನೇಕ ದಿಕ್ಕುಗಳಿಂದ ದೊಡ್ಡ ಪ್ರಮಾಣದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ ಅವರು ಘೋಷಿಸಿದರು. ‘ಇಂಡಿಯಾಸ್ ಇಂಟರ್ನ್ಯಾಷನಲ್ ಮೂವ್ಮೆಂಟ್ ಟು ಯುನೈಟ್ ನೇಷನ್ಸ್’ ನ ‘ಯೂತ್ ಕನೆಕ್ಟ್’ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸುರಂಗ ಮಾರ್ಗಗಳ ಈ ಯೋಜನೆಗೆ ‘ಪಾತಾಳ ಲೋಕ’ ಎಂದು ಹೆಸರಿಡಲಾಗುವುದು. ಈ ಪದವನ್ನು ಹಿಂದಿ ವೆಬ್ ಸರಣಿಯೊಂದರಲ್ಲಿ ಭೂಮಿಯಡಿಯ ಜಗತ್ತನ್ನು ಸೂಚಿಸುವ ಸಲುವಾಗಿ ಬಳಸಲಾಗಿತ್ತು ಎಂದು ಕೂಡ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಫಡಣವೀಸ ಅವರು ಮುಂದೆ ಮಾತನಾಡಿ, ಈ ಯೋಜನೆಯ ಮೂಲಕ ನಾವು ಮುಂಬಯಿಯಲ್ಲಿನ ಸುರಂಗಗಳ ಒಂದು ವಿಸ್ತೃತ ಜಾಲವನ್ನು ನಿರ್ಮಿಸಲಿದ್ದೇವೆ. ಈ ಜಾಲವು ಅಸ್ತಿತ್ವದಲ್ಲಿರುವ ಮುಖ್ಯ ರಸ್ತೆಗಳಿಗೆ ಸಮಾನಾಂತರವಾಗಿ ನೆರಳಿನ ಜಾಲದಂತೆ (ಶಾಡೋ ನೆಟ್ ವರ್ಕ) ಕಾರ್ಯನಿರ್ವಹಿಸಲಿದೆ. ಪ್ರಸ್ತುತ, ಠಾಣೆ-ಬೋರಿವಲಿ ಮತ್ತು ಮುಲುಂಡ-ಗೊರೆಗಾಂವ್ ನಡುವೆ ಸುರಂಗ ಮಾರ್ಗದ ಕೆಲಸ ಪ್ರಾರಂಭವಾಗಿದೆ. ಇದರಿಂದ ಪೂರ್ವ-ಪಶ್ಚಿಮ ಭಾಗಗಳ ಸಂಪರ್ಕವು ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವುಆಧ್ಯಾತ್ಮಶಾಸ್ತ್ರದ ಪ್ರಕಾರ, ಶಬ್ದ, ರೂಪ, ರಸ, ಗಂಧ ಮತ್ತು ಸ್ಪರ್ಶಗಳ ಶಕ್ತಿಗಳು ಒಟ್ಟಿಗೆ ಇರುತ್ತವೆ. ಅದರಂತೆ, ಈ ಯೋಜನೆಗೆ ‘ಪಾತಾಳ ಲೋಕ’ದ ಬದಲು ಬೇರೆ ಹೆಸರನ್ನು ನೀಡಿದರೆ ಹೆಚ್ಚು ಸೂಕ್ತವಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!