ಶ್ರೀ ಕಾಳಿಮಾತೆಯ ವಿಗ್ರಹಕ್ಕೆ ಮದರ್ ಮೇರಿಯಂತೆ ಅಲಂಕರಿಸಿ ಕ್ರಾಸ್ ಹಾಕಿದ ಅರ್ಚಕನ ವಿರುದ್ಧ ದೂರು ದಾಖಲು! Kali Mata Dressed Mother Mary

ಈ ಚಿತ್ರವನ್ನು ಯಾರ ಭಾವನೆಗಳಿಗೂ ನೋವಾಗಲೆಂದು ಹಾಕಿಲ್ಲ, ಆದರೆ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಲು ಹಾಕಲಾಗಿದೆ.

ಮುಂಬಯಿ – ಚೆಂಬೂರ್‌ನ ವಾಶಿನಾಕಾ ಸ್ಮಶಾನದ ಆವರಣದಲ್ಲಿರುವ ಶ್ರೀ ಕಾಳಿಮಾತೆಯ ದೇವಾಲಯದಲ್ಲಿ, ದೇವಿಯ ಮೂರ್ತಿಗೆ ಮದರ್ ಮೇರಿಯ ಉಡುಪುಗಳನ್ನು ತೊಡಿಸಿ, ಕ್ರಾಸ್ (ಶಿಲುಬೆ) ಹಾಕಿದ್ದ ಅರ್ಚಕನ ವಿರುದ್ಧ ಪ್ರಕರಣ ದಾಖಲಾಗಿದೆ. ನವೆಂಬರ್ 22 ರ ರಾತ್ರಿ ಈ ಕೃತ್ಯವು ಭಕ್ತರ ಗಮನಕ್ಕೆ ಬಂದಿದೆ. ಸ್ಥಳೀಯ ಭಕ್ತರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅರ್ಚಕ ರಮೇಶ ಯೋಗೇಶ್ವರ್ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯವು ಆತನಿಗೆ 2 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣದಲ್ಲಿ ಸ್ಥಳೀಯ ಭಕ್ತರು ಒಟ್ಟಾಗಿ ಅರ್ಚಕ ರಮೇಶ ಯೋಗೇಶ್ವರ್‌ನನ್ನು ವಿಚಾರಿಸಿದಾಗ, ‘ದೇವಿ ಕನಸಿನಲ್ಲಿ ಬಂದು ಮೂರ್ತಿಗೆ ಮದರ್ ಮೇರಿ ರೂಪ ನೀಡುವಂತೆ ಹೇಳಿದಳು’ ಎಂದು ಉತ್ತರಿಸಿದ್ದಾನೆ. ಇದರಿಂದ ಆಕ್ರೋಶಿತ ಭಕ್ತರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಕ್ತರು ಮತ್ತು ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು, ‘ಇದರ ಹಿಂದೆ ಮತಾಂತರದ ಪಿತೂರಿ ಇದ್ದು, ಇದರಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ. ಅವರನ್ನು ಪತ್ತೆ ಮಾಡಿ ಬಂಧಿಸಬೇಕು’, ಎಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಇತರ ಧರ್ಮದವರು ಎಂದಿಗೂ ತಮ್ಮ ಧರ್ಮದ ವಿರುದ್ಧ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ. ಆದರೆ ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಿಂದಾಗಿ ಅವರು ಇಂತಹ ಧರ್ಮವಿರೋಧಿ ಕೃತ್ಯಗಳನ್ನು ಮಾಡುತ್ತಾರೆ! ಇದರಿಂದ ಹಿಂದೂಗಳಿಗೆ ಧರ್ಮಶಿಕ್ಷಣದ ಅವಶ್ಯಕತೆ ಎಷ್ಟಿದೆ ಎಂದು ಗಮನಕ್ಕೆ ಬರುತ್ತದೆ!