|

ಭುವನೇಶ್ವರ (ಒಡಿಶಾ) – ಎರಡು ದಿನಗಳ ಹಿಂದೆ, ಬಾಂಗ್ಲಾದೇಶದ ನುಸುಳುಕೋರರಿಗೆ ಭಾರತದಲ್ಲಿ ಆಶ್ರಯ ನೀಡಿ ಅವರಿಂದ ಅಪರಾಧಗಳನ್ನು ಮಾಡಿಸುತ್ತಿದ್ದ ಗುಂಪನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಈ ಗುಂಪಿನ ಮುಖ್ಯ ಸೂತ್ರಧಾರ ಸಿಕಂದರ್ ಆಲಮ್ ಅಲಿಯಾಸ್ ಸಿಕೋ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಅನೇಕ ಅನುಮಾನಾಸ್ಪದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಕೋನ ಕಿರಿಯ ಸಹೋದರ ಅಬ್ದುಲ್ ಮೋತಾಲಿಫ್ ಖಾನ್ ಅಲಿಯಾಸ್ ಟಿಕಿ ಎಂಬಾತನನ್ನು ಕೂಡ ಖೋರಧಾದಲ್ಲಿ ಬಂಧಿಸಲಾಗಿದೆ.
1. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಿಕೋ ನುಸುಳುಕೋರರಿಗೆ ಜಗತಸಿಂಗಪುರ ಜಿಲ್ಲೆಯ ಬಹರಾಮಪುರದಲ್ಲಿ ಸರಕಾರಿ ಭೂಮಿಯ ಮೇಲೆ ಗುಡಿಸಲುಗಳನ್ನು ಕಟ್ಟಿಸಿಕೊಟ್ಟಿದ್ದನು. (ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! ಇಷ್ಟೊಂದು ಅಕ್ರಮ ಕಟ್ಟಡ ನಿರ್ಮಾಣವಾಗುವವರೆಗೆ ಪೊಲೀಸರು ಮತ್ತು ಆಡಳಿತ ಮಂಡಳಿಯು ನಿದ್ರಿಸುತ್ತಿತ್ತೇ, ಎಂದು ಸಾಮಾನ್ಯ ಜನರಿಗೆ ಪ್ರಶ್ನೆ ಮೂಡಿದರೆ ತಪ್ಪೇನಿದೆ ! – ಸಂಪಾದಕರು) ಪೊಲೀಸರು ದಾಳಿ ಮಾಡಿದ ನಂತರ, ಗುಡಾರಗಳಲ್ಲಿ ವಾಸಿಸುತ್ತಿದ್ದ ಸುಮಾರು 30 ಬಾಂಗ್ಲಾದೇಶದ ಪ್ರಜೆಗಳು ಪರಾರಿಯಾಗಿದ್ದಾರೆ.
2. ಪೊಲೀಸರು ಅವರನ್ನೂ ಹುಡುಕುತ್ತಿದ್ದಾರೆ. ಆಡಳಿತವು ತಕ್ಷಣವೇ ಕ್ರಮ ಕೈಗೊಂಡು ಸರಕಾರಿ ಭೂಮಿಯ ಮೇಲಿನ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದೆ. ಇದರಲ್ಲಿ ಸಿಕೋನ 10 ಕೊಠಡಿಗಳ ಕಾಂಕ್ರೀಟ್ ಮನೆ ಮತ್ತು 7 ಗುಡಿಸಲುಗಳು ಸೇರಿವೆ.
3. ಪೊಲೀಸರು ಸಿಕೋನ ಮನೆಯಿಂದ 3 ಕತ್ತಿ, 1 ಬಂದೂಕು ಮತ್ತು 7 ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ನುಸುಳುಕೋರರ ಈ ಅನಧಿಕೃತ ಜಾಲವನ್ನು ನಡೆಸಲು ಸಿಕೋಗೆ ವಿದೇಶದಿಂದ ಹಣಕಾಸು ನೆರವು ಸಿಗುತ್ತಿತ್ತೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!