ಹಿಂದೂಗಳ ಅಸ್ತಿತ್ವ ನಾಶವಾದರೆ, ಜಗತ್ತೂ ನಾಶವಾಗುತ್ತದೆ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ

ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರಿಂದ ಮಣಿಪುರದಲ್ಲಿ ಮಾರ್ಗದರ್ಶನ

ಇಂಫಾಲ (ಮಣಿಪುರ) – ಭಾರತ ಒಂದು ಅಮರ ಸಮಾಜ ಮತ್ತು ಸಂಸ್ಕೃತಿಯ ಹೆಸರಾಗಿದೆ. ಇತರ ಸಂಸ್ಕೃತಿಗಳು ಬಂದವು, ಪ್ರಜ್ವಲಿಸಿದವು ಮತ್ತು ಕಣ್ಮರೆಯಾದವು (ಅಳಿದುಹೋದವು). ಇವೆಲ್ಲದರ ಉದಯ ಮತ್ತು ಅಸ್ತವನ್ನು ನಾವು ನೋಡಿದ್ದೇವೆ. ಆದರೂ, ನಾವು ಇಂದಿಗೂ ಇದ್ದೇವೆ, ಮುಂದೆಯೂ ಇರುತ್ತೇವೆ. ಇದಕ್ಕೆ ಕಾರಣ, ನಾವು ಸಮಾಜದ ಒಂದು ಮೂಲ ಜಾಲವನ್ನು ನಿರ್ಮಿಸಿದ್ದೇವೆ. ಹಾಗಾಗಿ, ಹಿಂದೂ ಸಮಾಜ ಅಸ್ತಿತ್ವದಲ್ಲಿ ಉಳಿಯುತ್ತದೆ. ಹಿಂದೂ ಉಳಿಯದಿದ್ದರೆ, ಜಗತ್ತು ಉಳಿಯುವುದಿಲ್ಲ. ಏಕೆಂದರೆ, ಹಿಂದೂ ಸಮಾಜವೇ ಜಗತ್ತಿಗೆ ಕಾಲಕಾಲಕ್ಕೆ ಧರ್ಮದ ಸರಿಯಾದ ಅರ್ಥವನ್ನು ಹೇಳುತ್ತಾ ಮತ್ತು ಮಾರ್ಗದರ್ಶನ ನೀಡುತ್ತಾ ಬಂದಿದೆ. ಇದು ನಮಗೆ ದೇವರು ನೀಡಿದ ಕರ್ತವ್ಯವಾಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ. ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರು ಹೇಳಿಕೆ ನೀಡಿದರು. ಪ.ಪೂ. ಭಾಗವತ ಅವರು ಮಣಿಪುರ ಪ್ರವಾಸದಲ್ಲಿದ್ದಾರೆ.

ಪ.ಪೂ. ಸರಸಂಘಚಾಲಕ ಅವರು ಮಂಡಿಸಿದ ಮಹತ್ವದ ಅಂಶಗಳು!

1. ಜಗತ್ತಿನ ಎಲ್ಲಾ ದೇಶಗಳ ಮೇಲೆ ವಿವಿಧ ರೀತಿಯ ಪರಿಸ್ಥಿತಿಗಳು ಬಂದೆರಗಿದವು. ಕೆಲವು ದೇಶಗಳು ಅದರಲ್ಲಿ ನಾಶವಾದವು. ಯೂನಾನ್ (ಗ್ರೀಸ್), ಈಜಿಪ್ಟ್ ಮತ್ತು ರೋಮ್ ಇವೆಲ್ಲವೂ ನಾಶವಾದವು.

2. ಪ್ರತಿಯೊಂದು ಸಮಸ್ಯೆಗೂ ಅಂತ್ಯ ಸಾಧ್ಯವಿದೆ. ಸಮಾಜವು ನಕ್ಸಲವಾದವನ್ನು ಸಹಿಸಿಕೊಳ್ಳಬಾರದು ಎಂದು ನಿರ್ಧರಿಸಿದಾಗ, ಅದರ ಅಂತ್ಯವು ಹತ್ತಿರವಾಗುತ್ತಾ ಬಂದಿದೆ.

3. ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯನು ಅಸ್ತವಾಗುತ್ತಿರಲಿಲ್ಲ; ಆದರೆ ಭಾರತದಲ್ಲಿ ಅವರ ಅಸ್ತಕ್ಕೆ ಆರಂಭವಾಯಿತು. ಇದಕ್ಕಾಗಿ ನಾವು 1857 ರಿಂದ 1947 ರವರೆಗೆ 90 ವರ್ಷಗಳ ಕಾಲ ಪ್ರಯತ್ನ ಮಾಡಿದೆವು. ದೀರ್ಘಕಾಲ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು.

4. ದೇಶವು ಎಂದಿಗೂ ಯಾರ ಮೇಲೂ ಅವಲಂಬಿತವಾಗಿರಬಾರದು. ನಮ್ಮ ಆರ್ಥಿಕತೆಯು ಸಂಪೂರ್ಣವಾಗಿ ‘ಆತ್ಮನಿರ್ಭರ’ (ಸ್ವಾವಲಂಬಿ) ಆಗಿರಬೇಕು. ನಮ್ಮಲ್ಲಿ ಆರ್ಥಿಕ, ಸೈನ್ಯ, ಹಾಗೆಯೇ ಜ್ಞಾನ ಸಾಮರ್ಥ್ಯ ಇರಬೇಕು. ಅದು ಹೆಚ್ಚಾಗಬೇಕು. ದೇಶವು ಸುರಕ್ಷಿತ ಮತ್ತು ಸಮೃದ್ಧವಾಗಿ ಉಳಿಯಬೇಕು.