ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ‘ಸನಾತನ ಮಂಡಳಿ’ಯನ್ನು ಸ್ಥಾಪಿಸಿ! – ಕಥಾವಾಚಕ ದೇವಕಿನಂದನ್ ಠಾಕೂರ್ Kathavachak Devkinandan Thakur

ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಹರಿದ್ವಾರದಲ್ಲಿ ‘ವಿಶ್ವ ಸನಾತನ ಮಹಾಪೀಠ’ ನಿರ್ಮಾಣ!

ಹರಿದ್ವಾರ (ಉತ್ತರಾಖಂಡ) – ಸ್ವಾತಂತ್ರ್ಯದಿಂದ ಸಮಯದಿಂದಲೂ ಭಾರತದಲ್ಲಿ ‘ವಕ್ಫ್ ಮಂಡಳಿ’ ಇದೆ. ಹಾಗಿರುವಾಗ ಹಿಂದೂಗಳಿಗಾಗಿ ‘ಸನಾತನ ಬೋರ್ಡ್’ ಏಕೆ ಇರಬಾರದು? ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ‘ಸನಾತನ ಬೋರ್ಡ್’ವನ್ನು ಸ್ಥಾಪಿಸಬೇಕು ಎಂದು ಸುಪ್ರಸಿದ್ಧ ಕಥಾವಾಚಕ ದೇವಕಿನಂದನ್ ಠಾಕೂರ್ ಅವರು ಇಲ್ಲಿ ಆಗ್ರಹಿಸಿದ್ದಾರೆ. ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಹರಿದ್ವಾರದಲ್ಲಿ ನವೆಂಬರ್ 21 ರಂದು ‘ವಿಶ್ವ ಸನಾತನ ಮಹಾಪೀಠ’ದ ಶಿಲಾಪೂಜೆ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇಶಾದ್ಯಂತದ ಪ್ರಮುಖ ಸಂತರು ಮತ್ತು ಕಥಾವಾಚಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಥಾವಾಚಕರಾದ ದೇವಕಿನಂದನ್ ಠಾಕೂರ್ ಅವರು ಮಾತನಾಡಿ, “ಯಾವುದೇ ಶಾಲೆಯಲ್ಲಿ ಮಕ್ಕಳಿಗೆ ತಿಲಕ (ನಾಮ) ಇಡುವುದನ್ನು ತಡೆದರೆ, ಪೋಷಕರು ಶಾಲೆಗೆ ಹೋಗಿ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ ಕೇಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಕೇವಲ ಸನಾತನದ ಉಪದೇಶ ಮಾಡಬಾರದು, ಬದಲಿಗೆ ಅವರನ್ನು ಹೆಮ್ಮೆಯಿಂದ ಸನಾತನಿಗಳನ್ನಾಗಿ ಮಾಡಬೇಕು. ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳಿಗೆ ಹೋಲಿಸಿದರೆ ಹಿಂದೂಗಳಲ್ಲಿ ಧಾರ್ಮಿಕ ಶಿಕ್ಷಣದ ಪ್ರಮಾಣ ಬಹಳ ಕಡಿಮೆ ಇದೆ. ಮುಸ್ಲಿಮರ ಮಕ್ಕಳು ಮದರಸಾಗಳಿಗೆ ಹೋಗುತ್ತಾರೆ; ಆದರೆ ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೋಗುತ್ತಾರೆ, ಅಲ್ಲಿ ಸನಾತನ ಮೌಲ್ಯಗಳನ್ನು ಕಲಿಸುವುದಿಲ್ಲ. ನಾವು ನಮ್ಮ ಮಕ್ಕಳಿಗೆ ಶ್ರೀರಾಮ, ಶ್ರೀಕೃಷ್ಣ, ರಾಮಾಯಣ ಮತ್ತು ಗೀತೆಯ ಪಾಠಗಳನ್ನು ಹೇಳಿಕೊಟ್ಟಿದ್ದರೆ, ಇಂದು ಮಥುರಾದಲ್ಲಿ ಶ್ರೀಕೃಷ್ಣನ ಭವ್ಯ ಮಂದಿರವನ್ನು ನಿರ್ಮಿಸಬಹುದಿತ್ತು. ನಾವು ಧರ್ಮಕ್ಕಿಂತ ಹಣಕ್ಕೆ ಹೆಚ್ಚು ಮಹತ್ವ ಕೊಟ್ಟೆವು, ಇದರಿಂದಾಗಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶವಾಯಿತು. ನಮ್ಮ ಎಲ್ಲಾ ತೀರ್ಥಕ್ಷೇತ್ರಗಳು ಮಾಂಸ ಮತ್ತು ಮದ್ಯದ ಅಂಗಡಿಗಳಿಂದ ಮುಕ್ತವಾಗಿರಬೇಕು,” ಎಂದು ಅವರು ಕರೆ ನೀಡಿದರು.

೧೦೦ ಎಕರೆ ಭೂಮಿಯಲ್ಲಿ ‘ವಿಶ್ವ ಸನಾತನ ಮಹಾಪೀಠ’

‘ವಿಶ್ವ ಸನಾತನ ಮಹಾಪೀಠ’ ಯೋಜನೆಯು ೧೦೦ ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದ್ದು, ಈ ಯೋಜನೆಗಾಗಿ ಅಂದಾಜು ೧,೦೦೦ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು. ಬಾಬಾ ಹಠಯೋಗಿ ಮತ್ತು ರಾಮವಿಶಾಲ್ ದಾಸ್ ಮಹಾರಾಜ್ ಅವರು ಈ ಯೋಜನೆಯ ವಿವಿಧ ಉದ್ದೇಶಗಳ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದರು. ಈ ಯೋಜನೆಯಲ್ಲಿ ವೇದ ಮಂದಿರ, ಶಂಕರಾಚಾರ್ಯ ಪೀಠಗಳಿಗಾಗಿ ಪ್ರೇರಣಾ ಸಂಕೀರ್ಣ, ೧೦೮ ಸಂತ ನಿವಾಸಗಳು, ಒಂದು ಸ್ವಯಂ ಉದ್ಯೋಗ ಕೇಂದ್ರ ಮತ್ತು ಸ್ಥಳೀಯ ಗೋ ಸಂವರ್ಧನ ಕೇಂದ್ರಗಳನ್ನು ನಿರ್ಮಿಸಲಾಗುವುದು.