ಬಾಹ್ಯಾಕಾಶ ಪ್ರಯಾಣವೇ ಸುಲಭವಾಗಿತ್ತು! – Space Travel

  • ಬೆಂಗಳೂರಿನ ಸಂಚಾರ ದಟ್ಟಣೆಯ ಕುರಿತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಪ್ರತಿಕ್ರಿಯೆ

  • ಕೇವಲ 34 ಕಿ.ಮೀ. ದೂರ ಕ್ರಮಿಸಲು 3 ಗಂಟೆಗಳ ಸಮಯ ತಗುಲಿತು

ಬೆಂಗಳೂರು – ಬಾಹ್ಯಾಕಾಶದ ಪ್ರಯಾಣವೇ ಸುಲಭವಾಗಿತ್ತು, ಎಂದು ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಬೆಂಗಳೂರಿನ ಸಂಚಾರ ದಟ್ಟಣೆಯ ಬಗ್ಗೆ ಇಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ. ಅವರು, ಬಾಹ್ಯಾಕಾಶದಿಂದ ಬೆಂಗಳೂರನ್ನು ತಲುಪುವುದು ಸುಲಭ, ಆದರೆ ಮಾರತ್ತಹಳ್ಳಿಯಿಂದ ಕಾರ್ಯಕ್ರಮದ ಸ್ಥಳದ 34 ಕಿ.ಮೀ. ದೂರವನ್ನು ಕ್ರಮಿಸಲು ನನಗೆ ಮೂರು ಪಟ್ಟು ಹೆಚ್ಚು ಸಮಯ ಹಿಡಿಯಿತು ಎಂದರು. ರಾಜ್ಯ ಸರಕಾರದ ‘ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ’ ಇಲಾಖೆಯು ‘ಫ್ಯೂಚರಾಯಿಸ್’ ಎಂಬ ಪರಿಕಲ್ಪನೆಯ ಮೇಲೆ ಆಯೋಜಿಸಿದ್ದ ‘ಬೆಂಗಳೂರು ಟೆಕ್ ಸಮ್ಮಿಟ್’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶುಭಾಂಶು ಶುಕ್ಲಾ ಅವರು ಉಪಸ್ಥಿತರಿದ್ದರು.

ಪ್ರತಿ ಪ್ರಯಾಣಿಕರು ವರ್ಷಕ್ಕೆ ಅಂದಾಜು 117 ಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕುತ್ತಾರೆ!

ಬೆಂಗಳೂರಿನಲ್ಲಿ 19 ಕಿ.ಮೀ. ದೂರ ಕ್ರಮಿಸಲು ಸುಮಾರು 63 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಪ್ರತಿ ಪ್ರಯಾಣಿಕರು ವರ್ಷಕ್ಕೆ ಅಂದಾಜು 117 ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಜನವರಿ 2025 ರಿಂದ ಜೂನ್ 2025 ರ ಅವಧಿಯಲ್ಲಿ, ಸಂಚಾರ ವ್ಯವಸ್ಥೆಗೆ 3 ಲಕ್ಷಕ್ಕೂ ಹೆಚ್ಚು ಹೊಸ ಖಾಸಗಿ ವಾಹನಗಳು ಸೇರ್ಪಡೆಯಾಗಿವೆ. ಕೇವಲ ಜೂನ್ ತಿಂಗಳಿನಲ್ಲಿಯೇ ಸುಮಾರು 50 ಸಾವಿರ ವಾಹನಗಳು ನೋಂದಣಿಯಾಗಿವೆ. ಸಂಚಾರ ಇಲಾಖೆಯ ಪ್ರಕಾರ, ಈ ಸಂಖ್ಯೆ ಸಂಪೂರ್ಣವಾದುದಲ್ಲ; ಏಕೆಂದರೆ ಹೊರ ಜಿಲ್ಲೆಗಳಿಂದ ಮತ್ತು ರಾಜ್ಯಗಳಿಂದಲೂ ಪ್ರತಿದಿನ ವಾಹನಗಳು ನಗರದಲ್ಲಿ ಪ್ರವೇಶಿಸುತ್ತವೆ.

ಸಂಪಾದಕೀಯ ನಿಲುವು

ರಾಜ್ಯದ ಸಂಚಾರ ದಟ್ಟಣೆಯ ದುಃಸ್ಥಿತಿಯನ್ನು ಬಿಂಬಿಸಲು ಇದಕ್ಕಿಂತ ಬೇರೆ ಯಾವ ಉದಾಹರಣೆ ಬೇಕು!