ಕಾಶ್ಮೀರಿ ಹಿಂದೂಗಳ ೩೫ ವರ್ಷಗಳ ಹೋರಾಟದಲ್ಲಿ ಅತ್ಯಂತ ನಿರ್ಣಾಯಕ ಚಳುವಳಿ! – ರಾಹುಲ ಕೌಲ್ Kashmiri Pandit Issue

‘ಯೂತ್ ಫಾರ್ ಪನೂನ್ ಕಾಶ್ಮೀರ’ದಿಂದ ಪತ್ರಿಕಾಗೋಷ್ಠಿಯ ಮೂಲಕ ‘ಮಹಾಅಭಿಯಾನ ಆಹ್ವಾನ ೨೦೨೬’ ಘೋಷಣೆ

ಜಮ್ಮು – ೩೫ ವರ್ಷಗಳು ಕಳೆದರೂ ಕಾಶ್ಮೀರಿ ಹಿಂದೂಗಳ ಸುರಕ್ಷಿತ ಪುನರ್ವಸತಿ ಅವರ ಮೂಲ ಭೂಮಿಯಾದ ಕಾಶ್ಮೀರ ಕಣಿವೆಯಲ್ಲಿ ಸಾಧ್ಯವಾಗಿಲ್ಲ. ಈ ಕಾರಣದಿಂದ ‘ಯೂತ್ ಫಾರ್ ಪನೂನ್ ಕಾಶ್ಮೀರ’ ಸಂಘಟನೆಯು ಮುಂದಿನ ಹೆಜ್ಜೆ ಇಡುವುದಾಗಿ ಘೋಷಿಸಿದೆ. ಸಂಘಟನೆಯ ಉನ್ನತ ಸಮಿತಿಯ ಅಧ್ಯಕ್ಷರಾದ ಶ್ರೀ. ರಾಹುಲ ಕೌಲ್ ಅವರು, ಜನವರಿ ೧೬, ೨೦೨೬ ರಿಂದ ‘ಮಹಾಅಭಿಯಾನ ಆಹ್ವಾನ ೨೦೨೬’ ಪ್ರಾರಂಭವಾಗಲಿದೆ, ನಿರಾಶ್ರಿತ ಕಾಶ್ಮೀರಿ ಹಿಂದೂಗಳ ೩೫ ವರ್ಷಗಳ ಹೋರಾಟದಲ್ಲಿ ಇದು ಅತ್ಯಂತ ನಿರ್ಣಾಯಕ ಚಳುವಳಿಯಾಗಿದೆ ಎಂದು ಶ್ರೀ. ಕೌಲ್ ಅವರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದರು. ನವೆಂಬರ್ ೧೯ ರಂದು ಜಮ್ಮುವಿನಲ್ಲಿ ಸಂಘಟನೆಯು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೌಲ್ ಮಾತನಾಡುತ್ತಿದ್ದರು.

೧. ಕೌಲ್ ಅವರು ಮಾತು ಮುಂದುವರೆಸಿ, ಮಹಾಅಭಿಯಾನ ಎಂದರೆ ‘ನರಮೇಧದಿಂದ ತಮ್ಮ ತಾಯ್ನಾಡಿನಿಂದ ಬೇರ್ಪಟ್ಟಿದ್ದರೂ ಆತ್ಮದಿಂದ ಈ ಭೂಮಿಗೆ ಜೋಡಿಕೊಂಡಿರುವ ಜನರ ದೃಢವಾದ ಪುನರುತ್ಥಾನ’ ಎಂದರ್ಥ. ಭಾರತ ಸರಕಾರವು ಈಗಲಾದರೂ ಸ್ಥಳಾಂತರಗೊಂಡ ಹಿಂದೂಗಳೊಂದಿಗೆ ಗಂಭೀರವಾಗಿ, ತಕ್ಷಣವೇ ಮತ್ತು ಸಾಂವಿಧಾನಿಕ ಜವಾಬ್ದಾರಿಯೊಂದಿಗೆ ಸಂವಾದ ನಡೆಸಬೇಕು.

೨. ಸಂಘಟನೆಯ ಅಧ್ಯಕ್ಷರಾದ ವಿಠ್ಠಲ್ ಚೌಧರಿ ಅವರು, ಈ ಚಳುವಳಿಯು ಮೂರೂವರೆ ದಶಕಗಳಿಂದ ನಮ್ಮ ಹೃದಯದಲ್ಲಿ ಬೆಂಕಿ ಉರಿಯುವಂತೆ ಇಟ್ಟುಕೊಂಡಿರುವ ಸಮುದಾಯದ ಏಕತೆಯನ್ನು ಪ್ರತಿನಿಧಿಸಲಿದೆ ಎಂದರು.

೩. ‘ಯೂತ್ ಫಾರ್ ಪನೂನ್ ಕಾಶ್ಮೀರ’ದ ಪ್ರಧಾನ ಕಾರ್ಯದರ್ಶಿ ದಿಂಗಬರ್ ರೈನಾ ಅವರು, ಜಮ್ಮುವಿನ ‘ಜಗತಿ ನರಮೇಧ ನಿರಾಶ್ರಿತರ ಶಿಬಿರ’ದಿಂದ ಪ್ರಾರಂಭವಾಗುವ ಈ ಚಳುವಳಿಯು ಪುರ್ಖೂ, ಮೂಠಿ, ನಗರೋಟಾ ಮತ್ತು ಅದರಾಚೆಗಿನ ಹಿಂದೂಗಳನ್ನು ಸಂಘಟಿಸಲಿದೆ ಎಂದು ಸ್ಪಷ್ಟಪಡಿಸಿದರು.

೪. ಸಂಘಟನೆಯ ಕಾರ್ಯದರ್ಶಿ ರಾಜೇಶ್ ಕಚ್ರೂ ಅವರು, ಹಿಂದೂಗಳ ನರಮೇಧವನ್ನು ನಿರಾಕರಿಸಲಾಗದು, ಅದರ ಬಗ್ಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಅಥವಾ ಈ ವಿಷಯವನ್ನು ಸೌಮ್ಯಗೊಳಿಸಲು ಆಗುವುದಿಲ್ಲ. ಅದನ್ನು ಒಪ್ಪಿಕೊಂಡು ಹಿಂದೂಗಳಿಗೆ ನ್ಯಾಯ ಸಿಗಲು ಅವರ ಪುನರ್ವಸತಿಗಾಗಿ ಒಂದು ದೃಢವಾದ ಕಾರ್ಯಯೋಜನೆಯ ಅವಶ್ಯಕತೆಯಿದೆ ಎಂದು ತಿಳಿಸಿದರು.

೫. ಈ ಸಂದರ್ಭದಲ್ಲಿ ಸಂಯೋಜಕ ಸಾಹಿಲ್ ಪಂಡಿತಾ ಹಾಗೂ ನಿರಾಶ್ರಿತರ ಶಿಬಿರಗಳ ಪ್ರಮುಖ ಪ್ರತಿನಿಧಿಗಳಾದ ಪಿಂಟು ಜಿ ಪಂಡಿತಾ, ವಿಜಯ ಪಂಡಿತಾ, ಅನಿಲ ಭಾನ್ ಮತ್ತು ಅಶ್ವನಿ ಭಟ್ ಕೂಡ ಉಪಸ್ಥಿತರಿದ್ದರು.

‘ಯೂತ್ ಫಾರ್ ಪನೂನ್ ಕಾಶ್ಮೀರ’ದಿಂದ ಭಾರತ ಸರಕಾರಕ್ಕೆ ಸ್ಪಷ್ಟ ಸಂದೇಶ!

ಸಂಘಟನೆಯ ನಾಯಕರು, ‘ಮಹಾಅಭಿಯಾನ ಆಹ್ವಾನ ೨೦೨೬’ ಭಾರತ ಸರಕಾರಕ್ಕೆ ಒಂದು ಸ್ಪಷ್ಟ ಸಂದೇಶವಾಗಿದೆ. ಕಾಶ್ಮೀರಿ ಹಿಂದೂಗಳ ತಮ್ಮ ತಾಯ್ನಾಡಿನಲ್ಲಿ ಔಪಚಾರಿಕ ಪುನರ್ವಸತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸದಿದ್ದರೆ, ನ್ಯಾಯ, ಘನತೆ ಮತ್ತು ಸರಿಯಾದ ಪರಿಹಾರಕ್ಕಾಗಿ ಹೋರಾಡುವ ಮಹಾಅಭಿಯಾನವು ವಿಭಿನ್ನ ಮತ್ತು ಹೆಚ್ಚು ದೃಢವಾದ ಆಯಾಮಗಳಲ್ಲಿ ವಿಕಸನಗೊಳ್ಳುತ್ತದೆ.