|

ನಾಸಿಕ – ಮುಂಬರುವ ಸಿಂಹಸ್ಥ ಕುಂಭಮೇಳದಲ್ಲಿ ಸುಮಾರು 1 ಸಾವಿರದ 150 ಎಕರೆ ಪ್ರದೇಶದಲ್ಲಿ ಸಾಧುಗ್ರಾಮವನ್ನು ನಿರ್ಮಿಸುವ ಯೋಜನೆಯಿದೆ. ಇದಕ್ಕಾಗಿ ತಪೋವನದಲ್ಲಿರುವ ಮಹಾನಗರಪಾಲಿಕೆಯ 54 ಎಕರೆ ಜಾಗೆಯಲ್ಲಿನ ಸುಮಾರು 1 ಸಾವಿರದ 700 ವಿವಿಧ ಪ್ರಭೇದಗಳ ಮರಗಳನ್ನು ಕಡಿಯುವುದು, ಕೆಲವನ್ನು ಕತ್ತರಿಸುವುದು ಮತ್ತು ಪುನರ್ ನೆಡುವುದು ಕುರಿತು ನೋಟಿಸ್ ನೀಡಿ ಮಹಾನಗರಪಾಲಿಕೆಯು ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಕೋರಿತ್ತು. ನವೆಂಬರ್ 18 ರಂದು ಅದರ ಕಾಲಮಿತಿಯು ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಗೆ 200ಕ್ಕೂ ಅಧಿಕ ಆಕ್ಷೇಪಣೆಗಳು ಮತ್ತು ಸಲಹೆಗಳು ಸಲ್ಲಿಕೆಯಾಗಿವೆ. ಉದ್ಯಾನ ಅಧೀಕ್ಷಕ ವಿವೇಕ ಭದಾಣೆ ಅವರು ಮಾತನಾಡಿ, ಸಂಬಂಧಪಟ್ಟವರಿಗೆ ವಿಚಾರಣೆಗೆ ಹಾಜರಾಗಲು ಪತ್ರ ವ್ಯವಹಾರ ಮಾಡಲಾಗುವುದು. ಆಕ್ಷೇಪಣೆಗಳ ಸಂಖ್ಯೆ ಅಧಿಕವಾಗಿರುವುದರಿಂದ ನವೆಂಬರ್ 24 ಅಥವಾ 25 ರಂದು ವಿಚಾರಣೆ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕತ್ತರಿಸಲಾಗುವುದು ಎಂದು ತಿಳಿದ ನಂತರ, ಪರಿಸರ ಪ್ರೇಮಿಗಳೊಂದಿಗೆ ನಾಗರಿಕರೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಮರಗಳ ಮೇಲೆ ಹಳದಿ ಗುರುತು ಹಾಕಲಾಗಿದೆ. ಅನೇಕ ಮರಗಳು ಹಳೆಯದಾಗಿದ್ದು, ಅವುಗಳನ್ನು ‘ಪಾರಂಪರಿಕ ವೃಕ್ಷಗಳು’ ಎಂದು ದಾಖಲಿಸಬಹುದು. ಅಂತಹ ಮರಗಳನ್ನು ಕಡಿಯುವುದು ಕೇವಲ ಪರಿಸರದ ದೃಷ್ಟಿಯಿಂದ ಮಾತ್ರವಲ್ಲದೆ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿಯೂ ನೋವುಂಟು ಮಾಡುವ ನಿರ್ಣಯವಾಗಲಿದೆ. 1 ಸಾವಿರದ 700 ಮರಗಳನ್ನು ಕಡಿದರೆ ನಾಸಿಕನ ಹವಾಮಾನ, ನೀರಿನ ಸಂಗ್ರಹ ಮತ್ತು ಗಾಳಿಯ ಗುಣಮಟ್ಟದ ಮೇಲೆ ದೀರ್ಘಕಾಲಿಕ ಮಾರಕ ಪರಿಣಾಮ ಉಂಟಾಗಬಹುದು. ಸಂತರ ನಿವಾಸಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿದರೆ, ಜಗತ್ತಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಎಂದು ಸಹ ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಮರಗಳ ಕಡಿಯುವ ನಿರ್ಣಯವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು, ನಾಗರಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಲಾದ ಕಾಲಮಿತಿಯನ್ನು ವಿಸ್ತರಿಸಬೇಕು, ತಜ್ಞರೊಂದಿಗೆ ಪ್ರತ್ಯಕ್ಷ ಜಂಟಿ ಪರಿಶೀಲನೆಯನ್ನು ಆಯೋಜಿಸಬೇಕು, ಲಭ್ಯವಿದ್ದರೆ ಎಲ್ಲಾ ಪರಿಸರ ವರದಿಗಳು ಮತ್ತು ಪರ್ಯಾಯ ಸ್ಥಳಗಳ ಮೌಲ್ಯಮಾಪನವನ್ನು ಸಾರ್ವಜನಿಕಗೊಳಿಸಬೇಕು, ಎಂಬ ಬೇಡಿಕೆಗಳನ್ನೂ ಸಹ ಆಕ್ಷೇಪಣೆಗಳಲ್ಲಿ ಮಂಡಿಸಲಾಗಿದೆ.
ಹಳೆಯ ಮರಗಳನ್ನು ಸಂರಕ್ಷಿಸುವ ಜವಾಬ್ದಾರಿ ಮಹಾನಗರಪಾಲಿಕೆಯದ್ದಾಗಿದೆ. ಆದ್ದರಿಂದ ವದಂತಿಗಳನ್ನು ನಂಬಬಾರದು, ಎಂದು ಹೆಚ್ಚುವರಿ ಆಯುಕ್ತರಾದ ಕರಿಷ್ಮಾ ನಾಯರ್ ಅವರು ಮನವಿ ಮಾಡಿದ್ದಾರೆ.
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ