
ಜೈಪುರ (ರಾಜಸ್ಥಾನ) – ವಿಶ್ವದ ಎಲ್ಲ ದೇಶಗಳು ಪ್ರತಿ 15 ವರ್ಷಗಳಿಗೊಮ್ಮೆ ತಮ್ಮ ಆದರ್ಶಗಳನ್ನು ಬದಲಾಯಿಸುತ್ತವೆ; ಆದರೆ ಭಾರತದ ಸನಾತನ ಚಿಂತನೆ ಶಾಶ್ವತವಾಗಿದೆ. ಬಲಿಷ್ಠ ಜನರು ಬದುಕಲು ಅತಿ ಹೆಚ್ಚು ಹೋರಾಡುತ್ತಿದ್ದಾರೆ. ಇದರ ಪರಿಣಾಮವಾಗಿ ದುರ್ಬಲ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಜಗತ್ತು ಈಗ ಭಾರತದ ನೆರವನ್ನು ಕೇಳುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನವೆಂಬರ್ 15 ರಂದು ಇಲ್ಲಿ ಹೇಳಿದ್ದಾರೆ. ಜೈಪುರದ ‘ಸವಾಯಿ ಮಾನ್‌ಸಿಂಗ್ ಒಳಾಂಗಣ ಕ್ರೀಡಾಂಗಣ’ದಲ್ಲಿ ಆಯೋಜಿಸಲಾದ ‘ದೀನದಯಾಳ್ ಸ್ಮೃತಿ ಉಪನ್ಯಾಸ ಮಾಲೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಪ.ಪೂ. ಸರಸಂಘಚಾಲಕರು ಮಾತು ಮುಂದುವರೆಸಿ, “ರಾಷ್ಟ್ರೀಯತೆಯಿಂದ ಯುದ್ಧಗಳು ನಡೆಯುತ್ತವೆ; ಆದ್ದರಿಂದ ಜಾಗತಿಕ ನಾಯಕರು ಅಂತರರಾಷ್ಟ್ರೀಯ ಏಕತೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ; ಆದರೆ ಅಂತರರಾಷ್ಟ್ರೀಯ ಏಕತೆಯ ಬಗ್ಗೆ ಮಾತನಾಡುವವರು ತಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ಅತ್ಯುನ್ನತ ಸ್ಥಾನದಲ್ಲಿ ಇಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಮಾನವನು ಭೌತಿಕವಾಗಿ ದೊಡ್ಡ ಪ್ರಗತಿ ಸಾಧಿಸಿದ್ದರೂ, ಅನೇಕ ಹೊಸ ಸವಾಲುಗಳು ಸೃಷ್ಟಿಯಾಗಿವೆ. ಎಷ್ಟು ಔಷಧಿಗಳನ್ನು ಕಂಡುಹಿಡಿಯಲಾಗಿದೆಯೋ, ಅಷ್ಟೇ ಹೊಸ ರೋಗಗಳು ಸಹ ಹುಟ್ಟಿಕೊಂಡಿವೆ. ಕೆಲವು ರೋಗಗಳು ಔಷಧಿಗಳಿಂದಲೇ ಉಂಟಾಗುತ್ತಿವೆ. ಮಾನವನ ರೋಗನಿರೋಧಕ ಶಕ್ತಿ ದುರ್ಬಲಗೊಂಡಿದೆ, ಇದರಿಂದ ಮಾನವಕುಲದ ಅಸ್ತಿತ್ವದ ಬಗ್ಗೆ ಕಳವಳ ಹೆಚ್ಚಾಗಿದೆ. ಜಗತ್ತಿನ 4% ಜನಸಂಖ್ಯೆ 80% ಲಭ್ಯವಿರುವ ಸಂಪನ್ಮೂಲಗಳನ್ನು ಬಳಸುತ್ತದೆ, ಇದರಿಂದ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಇನ್ನಷ್ಟು ಹೆಚ್ಚುತ್ತಿದೆ” ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ