
ರಾಮನಾಥಿ (ಗೋವಾ) – ಸುಪ್ರಸಿದ್ಧ ಹಿಂದುತ್ವನಿಷ್ಠ ಲೇಖಕ ಶ್ರೀ. ಶಂತನೂ ಗುಪ್ತಾ ಅವರು ನವೆಂಬರ್ ೧೪ ರಂದು ಇಲ್ಲಿನ ಸನಾತನ ಆಶ್ರಮಕ್ಕೆ ಸೌಹಾರ್ದಯುತ ಭೇಟಿ ನೀಡಿದರು. ಈ ಸಮಯದಲ್ಲಿ ಅವರೊಂದಿಗೆ ಪತ್ನಿ ಸೌ. ಶ್ವೇತಾ, ಮಗ ಅಭಿರಾಮ್ ಮತ್ತು ಮಗಳು ನಕ್ಷತ್ರಾ, ಹಾಗೆಯೇ ಗೋವಾದ ಉದ್ಯಮಿ ಶ್ರೀ. ರಾಘವ್ ಶೆಟ್ಟಿ ಅವರೂ ಉಪಸ್ಥಿತರಿದ್ದರು. ಸನಾತನದ ಸಾಧಕರಾದ ಶ್ರೀ. ಗಿರಿಜಯ ಪ್ರಭುದೇಸಾಯಿ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯಗಳ ಕುರಿತು ಎಲ್ಲರಿಗೂ ವಿಸ್ತಾರವಾಗಿ ಮಾಹಿತಿ ನೀಡಿದರು. ಈ ಸಮಯದಲ್ಲಿ ಎಲ್ಲರೂ ಅತ್ಯಂತ ಕುತೂಹಲದಿಂದ ಧರ್ಮ ಮತ್ತು ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ತಿಳಿದುಕೊಂಡರು.
ಸಾತ್ವಿಕತೆಯನ್ನು ಮಾನದಂಡವಾಗಿಟ್ಟುಕೊಂಡು ಜೀವನ ನಡೆಸುವುದು ಎಂಬ ವಿಷಯ ಅವರಿಗೆ ಬಹಳ ಹಿಡಿಸಿತು. ಆಶ್ರಮದ ಸ್ವಚ್ಛತೆ ಮತ್ತು ಅಚ್ಚುಕಟ್ಟಿನ ಬಗ್ಗೆ ಅವರಿಗೆ ಆಶ್ಚರ್ಯವಾಯಿತು. ಈ ಸಮಯದಲ್ಲಿ ಸೌ. ಶ್ವೇತಾ ಅವರು ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಗಾಗಿ ಸಾಧಕರು ಅನುಸರಿಸುತ್ತಿರುವ ಪ್ರಕ್ರಿಯೆ ಮತ್ತು ಫಲಕದ ಮೇಲೆ ತಪ್ಪುಗಳನ್ನು ಬರೆಯುವ ಭಾಗವನ್ನು ಮನೆಯಲ್ಲಿ ಪ್ರಾರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಶ್ರೀ. ಗುಪ್ತಾ ಅವರು ಮಾತನಾಡಿ, ಗೋವಾದಂತಹ ಸ್ಥಳದಲ್ಲಿ ಇಷ್ಟು ಉತ್ತಮವಾದ ಸಾತ್ವಿಕ ಆಶ್ರಮ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ. ಧ್ಯಾನ ಮಂದಿರದಲ್ಲಿ ಬಹಳಷ್ಟು ಸಾತ್ವಿಕತೆ ಇದೆ. ಇಲ್ಲಿ ಒಳ-ಒಳಗೆ, ಅಂದರೆ ಶೂನ್ಯದೊಳಗೆ ಹೋಗುತ್ತಿರುವ ಅನುಭವ ಆಗುತ್ತಿದೆ ಎಂದರು.
ಶ್ರೀ. ಶಂತನೂ ಗುಪ್ತಾ ಅವರ ಪರಿಚಯ
ಶ್ರೀ. ಶಂತನೂ ಗುಪ್ತಾ ಅವರು ಮೂಲತಃ ಉತ್ತರಾಖಂಡ ರಾಜ್ಯದ ಋಷಿಕೇಶದವರು. ಸದ್ಯ ಅವರು ಉತ್ತರಪ್ರದೇಶದ ನೋಯ್ಡಾದಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರಸಿದ್ಧ ಲೇಖಕರು, ಹಾಗೆಯೇ ರಾಜಕೀಯ ವಿಶ್ಲೇಷಕರೂ ಆಗಿದ್ದಾರೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರಿತು ೨ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ‘ದಿ ಮಾಂಕ್ ಹೂ ಬಿಕೇಮ್ ಚೀಫ್ ಮಿನಿಸ್ಟರ್’ ಎಂಬ ಪುಸ್ತಕವನ್ನು ಆಧರಿಸಿದ ‘ಅಜೇಯ : ದಿ ಅನ್ಟೋಲ್ಡ್ ಸ್ಟೋರಿ ಆಫ್ ಅ ಯೋಗಿ’ ಎಂಬ ಚಲನಚಿತ್ರವು ೨ ತಿಂಗಳ ಹಿಂದೆ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.

ಚಿತ್ರದ ಪ್ರಚಾರಕ್ಕಾಗಿ ಅವರು ಭಾರತದ ಎಲ್ಲ ರಾಜ್ಯಗಳು, ಹಾಗೂ ಅಮೆರಿಕ, ಯುರೋಪ್‌ಗಳಿಗೂ ಪ್ರವಾಸ ಮಾಡಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಅವರು ಗೋವಾಗೆ ಬಂದಿದ್ದರು. ಈ ಪ್ರವಾಸದ ನಿಮಿತ್ತ ಅವರು ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಅವರ ಸಂಪೂರ್ಣ ಕುಟುಂಬವು ಅತ್ಯಂತ ಆಧ್ಯಾತ್ಮಿಕ ಮನೋಭಾವವನ್ನು ಹೊಂದಿದ್ದು, ಒಂದು ಸಂಪ್ರದಾಯದ ಪ್ರಕಾರ ಸಾಧನೆಯನ್ನೂ ಮಾಡುತ್ತಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”