ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಶ್ರೀ. ಚೇತನ ರಾಜಹಂಸ ಅವರಿಂದ ಮುಖ್ಯಮಂತ್ರಿಗಳ ಭೇಟಿ!

ಉತ್ತರಾಖಂಡ – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಹ ಧಾಮಿ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಆಹ್ವಾನ ನೀಡಿದರು. ಮುಖ್ಯಮಂತ್ರಿ ಪುಷ್ಕರ್ ಸಿಂಹ ಧಾಮಿ ಅವರು ಮಹೋತ್ಸವಕ್ಕೆ ಹಾಜರಾಗಿ ‘ಸಮಾನ ನಾಗರಿಕ ಸಂಹಿತೆ’ಯ (Uniform Civil Code) ಕುರಿತು ಜನರನ್ನು ಉದ್ದೇಶಿಸಿ ಮಾತನಾಡಲು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡೆಹ್ರಾಡೂನ್ ಶಾಸಕ ಶ್ರೀ. ಉಮೇಶ್ ಶರ್ಮಾ ಕಾವು ಅವರು ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ವೈಭವವನ್ನು ವಿವರಿಸಿ, ದೆಹಲಿಯಲ್ಲಿ ನಡೆಯಲಿರುವ ಮಹೋತ್ಸವಕ್ಕೆ ಹಾಜರಾಗುವಂತೆ ಧಾಮಿ ಅವರಿಗೆ ವಿನಂತಿಸಿದರು.
🇮🇳 Uttarakhand CM Pushkar Singh Dhami (@pushkardhami) invited to ‘Sanatan Rashtra Shankhnad Mahotsav’! 🚩
🙏 Sadguru Dr. Charudatta Pingale (@hjsdrpingale) National Guide @HinduJagrutiOrg and Shri Chetan Rajhans (@1chetanrajhans) National Spokesperson @SanatanSanstha met the… pic.twitter.com/GHpUwuE3By
— Sanatan Prabhat (@SanatanPrabhat) November 13, 2025
ಈ ಸಂದರ್ಭದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಮುಖ್ಯಮಂತ್ರಿ ಧಾಮಿ ಅವರಿಗೆ ಡಿಸೆಂಬರ್ 13 ರಿಂದ 15 ರವರೆಗೆ ಮಹೋತ್ಸವದ ಸ್ಥಳದಲ್ಲಿ ಏರ್ಪಡಿಸಲಾಗುವ ಶಸ್ತ್ರಾಸ್ತ್ರ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು ಮತ್ತು ಹಿಂದಿ ಭಾಷೆಯಲ್ಲಿನ ‘ಸನಾತನ ಪಂಚಾಂಗ 2026’ ಅನ್ನು ಉಡುಗೊರೆಯಾಗಿ ನೀಡಿದರು.
ಡೆಹ್ರಾಡೂನ್ ಶಾಸಕ ಶ್ರೀ. ಉಮೇಶ್ ಶರ್ಮಾ ಕಾವು ಮತ್ತು ಸಹಸ್ರಪುರ ಶಾಸಕ ಶ್ರೀ. ಸಹದೇವ್ ಸಿಂಹ ಪುಂಡೀರ್ ಅವರಿಗೂ ಆಮಂತ್ರಣ ನೀಡಲಾಯಿತು. |


ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ