ಗೋವಾ ರಾಜ್ಯಕ್ಕೆ ಇದ್ದ ನಿರ್ಣಯ ಇಡೀ ದೇಶಕ್ಕೆ ಅನ್ವಯ!

ಜಾರ್ಖಂಡ್ – ದೇಶದ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗಾಗಿ ಸರ್ವೋಚ್ಚ ನ್ಯಾಯಾಲಯವು ನವೆಂಬರ್ 13 ರಂದು ಐತಿಹಾಸಿಕ ಆದೇಶವನ್ನು ನೀಡಿದ್ದು, ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಒಳಗೆ, ಹಾಗೆಯೇ ಅವುಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವಂತಿಲ್ಲ ಎಂದು ಸ್ಪಷ್ಟ ನಿರ್ಣಯ ನೀಡಿದೆ. ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ ಚಂದ್ರನ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಟಿ.ಎನ್. ಗೋದಾವರ್ಮನ್ ತಿರುಮಲಪಾಡ್ ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ಹಿಂದೆ ಇಂತಹ ನಿಯಮವು ಕೇವಲ ಗೋವಾ ರಾಜ್ಯಕ್ಕೆ ಅನ್ವಯವಾಗಿತ್ತು; ಆದರೆ ಈಗ ಅದು ಇಡೀ ದೇಶಕ್ಕೆ ಅನ್ವಯವಾಗಲಿದೆ.
1. ನ್ಯಾಯಾಲಯವು, ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವುದು ವನ್ಯಜೀವಿಗಳಿಗೆ ಅಪಾಯಕಾರಿಯಾಗುತ್ತದೆ, ಆದ್ದರಿಂದ, ದೇಶಾದ್ಯಂತ ಇಂತಹ ಯಾವುದೇ ಗಣಿಗಾರಿಕೆ ಅನುಮತಿಯನ್ನು ಮಾನ್ಯ ಮಾಡಲಾಗುವುದಿಲ್ಲ, ಎಂದು ಅಭಿಪ್ರಾಯಪಟ್ಟಿತು.
2. ನ್ಯಾಯಾಲಯವು ಜಾರ್ಖಂಡ್ ನ ಸರಂಡಾ ಪ್ರದೇಶವನ್ನು ‘ವನ್ಯಜೀವಿ ಅಭಯಾರಣ್ಯ’ ಎಂದು ಘೋಷಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಆ ಪ್ರದೇಶದ ಆದಿವಾಸಿಗಳು ಮತ್ತು ವನವಾಸಿಗಳ ಹಕ್ಕುಗಳನ್ನು ಅರಣ್ಯ ಹಕ್ಕುಗಳ ಕಾಯಿದೆಯಡಿಯಲ್ಲಿ ಸಂರಕ್ಷಿಸಲು ಸಹ ಹೇಳಿದೆ, ಜೊತೆಗೆ ಶಾಲೆಗಳು, ರೈಲು ಮಾರ್ಗಗಳು, ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳು ಯಥಾಸ್ಥಿತಿ ಉಳಿಯುತ್ತವೆ; ಆದರೆ ಆ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ನಡೆಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
3. ಈ ನಿರ್ಣಯದಿಂದಾಗಿ ದೇಶಾದ್ಯಂತ ಎಲ್ಲ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸುತ್ತಲೂ ‘ನೋ ಮೈನಿಂಗ್ ಜೋನ್’ (ಗಣಿಗಾರಿಕೆ ನಿಷೇಧಿತ ಪ್ರದೇಶ) ನಿಗದಿಪಡಿಸಲಾಗಿದ್ದು, ಇದರಿಂದ ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ಸಿಗಲಿದೆ ಎಂದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.
4. ‘ಗೋವಾ ಫೌಂಡೇಶನ್’ ಪ್ರಕರಣದಲ್ಲಿ ಗೋವಾಕ್ಕೆ ಈ ನಿಷೇಧವನ್ನು ಈಗಾಗಲೇ ಜಾರಿಗೊಳಿಸಲಾಗಿತ್ತು; ಆದರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ದೇಶಾದ್ಯಂತ ಜಾರಿಗೊಳಿಸುವುದು ಅವಶ್ಯಕ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಗೋವಾ ಫೌಂಡೇಶನ್ ಪ್ರಕರಣದ ನಿರ್ದೇಶನಗಳು ಕೇವಲ ಗೋವಾ ರಾಜ್ಯಕ್ಕೆ ಮಾತ್ರ ಇದ್ದವು; ಆದರೆ ಈಗ ಅವು ಎಲ್ಲ ರಾಜ್ಯಗಳಿಗೆ ಅನ್ವಯವಾಗುತ್ತವೆ. ಈ ಕುರಿತಾದ ಜೂನ್ 3, 2022 ರ ಹಿಂದಿನ ನಿರ್ದೇಶನಗಳಲ್ಲಿಯೂ ಸುಧಾರಣೆ ಮಾಡಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !