ಭೋಪಾಲನಲ್ಲಿ ಹಿಂದೂ ಮಾಡೆಲ್‌ ನ ಕೊಲೆ! : Qasim Ahmed Arrested

  • ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ನ ಆಘಾತಕಾರಿ ಪ್ರಕರಣ ಬೆಳಕಿಗೆ!

  • ಪ್ರೇಮಿ ಕಾಸಿಮ್ ಅಹಮದ್ ಬಂಧನ!

ಭೋಪಾಲ (ಮಧ್ಯಪ್ರದೇಶ) – ಇಲ್ಲಿ ಒಬ್ಬ ಹಿಂದೂ ಮಾಡೆಲ್ ಸಂದೇಹಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ. ಈ ಸಾವಿಗೆ ಮಗಳ ಪ್ರೇಮಿ ಕಾಸಿಮ ಅಹಮದ್ ಕಾರಣ ಎಂದು ಮಗಳ ತಾಯಿ ಆರೋಪಿಸಿದ್ದಾರೆ. ಕಾಸಿಮ ಅಹಮದ್ ತನ್ನ ಮಗಳಿಗೆ ಮೋಸ ಮಾಡಿದ್ದಾನೆ ಎಂದು ತಾಯಿ ಹೇಳಿದ್ದಾರೆ. ಕಾಸಿಮ್ ‘ರಾಹುಲ್’ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡು ಆಕೆಯೊಂದಿಗೆ ಒಡನಾಟ ಬೆಳೆಸಿದ್ದನು. ಕಾಸಿಮ್ ಅಹಮದ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಇದು ‘ಲವ್ ಜಿಹಾದ್’ ಪ್ರಕರಣ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕಾಸಿಮ ಅಹಮದನನ್ನು ಬಂಧಿಸಿದ್ದಾರೆ.

ಮಗಳ ತಾಯಿಯು, ಕಾಸಿಮ ಅಹಮದ ರಾತ್ರಿ 11 ಗಂಟೆಯ ಸುಮಾರಿಗೆ ನನ್ನ ಮಗಳನ್ನು ಭೋಪಾಲನ ಚಿರಾಯು ಆಸ್ಪತ್ರೆಗೆ ದಾಖಲಿಸಿದ್ದನು. ಅಲ್ಲಿ ವೈದ್ಯರು ಆಕೆಯನ್ನು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ಆಕೆಯ ದೇಹದ ಮೇಲೆ ಗಾಯಗಳು ಮತ್ತು ಹಲ್ಲೆಯ ಅಸಂಖ್ಯಾತ ಗುರುತುಗಳಿದ್ದವು. ಆಕೆಯ ಸಾವು ಸ್ವಾಭಾವಿಕವಾಗಿರಲಿಲ್ಲ, ಬದಲಿಗೆ ಆಕೆಯನ್ನು ಕೊಲೆ ಮಾಡಲಾಗಿದೆ. ಪೊಲೀಸರು ಮಗಳ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಕೈ ಸೇರಿದ ನಂತರ ಸಾವಿಗೆ ನಿಜವಾದ ಕಾರಣ ಸ್ಪಷ್ಟವಾಗಲಿದೆ. ಇದರ ನಂತರ ಕಾಸಿಮ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಪ್ರಕರಣಗಳಲ್ಲಿ ಈಗ ಮತಾಂಧರಿಗೆ ಗಲ್ಲು ಶಿಕ್ಷೆ ನೀಡುವ ಕಾನೂನನ್ನು ಮಾಡುವುದು ಅವಶ್ಯಕವಾಗಿದೆ. ಪಾಕಿಸ್ತಾನದಲ್ಲಿ ಅಥವಾ ಯಾವುದೇ ಇಸ್ಲಾಮಿ ದೇಶದಲ್ಲಿ ಹಿಂದೂ ಯಾವಾಗಲಾದರೂ ಮುಸ್ಲಿಂ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಮೋಸಗೊಳಿಸಲು ಸಾಧ್ಯವೇ? ಹಾಗೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!