ಸಹಾರನಪುರ (ಉತ್ತರ ಪ್ರದೇಶ): ವೈದ್ಯ ಜಿಹಾದಿ ಭಯೋತ್ಪಾದಕನ ಬಂಧನ

ಆಸ್ಪತ್ರೆಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ!

ಶ್ರೀನಗರ (ಜಮ್ಮು-ಕಾಶ್ಮೀರ) – ಜೈಶ್-ಎ-ಮೊಹಮ್ಮದ್’ ಭಯೋತ್ಪಾದಕ ಸಂಘಟನೆಯ ಜಾಲವನ್ನು ಮತ್ತೆ ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದ ಜಿಹಾದಿ ವೈದ್ಯ ಆದಿಲ್ ಅಹ್ಮದ್ ರಾಥರ್ ಎಂಬಾತನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಈತನು ಕೆಲವು ತಿಂಗಳುಗಳಿಂದ ಉತ್ತರ ಪ್ರದೇಶದ ಸಹಾರನಪುರದ ಅಂಬಾಲಾ ರಸ್ತೆಯಲ್ಲಿರುವ ಒಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಇತ್ತೀಚೆಗೆ ಅಲ್ಲಿನ ಒಬ್ಬ ಮಹಿಳಾ ವೈದ್ಯರನ್ನು ವಿವಾಹವಾಗಿದ್ದನು. ಈತನನ್ನು ಸಹಾರನಪುರದಿಂದ ಬಂಧಿಸಲಾಗಿದೆ. ಆದಿಲ್ ಮೂಲತಃ ಕಾಜಿಗುಂಡದ ನಿವಾಸಿಯಾಗಿದ್ದು, ಈ ಹಿಂದೆ ಅನಂತನಾಗ (ಜಮ್ಮು-ಕಾಶ್ಮೀರ) ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ನಿವಾಸಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದನು.

ಆಸ್ಪತ್ರೆಯನ್ನು ಭಯೋತ್ಪಾದಕರ ತಾಣವನ್ನಾಗಿ ಮಾಡಿದ್ದ!

ಆದಿಲ್ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಭಯೋತ್ಪಾದಕರಿಗೆ ಅಡಗಿಕೊಳ್ಳಲು ಸ್ಥಳಾವಕಾಶವನ್ನು ಒದಗಿಸಿದ್ದನು. ಅವನು ಆಸ್ಪತ್ರೆಯಲ್ಲೇ ಶಸ್ತ್ರಾಸ್ತ್ರಗಳನ್ನು ಬಚ್ಚಿಡುತ್ತಿದ್ದನು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದನು. ಪೊಲೀಸರು ಆಸ್ಪತ್ರೆಯ ಲಾಕರ್‌ನಿಂದ ಒಂದು ‘ಅಸಾಲ್ಟ್ ರೈಫಲ್’ ಮತ್ತು ಕೆಲವು ಸಂಶಯಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜೈಶ್ ಜಾಲವನ್ನು ಪುನಃ ಸ್ಥಾಪಿಸುವ ಯೋಜನೆ

ಆದಿಲ್ ಕಾಶ್ಮೀರ ಕಣಿವೆಯಲ್ಲಿ ಜೈಶ್-ಎ-ಮೊಹಮ್ಮದ್ ಜಾಲವನ್ನು ಮತ್ತೆ ನಿರ್ಮಿಸಲು ಸಂಚು ರೂಪಿಸುತ್ತಿದ್ದನು. ಅವನು ತನ್ನ ಸಹಚರರೊಂದಿಗೆ ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಜೈಶ್‌ ನ ಭಿತ್ತಿಪತ್ರಗಳನ್ನು ಅಂಟಿಸುವಲ್ಲಿ ಸಹ ಭಾಗಿಯಾಗಿದ್ದನು. ಈ ಭಿತ್ತಿಪತ್ರಗಳ ನಂತರ ಪೊಲೀಸರು ಆ ಪ್ರದೇಶದ ಸಿಸಿಟಿವಿ ಮೂಲಕ ತನಿಖೆ ನಡೆಸಿ 6 ಜನರನ್ನು ವಶಕ್ಕೆ ತೆಗೆದುಕೊಂಡರು. ಅವರಲ್ಲಿ ಆದಿಲ್ ಕೂಡ ಒಬ್ಬನಾಗಿದ್ದನು ಒಬ್ಬನಾಗಿದ್ದನು. ಆದಿಲ್ ಸಾಂಕೇತಿಕ ಹೆಸರುಗಳ ಮೂಲಕ ತನ್ನ ಜಾಲದಲ್ಲಿನ ಇತರರೊಂದಿಗೆ ಸಂಪರ್ಕ ಮಾಡುತ್ತಿದ್ದನು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸಹಾರನಪುರದಲ್ಲಿ ದಾಳಿ ನಡೆಸಿ ಆದಿಲ್‌ ನನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 8 ಜನರನ್ನು ಬಂಧಿಸಲಾಗಿದ್ದು, ಆದಿಲ್‌ ನ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳು ಯಾರು ಮತ್ತು ಜೈಶ್‌ ನ ಪುನರ್‌ ಸ್ಥಾಪನೆಗಾಗಿ ಅವರು ಯಾವ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದನ್ನು ಪೊಲೀಸರು ಈಗ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನರು ಅಶಿಕ್ಷಿತರಾದ ಕಾರಣ ಭಯೋತ್ಪಾದನೆಯ ಕಡೆಗೆ ತಿರುಗುತ್ತಾರೆ ಎಂದು ಹೇಳುವವರು ಈ ಘಟನೆ ಬಗ್ಗೆ ಏನಾದರೂ ಹೇಳುತ್ತಾರೆಯೇ?