
ಸೂರತ್ (ಗುಜರಾತ್) – ಗುಜರಾತ್ ನ ಸೂರತ್‌ನಲ್ಲಿ ಬೀದಿ ನಾಯಿಗಳ ದಾಳಿಯಿಂದ ಓರ್ವ ಯುವಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸೂರತ್‌ನ ಭಂಡಾರಿವಾಡ್‌ನಲ್ಲಿ ೪ ರಿಂದ ೫ ನಾಯಿಗಳ ಗುಂಪು ಸಂತ್ರಸ್ತ ಯುವಕನನ್ನು ಹಿಂಬಾಲಿಸಿದೆ. ಓಡುವಾಗ ಯುವಕ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಅವನ ತಲೆಗೆ ಗಂಭೀರ ಗಾಯವಾಗಿ ಮೆದುಳಿನಲ್ಲಿ ರಕ್ತಸ್ರಾವವಾಯಿತು. ಅವನ ಬೆನ್ನುಮೂಳೆಯ ಮುರಿತದಿಂದಾಗಿ ಪಾರ್ಶ್ವವಾಯು ಉಂಟಾಯಿತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಮುಂದುವರಿದಾಗ ಆತ ನಿಧನನಾದನು.
ಸೂರತ್‌ನಲ್ಲಿ ಪ್ರತಿದಿನ ನಾಯಿ ಕಡಿತದ 35 ರಿಂದ 40 ಪ್ರಕರಣಗಳು ದಾಖಲು!
ಸೂರತ್ ನಗರದಲ್ಲಿ ಬೀದಿ ನಾಯಿಗಳ ಅಪಾಯ ಎಷ್ಟು ಗಂಭೀರವಾಗಿದೆ ಎಂದರೆ, ಪ್ರತಿದಿನ ನಾಯಿ ಕಡಿತದ 35 ರಿಂದ 40 ಘಟನೆಗಳು ದಾಖಲಾಗುತ್ತವೆ. ನಾಗರಿಕ ಆಸ್ಪತ್ರೆಯ ಅಂಕಿಅಂಶಗಳ ಪ್ರಕಾರ, ತಿಂಗಳಿಗೆ ಸರಾಸರಿ 2 ಸಾವಿರ ನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತವೆ. ಈ ಸಮಸ್ಯೆ ಕೇವಲ ಸೂರತ್‌ಗೆ ಮಾತ್ರ ಸೀಮಿತವಾಗಿಲ್ಲ, ಇದು ದೇಶಾದ್ಯಂತ ಇದೆ.
ಸಂಪಾದಕೀಯ ನಿಲುವುಇಂತಹ ಘಟನೆಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು! ಬೀದಿ ನಾಯಿಗಳಿಂದ ಜನರನ್ನು ರಕ್ಷಿಸಲಾಗದ ಅಧಿಕಾರಿಗಳನ್ನು ಜನರ ತೆರಿಗೆ ಹಣದಿಂದ ಏಕೆ ಪೋಷಿಸಬೇಕು? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!