”ವಂದೇ ಮಾತರಂ” ಸಾಮೂಹಿಕ ಗಾಯನದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಇತರರು

ಮುಂಬಯಿ, ನವೆಂಬರ್ 7 (ಸುದ್ದಿ) – ”ವಂದೇ ಮಾತರಂ”ನ ಶತಕೋತ್ತರ ಸುವರ್ಣ ಮಹೋತ್ಸವದ ವರ್ಷಾಚರಣೆ ನಿಮಿತ್ತ ನವೆಂಬರ್ 7 ರಂದು ಸಚಿವಾಲಯದಲ್ಲಿ ಸಚಿವರು, ಅಧಿಕಾರಿಗಳು ಮತ್ತು ನೌಕರರು ”ವಂದೇ ಮಾತರಂ”ನ ಸಾಮೂಹಿಕ ಗಾಯನ ಮಾಡಿದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ ಶೆಲಾರ್, ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ ಪ್ರಭಾತ ಲೋಢಾ, ಮುಖ್ಯ ಕಾರ್ಯದರ್ಶಿ ರಾಜೇಶ ಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಈ ಸಮಯದಲ್ಲಿ ಉಪಸ್ಥಿತರಿದ್ದರು. ‘ಪದ್ಮಶ್ರೀ’ ವಿಜೇತ ಪದ್ಮಜಾ ಫೇಣಾಣಿ-ಜೋಗಳೇಕರ ಅವರು ಸಾಮೂಹಿಕ ಗಾಯನದ ನೇತೃತ್ವ ವಹಿಸಿದ್ದರು. ಈ ಸಮಯದಲ್ಲಿ ಸಚಿವಾಲಯದ ಎಲ್ಲ ಮಹಡಿಗಳ ತೆರೆದ ಸ್ಥಳದಲ್ಲಿ ನಿಂತು ಎಲ್ಲರೂ ಮಾತೃಭೂಮಿಗೆ ನಮಸ್ಕರಿಸಿದರು. ಸಚಿವಾಲಯದ ತ್ರಿಮೂರ್ತಿ ಅಂಗಳದಲ್ಲಿ ಈ ಕಾರ್ಯಕ್ರಮ ನಡೆಯಿತು. ವೇದಿಕೆಯ ಪಕ್ಕದಲ್ಲಿ ಭಾರತಮಾತೆಯ ಚಿತ್ರವನ್ನು ಇರಿಸಲಾಗಿತ್ತು.
🇮🇳 Vande Mataram echoes in Mantralaya
Maharashtra CM Fadnavis led the singing of Vande Mataram to mark its 150th anniversary, recalling how the song united Bharat during the freedom struggle.
He said, “Vande Mataram is an inspirational song for all religions.”
In 1905, at… pic.twitter.com/zYCqTx7OP1
— Sanatan Prabhat (@SanatanPrabhat) November 7, 2025
”ವಂದೇ ಮಾತರಂ” ಸರ್ವಧರ್ಮೀಯರ ಪ್ರೇರಣಾಗೀತೆ! – ದೇವೇಂದ್ರ ಫಡಣವೀಸ್, ಮುಖ್ಯಮಂತ್ರಿ, ಮಹಾರಾಷ್ಟ್ರ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ”ವಂದೇ ಮಾತರಂ” ಅಮೂಲ್ಯ ಕೊಡುಗೆ ನೀಡಿದೆ. ಸ್ವತಂತ್ರ ಭಾರತದ ಧ್ವಜವನ್ನು ಸಿದ್ಧಪಡಿಸುವಾಗಲೂ ಅದರ ಮೇಲೆ ”ವಂದೇ ಮಾತರಂ” ಎಂದು ಬರೆಯಲಾಗಿತ್ತು. ‘ಅಹಿಂಸೆಯಿಂದ ಸ್ವಾತಂತ್ರ್ಯ ದೊರೆಯಿತು’ ಎಂದು ಹೇಳುವವರ ಮತ್ತು ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಮಾಡಿದವರ ಇಬ್ಬರಿಗೂ ”ವಂದೇ ಮಾತರಂ” ಪ್ರೇರಣಾಗೀತೆಯಾಯಿತು. ”ವಂದೇ ಮಾತರಂ” ಧಾರ್ಮಿಕ ಗೀತೆಯಾಗಿದೆ ಎಂದು ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆ. ಮೌಲಾನಾ ಆಜಾದ್ ಅವರು ”ವಂದೇ ಮಾತರಂ” ಗೀತೆಯು ಎಲ್ಲ ಧರ್ಮಗಳಿಗೂ ಪ್ರೇರಣಾಗೀತೆ ಎಂದು ಹೇಳಿದ್ದರು. ರಾಷ್ಟ್ರಗೀತೆಯ ಮೂಲಕ ರಾಷ್ಟ್ರೀಯ ಭಾವನೆ ಪ್ರತಿಯೊಬ್ಬ ನಾಗರಿಕನಿಗೂ ತಲುಪುತ್ತದೆ. ಪ್ರತಿಯೊಂದು ಶಾಲೆಯಲ್ಲಿ ”ವಂದೇ ಮಾತರಂ” ಹಾಡಬೇಕು, ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!