
ಕೋಟಾ (ರಾಜಸ್ಥಾನ) – ‘ರಾಷ್ಟ್ರೀಯ ಭದ್ರತೆ ಮತ್ತು ಸಂಸ್ಕೃತಿ ಸಂರಕ್ಷಣೆ’ ಉದ್ದೇಶಗಳೊಂದಿಗೆ, ಸನಾತನ ಸಂಸ್ಥೆಯ ವತಿಯಿಂದ 2025 ರ ಡಿಸೆಂಬರ್ 13 ಮತ್ತು 14 ರಂದು ದೆಹಲಿಯ ‘ಭಾರತ ಮಂಡಪಂ’ನಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವಕ್ಕೆ ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಂಯೋಜಕರಾದ ಶ್ರೀ. ಆನಂದ ಜಾಖೋಟಿಯಾ ಮತ್ತು ವಿಷ್ಣುಕಾಂತ ಶರ್ಮಾ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಆಮಂತ್ರಣ ನೀಡಿದರು.
✨ An invitation was graciously extended to Shri. Om Birla (@ombirlakota), Honourable Speaker of the Lok Sabha, for the Sanatan Rashtra Shankhnad Mahotsav, by Shri. @Anand_J25.
🕉️The Mahotsav honors Bharat’s indomitable warrior soul and divine legacy – weaving social unity… pic.twitter.com/G8inqVql1r
— Sanatan Sanstha (@SanatanSanstha) November 6, 2025
ಈ ಸಂದರ್ಭದಲ್ಲಿ ಶ್ರೀ. ಜಾಖೋಟಿಯಾ ಅವರು ಲೋಕಸಭಾ ಅಧ್ಯಕ್ಷರಿಗೆ ಮಹೋತ್ಸವದ ಮಾಹಿತಿಯನ್ನು ನೀಡುತ್ತಾ, ಈ ಕಾರ್ಯಕ್ರಮವು ರಾಷ್ಟ್ರ, ಸಮಾಜ ಮತ್ತು ಧರ್ಮ ಜಾಗೃತಿಯ ಉದ್ದೇಶಗಳೊಂದಿಗೆ ಅಖಿಲ ಭಾರತದ ಉಪಕ್ರಮವಾಗಿ ಆಯೋಜಿಸಲ್ಪಟ್ಟಿದೆ ಎಂದು ತಿಳಿಸಿದರು. ಈ ಮಹೋತ್ಸವದಲ್ಲಿ ದೇಶಾದ್ಯಂತದ ಧಾರ್ಮಿಕ ಮುಖಂಡರು, ಚಿಂತಕರು ಮತ್ತು ಹಿಂದುತ್ವನಿಷ್ಠ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಮಹೋತ್ಸವದಲ್ಲಿ ಸಾಂಸ್ಕೃತಿಕ ಸಂರಕ್ಷಣೆ, ರಾಷ್ಟ್ರೀಯ ಭದ್ರತೆ ಮತ್ತು ಸನಾತನ ರಾಷ್ಟ್ರದ ಕುರಿತು ಚರ್ಚೆ ನಡೆಯಲಿದೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹನ್ಸರಾಜ ಅಹೀರ ಅವರಿಗೂ ಆಮಂತ್ರಣ

ದೆಹಲಿಯಲ್ಲಿ ನಡೆಯಲಿರುವ ಮಹೋತ್ಸವಕ್ಕೆ ಶ್ರೀ. ಶ್ರೀಕಾಂತ ಚಾಸಕರ ಅವರು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ. ಹನ್ಸರಾಜ ಅಹೀರ ಅವರಿಗೂ ಆಮಂತ್ರಣ ನೀಡಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ