ಪತಂಜಲಿಯ ಚ್ಯವನಪ್ರಾಶ ಜಾಹೀರಾತಿನಲ್ಲಿ ಇತರ ಸಂಸ್ಥೆಗಳ ಉತ್ಪನ್ನಗಳನ್ನು ‘ಮೋಸ’ ಎಂದು ಕರೆದ ಪ್ರಕರಣ

ನವದೆಹಲಿ – ಜಾಹೀರಾತುಗಳಲ್ಲಿ ಇತರ ಸಂಸ್ಥೆಗಳ ಉತ್ಪನ್ನಗಳನ್ನು ‘ಮೋಸ’ ಎಂದು ಹೇಳುವುದು ತಪ್ಪು; ಏಕೆಂದರೆ ಅದು ಅಪಮಾನಕರ ಮತ್ತು ಆಕ್ಷೇಪಾರ್ಹವಾಗಿದೆ, ಎಂದು ದೆಹಲಿ ಹೈಕೋರ್ಟ್ ಯೋಗಋಷಿ ರಾಮದೇವ ಬಾಬಾ ಅವರ ‘ಪತಂಜಲಿ’ ಸಂಸ್ಥೆಯ ಚ್ಯವನಪ್ರಾಶ ಜಾಹೀರಾತಿಗೆ ಮಧ್ಯಂತರ ತಡೆ ನೀಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಕಾಯ್ದಿರಿಸಿದೆ. ‘ಡಾಬರ್ ಇಂಡಿಯಾ’ ಸಂಸ್ಥೆಯು ‘ಪತಂಜಲಿ’ ವಿರುದ್ಧ ಮಾನಹಾನಿ ಮತ್ತು ಅನ್ಯಾಯ ಪೂರ್ವಕ ಸ್ಪರ್ಧೆಯ ಮೊಕದ್ದಮೆಯನ್ನು ದಾಖಲಿಸಿದೆ.
ನೀವು ಅವುಗಳನ್ನು ಕಳಪೆ ಎಂದು ಹೇಳಬಹುದು; ಆದರೆ ‘ಮೋಸ’ ಎಂದು ಕರೆಯಬೇಡಿ!
ಪತಂಜಲಿಯ ಹಿರಿಯ ವಕೀಲ ರಾಜೀವ್ ನಾಯರ್ ಅವರನ್ನು ಹೈಕೋರ್ಟ್ ಪ್ರಶ್ನಿಸಿತು: ‘ಮೋಸ’ ಎಂಬುದರ ಬದಲಿಗೆ ‘ಕಳಪೆ’ ಎಂಬ ಪದವನ್ನು ಬಳಸಿದರೆ ತೊಂದರೆ ಇದೆಯೇ? ನೀವು ಅವೆಲ್ಲವನ್ನೂ ಮೋಸ ಎಂದು ಹೇಳುತ್ತಿದ್ದೀರಿ ಮತ್ತು ‘ನಾನು ಮಾತ್ರ ಸರಿಯಾದವನು’ ಎನ್ನುತ್ತಿದ್ದೀರಿ. ಉಳಿದ ಎಲ್ಲ ಚ್ಯವನಪ್ರಾಶಗಳನ್ನು ನೀವು ಹೇಗೆ ಮೋಸ ಎಂದು ಹೇಳಬಹುದು? ನೀವು ಅವುಗಳನ್ನು ಕಳಪೆ ಎಂದು ಹೇಳಬಹುದು; ಆದರೆ ಅವುಗಳನ್ನು ಮೋಸ ಎಂದು ಕರೆಯಬೇಡಿ. ‘ಮೋಸ’ ಪದವನ್ನು ಹೊರತುಪಡಿಸಿ ನಿಘಂಟಿನಲ್ಲಿ ನಿಮಗೆ ಬೇರೆ ಯಾವುದೇ ಪದ ಸಿಗುವುದಿಲ್ಲವೇ?
ಜಾಹೀರಾತಿನಲ್ಲಿ ಏನಿದೆ?
ಪತಂಜಲಿಯ ಹೊಸ ‘ಪತಂಜಲಿ ಸ್ಪೆಷಲ್ ಚ್ಯವನಪ್ರಾಶ’ದ ಜಾಹೀರಾತಿನಲ್ಲಿ ರಾಮದೇವ ಬಾಬಾ ಅವರು ‘ಚ್ಯವನಪ್ರಾಶದ ಹೆಸರಿನಲ್ಲಿ ಹೆಚ್ಚಿನ ಜನರಿಗೆ ವಂಚನೆಯಾಗುತ್ತಿದೆ’ ಎಂದು ಹೇಳುತ್ತಾರೆ. ಈ ಜಾಹೀರಾತಿನಲ್ಲಿ, ಪತಂಜಲಿಯು ತನ್ನ ಈ ಉತ್ಪನ್ನದಲ್ಲಿ ಆಯುರ್ವೇದದ ೫೧ ಗಿಡಮೂಲಿಕೆಗಳು ಮತ್ತು ಕೇಸರಿ ಇದೆ ಎಂದು ಹೇಳಿಕೊಂಡಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”