ಗಡಿಯಲ್ಲಿ 89 ಬಾಂಗ್ಲಾದೇಶಿ ನುಸುಳುಕೋರರ ಬಂಧನ

ಉತ್ತರ 24 ಪರಗಣ (ಪಶ್ಚಿಮ ಬಂಗಾಳ) – ಚುನಾವಣಾ ಆಯೋಗವು 12 ರಾಜ್ಯಗಳ ಮತದಾರರ ಪಟ್ಟಿಗಳ ವಿಶೇಷ ಕುಲಂಕುಶ ಪರಿಶೀಲನೆಯನ್ನು ಘೋಷಿಸಿದ ನಂತರ, ಬಾಂಗ್ಲಾದೇಶಿ ನುಸುಳುಕೋರರಲ್ಲಿ ಭಯವುಂಟಾಗಿದೆ. ಅನೇಕರು ದೇಶವನ್ನು ತೊರೆದು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಶೀರ್‌ಹಾಟ್ ಗಡಿಯಿಂದ ಬಾಂಗ್ಲಾದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದ 48 ನುಸುಳುಕೋರರನ್ನು ಗಡಿ ಭದ್ರತಾ ದಳವು (BSF) ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಎಲ್ಲಾ ಆರೋಪಿಗಳು ಪಶ್ಚಿಮಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಮನೆಗೆಲಸ ಅಥವಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. (ನುಸುಳುಕೋರರು ಮನೆಗೆಲಸ ಮತ್ತು ಕಾರ್ಮಿಕರಾಗಿ ಕೆಲಸ ಮಾಡುವಾಗ, ಅವರು ಪೊಲೀಸರಿಗೆ ಮತ್ತು ಅವರಿಗೆ ಕೆಲಸ ನೀಡುವ ಭಾರತೀಯರಿಗೆ ಏಕೆ ಗೊತ್ತಾಗಲಿಲ್ಲ? ಅಥವಾ ಇದು ತಿಳಿದಿದ್ದರೂ, ಅವರು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿದ್ದರು ಎಂದು ನಿರ್ಲಕ್ಷಿಸಲಾಯಿತೇ? ಇದರ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು! – ಸಂಪಾದಕರು) ಕಳೆದ 3 ದಿನಗಳಲ್ಲಿ ಒಟ್ಟು 89 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
🚨 Fear of voter list re-verification (SIR) drives Bangladeshi infiltrators to flee India
⚠️ 89 illegal entrants caught at North 24 Parganas border while escaping to Bangladesh
📢 Many Indians believe there is no need to stop those leaving voluntarily instead of wasting… pic.twitter.com/3TunFo5myq
— Sanatan Prabhat (@SanatanPrabhat) November 3, 2025
ಸಂಪಾದಕೀಯ ನಿಲುವುಇಂತಹವರನ್ನು ಬಂಧಿಸಿ, ಸಾಕುವುದಕ್ಕಿಂತ ಮತ್ತು ಅವರನ್ನು ಅವರ ದೇಶಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ನಡೆಸುವುದಕ್ಕಿಂತ, ಅವರು ತಾವಾಗಿಯೇ ತಮ್ಮ ದೇಶಕ್ಕೆ ಮರಳುತ್ತಿದ್ದರೆ, ಅವರನ್ನು ತಡೆಯಬಾರದು ಎಂದು ಭಾರತೀಯರು ಭಾವಿಸುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!