
ಗೌಹತ್ತಿ(ಆಸ್ಸಾಂ) – ಆಸ್ಸಾಂನ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಸಂಸದ ಗೌರವ ಗೊಗೊಯ್ ಪಾಕಿಸ್ತಾನದ ಏಜೆಂಟ್ ಆಗಿದ್ದಾರೆ, ಖಂಡಿತವಾಗಿಯೂ ಆಗಿದ್ದಾರೆ. ಅವರನ್ನು ಒಂದು ವಿದೇಶಿ ಶಕ್ತಿಯು ನಮ್ಮ ದೇಶಕ್ಕೆ ಕಳುಹಿಸಿದೆ. ಈ ಆರೋಪ ಸುಳ್ಳಾಗಿದ್ದರೆ, ಗೊಗೊಯ್ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿ ಎಂದು ಆಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಸವಾಲು ಹಾಕಿದ್ದಾರೆ.
ಪುರಾವೆಗಳನ್ನು ಸಲ್ಲಿಸಲಾಗುವುದು!
ಮುಖ್ಯಮಂತ್ರಿ ಸರಮಾ ಅವರು, ಈ ಆರೋಪಗಳಿಗೆ ನನ್ನ ಬಳಿ ಪುರಾವೆಗಳಿವೆ; ಆದರೆ ಸದ್ಯಕ್ಕೆ ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದಿಲ್ಲ. ನಾನು ಈ ಪುರಾವೆಗಳನ್ನು ತೋರಿಸಿದಾಗ, ಗೊಗೊಯ್ ಅವರು ನೂರಕ್ಕೆ ನೂರು ಪಾಕಿಸ್ತಾನದ ಏಜೆಂಟ್ ಎಂದು ಎಲ್ಲರಿಗೂ ಮನವರಿಕೆಯಾಗುತ್ತದೆ. ಗಾಯಕ ಜುಬಿನ್ ಗರ್ಗ್ ಅವರ ಸಾವಿನ ತನಿಖೆ ಪೂರ್ಣಗೊಂಡ ನಂತರವೇ ಪುರಾವೆಗಳನ್ನು ಬಹಿರಂಗಪಡಿಸಲಾಗುವುದು, ಇದರಿಂದ ಯಾರೂ ಸಹ ಈ ವಿಷಯವು ಇನ್ನೊಂದು ಪ್ರಕರಣದತ್ತ ಗಮನವನ್ನು ಬೇರೆಡೆಗೆ ಸೆಳೆಯಿತು ಎಂದು ಹೇಳಲು ಸಾಧ್ಯವಾಗುವುದಿಲ್ಲ.
ಗೌರವ ಗೊಗೊಯ್ ಅವರ ಮೇಲೆ ಈ ಹಿಂದೆಯೂ ಪಾಕಿಸ್ತಾನಿ ಸಂಪರ್ಕಗಳ ಆರೋಪಗಳು ಕೇಳಿಬಂದಿವೆ. ಸರಮಾ ಮತ್ತು ಭಾಜಪ ಪಕ್ಷವು ಹೇಳುವಂತೆ, ಗೊಗೊಯ್ ಅವರ ಪಾಕಿಸ್ತಾನಿ ಸಂಪರ್ಕಗಳು ಅವರ ಬ್ರಿಟಿಷ್ ಪತ್ನಿಯ ಮೂಲಕ ಇವೆ.
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!