ಸರ್ದಾರ್ ಪಟೇಲ್ ಅವರ ಜಯಂತಿಯ ದಿನ ಪ್ರಧಾನಿ ಮೋದಿಯವರ ಹೇಳಿಕೆ

ಕರ್ಣಾವತಿ (ಗುಜರಾತ್) – ಇಂದು ನಮ್ಮ ದೇಶದ ಏಕತೆ ಮತ್ತು ಆಂತರಿಕ ಸುರಕ್ಷತೆಯು ನುಸುಳುಕೋರರಿಂದ ಗಂಭೀರ ಅಪಾಯದಲ್ಲಿದೆ. ಕಳೆದ ಅನೇಕ ದಶಕಗಳಿಂದ ವಿದೇಶಿ ನುಸುಳುಕೋರರು ನಮ್ಮ ದೇಶವನ್ನು ಪ್ರವೇಶಿಸುತ್ತಿದ್ದಾರೆ, ದೇಶದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಜನಸಂಖ್ಯೆಯ ಸಮತೋಲನವನ್ನು ಹಾಳುಮಾಡುತ್ತಿದ್ದಾರೆ. ದುರದೃಷ್ಟವಶಾತ್ ಹಿಂದಿನ ಸರಕಾರಗಳು ಈ ಗಂಭೀರ ಸಮಸ್ಯೆಯನ್ನು ನಿರ್ಲಕ್ಷಿಸಿವೆ ಮತ್ತು ಅದನ್ನು ಕಡೆಗಣಿಸಿವೆ. ಹಿಂದಿನ ಸರಕಾರಗಳು ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಿದವು. ಮೊದಲ ಬಾರಿಗೆ ದೇಶವು ಈ ಸವಾಲನ್ನು ನೇರವಾಗಿ ಎದುರಿಸಲು ಮತ್ತು ಅದರ ಅಖಂಡತೆಯನ್ನು ಉಳಿಸಲು ಒಂದು ದೃಢವಾದ ಮತ್ತು ನಿರ್ಣಾಯಕ ನಿಲುವನ್ನು ತೆಗೆದುಕೊಂಡಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದ ಬಳಿ ಇರುವ ಸರ್ದಾರ್ ಪಟೇಲ್ ಅವರ ೧೮೨ ಮೀಟರ್ ಎತ್ತರದ ಪ್ರತಿಮೆಗೆ ಪ್ರಧಾನಿ ಮೋದಿ ಅವರು ಪುಷ್ಪಹಾರ ಅರ್ಪಿಸಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ,
ಈಗಿನ ಭಾರತ ಹಿಂದಿಗಿಂತ ಹೆಚ್ಚು ಕಠಿಣ ಪ್ರತ್ಯುತ್ತರ ನೀಡುತ್ತದೆ!
ಇದು ಸರ್ದಾರ್ ಪಟೇಲ್ ಅವರ ಭಾರತವಾಗಿದೆ, ಇದು ಎಂದಿಗೂ ತನ್ನ ಸುರಕ್ಷತೆ ಮತ್ತು ಗೌರವದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಇಂದು ಯಾರಾದರೂ ಭಾರತದ ಕಡೆಗೆ ವಕ್ರ ದೃಷ್ಟಿಯಿಂದ ನೋಡಲು ಧೈರ್ಯ ಮಾಡಿದರೆ, ಭಾರತವು ಹಿಂದಿಗಿಂತ ಹೆಚ್ಚು ಕಠಿಣ ಪ್ರತ್ಯುತ್ತರ ನೀಡುತ್ತದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ.
ಕೆಲವರು ನುಸುಳುಕೋರರ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ!
ನಾನು ಕೆಂಪು ಕೋಟೆಯಿಂದ ‘ಡೆಮೋಗ್ರಾಫಿಕ್ ಮಿಷನ್’ (ಜನಸಂಖ್ಯಾ ಅಭಿಯಾನ) ಅನ್ನು ಘೋಷಿಸಿದೆ; ಆದರೆ ಇಂದು ನಾವು ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸುತ್ತಿರುವಾಗ, ಕೆಲವು ಜನರು ರಾಷ್ಟ್ರೀಯ ಹಿತಾಸಕ್ತಿಗಿಂತ ತಮ್ಮ ವೈಯಕ್ತಿಕ ಸ್ವಾರ್ಥಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಈ ಜನರು ನುಸುಳುಕೋರರ ಹಕ್ಕುಗಳನ್ನು ರಕ್ಷಿಸಲು ರಾಜಕೀಯ ಹೋರಾಟ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ನ ತಪ್ಪುಗಳಿಂದಾಗಿ ಕಾಶ್ಮೀರ ಅನೇಕ ದಶಕಗಳ ಕಾಲ ಉರಿಯುತ್ತಾ ಇತ್ತು!
ಕಾಂಗ್ರೆಸ್ ಎಂದಿಗೂ ಸರ್ದಾರ್ ಪಟೇಲ್ ಅವರ ನೀತಿಗಳನ್ನು ಅನುಸರಿಸಲಿಲ್ಲ. ಅದರಿಂದಾಗಿ ದೇಶವು ಹಿಂಸಾಚಾರ ಮತ್ತು ರಕ್ತಪಾತದ ರೂಪದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಯಿತು. ಇತರ ಸಂಸ್ಥಾನಗಳನ್ನು ಒಗ್ಗೂಡಿಸಿದಂತೆ ‘ಕಾಶ್ಮೀರವೂ ಒಂದಾಗಬೇಕು’ ಎಂಬುದು ಸರ್ದಾರ್ ಪಟೇಲ್ ಅವರ ಇಚ್ಛೆ ಇತ್ತು; ಆದರೆ ನೆಹರೂ ಅವರು ಅವರ ಆಸೆ ಈಡೇರದಂತೆ ತಡೆದರು. ಕಾಂಗ್ರೆಸ್‌ನ ತಪ್ಪುಗಳಿಂದಾಗಿ ಕಾಶ್ಮೀರ ಅನೇಕ ದಶಕಗಳ ಕಾಲ ಉರಿಯುತ್ತಾ ಇತ್ತು. ಕಾಂಗ್ರೆಸ್‌ನ ತಪ್ಪುಗಳಿಂದಾಗಿ ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ವಶವಾಯಿತು.
ಕಾಂಗ್ರೆಸ್ ಯಾವಾಗಲೂ ಭಯೋತ್ಪಾದನೆಯ ಮುಂದೆ ಮಂಡಿ ಉರಿದೆ !
ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿತು. ಕಾಶ್ಮೀರ ಮತ್ತು ದೇಶ ಇಷ್ಟು ದೊಡ್ಡ ಬೆಲೆಯನ್ನು ತೆತ್ತಬೇಕಾಯಿತು. ಕಾಂಗ್ರೆಸ್ ಯಾವಾಗಲೂ ಭಯೋತ್ಪಾದನೆಯ ಮುಂದೆ ಮಂಡಿ ಉರಿದೆ. ಕಾಂಗ್ರೆಸ್ ಸರ್ದಾರ್ ಪಟೇಲ್ ಅವರನ್ನು ಮರೆತಿದೆ; ಆದರೆ ನಾವು ಹಾಗೆ ಮಾಡಿಲ್ಲ.
ದೇಶವನ್ನು ನಕ್ಸಲಿಸಂ ಮತ್ತು ಭಯೋತ್ಪಾದನೆಯಿಂದ ಮುಕ್ತಗೊಳಿಸುತ್ತೇವೆ!
ಈಗಿನ ಭಾರತ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಭಾರತವಾಗಿದೆ. ನಾವು ಸೈದ್ಧಾಂತಿಕ ಹೋರಾಟವನ್ನು ಗೆದ್ದಿದ್ದೇವೆ ಮತ್ತು ನಕ್ಸಲರೊಂದಿಗೆ ಅವರ ಮನೆಯೊಳಗೆ ಹೋರಾಡಿದ್ದೇವೆ. ಅದರ ಫಲಿತಾಂಶಗಳು ಇಂದು ದೇಶದ ಮುಂದಿವೆ. ೨೦೧೪ಕ್ಕಿಂತ ಮೊದಲು ದೇಶದಾದ್ಯಂತ ಸುಮಾರು ೧೨೫ ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯ ಹಿಡಿತದಲ್ಲಿದ್ದವು. ಇಂದು ಈ ಸಂಖ್ಯೆ ೧೧ಕ್ಕೆ ಇಳಿದಿದೆ. ಅವುಗಳಲ್ಲಿ ಕೇವಲ ೩ ಜಿಲ್ಲೆಗಳಲ್ಲಿ ನಕ್ಸಲಿಸಂ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಇಂದು ಇದೇ ಭೂಮಿಯಿಂದ ನಾನು ಇಡೀ ದೇಶಕ್ಕೆ ಭರವಸೆ ನೀಡುತ್ತೇನೆ, ದೇಶವು ನಕ್ಸಲಿಸಂ ಮತ್ತು ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ, ನಾವು ನಿಲ್ಲುವುದಿಲ್ಲ. ನಾವು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!