ಡೊಂಬಿವಲಿಯಲ್ಲಿ ಮತಾಂಧ ತೆಂಗಿನಕಾಯಿ ಮಾರಾಟಗಾರನಿಂದ ಹಿಂದೂ ಗಿರಾಕಿಯ ಮೇಲೆ ಚಾಕುವಿನಿಂದ ಹಲ್ಲೆ !

ಹಿಂದೂ ಗಿರಾಕಿಯ ಕೈಯ 3 ಬೆರಳುಗಳಿಗೆ ಗಂಭೀರ ಗಾಯ!

ಠಾಣೆ – ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ. ಪ್ರದೇಶದಲ್ಲಿರುವ ಎಮ್ಸ್ ಆಸ್ಪತ್ರೆ ಎದುರು ಮತಾಂಧ ತೆಂಗಿನಕಾಯಿ ಮಾರಾಟಗಾರನು ಹಿಂದೂ ಗಿರಾಕಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ಘಟನೆ ಅಕ್ಟೋಬರ್ 30 ರಂದು ಮಧ್ಯಾಹ್ನ ಸಂಭವಿಸಿದೆ. ಈ ದಾಳಿಯಲ್ಲಿ ದಯಾನಂದ ಮಹಾದೇವ ಜತನ (ವಯಸ್ಸು 58 ವರ್ಷ) ಅವರ ಕೈಯ 3 ಬೆರಳುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರ ಕಿರುಬೆರಳು ಸಂಪೂರ್ಣವಾಗಿ ತುಂಡಾಗಿದೆ. ಈ ಪ್ರಕರಣದ ಕುರಿತು ಮಾನಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತೆಂಗಿನಕಾಯಿ ಮಾರಾಟಗಾರ ಸಲೀಂ ಸದ್ಯ ಪರಾರಿಯಾಗಿದ್ದಾನೆ. ಈ ಘಟನೆಯ ನಂತರ ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ. (ಕಾನೂನಿನ ಭಯ ಇಲ್ಲದಿರುವುದರಿಂದಲೇ ಮತಾಂಧರು ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಮಾಡುತ್ತಿದ್ದಾರೆ! – ಸಂಪಾದಕರು)

ಇಲ್ಲಿನ ಮಿಲಾಪನಗರ ಪ್ರದೇಶದ ನಿವಾಸಿ ದಯಾನಂದ ಜತನ ಅವರು ಎಮ್ಸ್ ಆಸ್ಪತ್ರೆಯ ಬಳಿಯ ತೆಂಗಿನಕಾಯಿ ಮಾರಾಟಗಾರ ಸಲೀಂನಿಂದ ತೆಂಗಿನಕಾಯಿ ಖರೀದಿಸಲು ಹೋಗಿದ್ದರು. ಜತನ್ ಅವರಿಗೆ ತೆಂಗಿನಕಾಯಿ ಒಣಗಿದೆ ಮತ್ತು ಕೆಟ್ಟಿದೆ ಎಂದು ಅನಿಸಿತು; ಆದ್ದರಿಂದ ಅವರು ಸಲೀಂಗೆ ಈ ಬಗ್ಗೆ ಕೇಳಿದರು. ಆಗ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಕೋಪಗೊಂಡ ಸಲೀಂ ಹಠಾತ್ತನೆ ಜತನ್ ಅವರಿಗೆ ತಳ್ಳಾಡುತ್ತಾ, ತೆಂಗಿನಕಾಯಿ ಸುಲಿಯುವ ಚಾಕುವಿನಿಂದ ಜತನ್ ಅವರ ಎಡಗೈ ಮೇಲೆ ಹಲ್ಲೆ ಮಾಡಿದನು. ಜತನ ಅವರಿಗೆ ಇಲ್ಲಿನ ಎಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸಂಪಾದಕೀಯ ನಿಲುವು

ಮತಾಂಧರ ಕ್ರೂರತೆಯನ್ನು ಗಮನಿಸಿರಿ ಮತ್ತು ಅವರ ಬಳಿ ಏನನ್ನಾದರೂ ಖರೀದಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿರಿ!