ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಬಲ್ಯವಿರುವ ಗುರುಮಠಕಲ್ ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ : Karnataka RSS March

ಲಾಠಿ ಕೊಂಡೊಯ್ಯುವುದಕ್ಕೆ ನಿಷೇಧ

ಬೆಂಗಳೂರು – ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಪಥಸಂಚಲನ ನಡೆಸಲು ಆಡಳಿತವು ಅನುಮತಿ ನೀಡಿದೆ; ಆದರೆ ಅದೇ ವೇಳೆ 10 ಷರತ್ತುಗಳನ್ನು ವಿಧಿಸಿದೆ. ಇದರಲ್ಲಿ ಕೋಲು ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿದೆ. ಈ ಪ್ರದೇಶವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಬಲ್ಯವಿರುವ ಕ್ಷೇತ್ರ ಎಂದು ಪರಿಗಣಿಸಲಾಗಿದೆ. ಈ ಕಾರ್ಯಕ್ರಮವನ್ನು ಸಂಘದ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದೆ.

ಸ್ವಯಂಸೇವಕರಿಗೆ ಕೇವಲ ನಿಗದಿಪಡಿಸಿದ ಮಾರ್ಗದಲ್ಲಿ ಮಾತ್ರ ಸಾಗಲು ಅನುಮತಿ ಇರುತ್ತದೆ. ಜಾತಿ ಅಥವಾ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಘೋಷಣೆಗಳನ್ನು ಕೂಗಬಾರದು. ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಭಂಗ ತರುವ ಯಾವುದೇ ಕೃತ್ಯಕ್ಕೆ ಸಂಪೂರ್ಣ ನಿಷೇಧ ಇರುತ್ತದೆ. ಸಂಚಲನದ ಸಮಯದಲ್ಲಿ ರಸ್ತೆಗಳನ್ನು ತಡೆಯಬಾರದು, ಬಲವಂತವಾಗಿ ಅಂಗಡಿಗಳನ್ನು ಮುಚ್ಚಬಾರದು. ಯಾವುದೇ ಸ್ವಯಂಸೇವಕರು ಮಾರಕಾಸ್ತ್ರ ಅಥವಾ ಕೋಲು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಒಂದು ವೇಳೆ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ, ಆಯೋಜಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಸಂಭವಿಸಿದ ಹಾನಿಗೆ ಅವರೇ ಪರಿಹಾರ ನೀಡಬೇಕಾಗುತ್ತದೆ ಎಂಬ ಷರತ್ತುಗಳನ್ನು ಆಡಳಿತವು ವಿಧಿಸಿದೆ.