ಕೇಂದ್ರ ಸರಕಾರದ ನಿರ್ದೇಶನ: ಮೊಬೈಲ್ ಕರೆಗಳಲ್ಲಿ ಇನ್ನು ಮುಂದೆ ಹೆಸರು ಕಾಣಿಸಲಿದೆ! Called ID Implementation

ಮುಂಬಯಿ – ದೇಶದಲ್ಲಿ ‘ಸಿ.ಎನ್.ಎ.ಪಿ.’ (ಕಾಲಿಂಗ್ ನೇಮ್ ಪ್ರೆಸೆಂಟೇಶನ್) ಸೇವೆಯನ್ನು ಆರಂಭಿಸಲು ಕೇಂದ್ರ ಸರಕಾರವು ಟೆಲಿಕಾಂ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಇದರಿಂದಾಗಿ, ಇನ್ನು ಮುಂದೆ ಮೊಬೈಲ್‌ನಲ್ಲಿ ಅಪರಿಚಿತ ಸಂಖ್ಯೆಗಳೊಂದಿಗೆ ಅವರ ಹೆಸರೂ ಸಹ ಮೊಬೈಲ್‌ನಲ್ಲಿ ಕಾಣಿಸಲಿದೆ.

೧. ‘ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ’ ಅಂದರೆ ‘ಟ್ರಾಯ್’ನ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರಕಾರವು ‘ಸಿ.ಎನ್.ಎ.ಪಿ.’ ಸೇವೆಯನ್ನು ಆರಂಭಿಸಲು ನಿರ್ದೇಶನ ನೀಡಿದೆ. ಮುಂಬರುವ ೭ ದಿನಗಳಲ್ಲಿ ಕನಿಷ್ಠ ಒಂದು ವಲಯದಲ್ಲಾದರೂ ಈ ‘ಸಿ.ಎನ್.ಎ.ಪಿ.’ ಸೇವೆಯನ್ನು ಆರಂಭಿಸುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ಮೊಬೈಲ್‌ಗೆ ಬರುವ ಬೇಡದ ಕರೆಗಳು, ಜಾಹೀರಾತು ಕರೆಗಳು ಮತ್ತು ಮೊಬೈಲ್ ಮೂಲಕ ಸಂಪರ್ಕಿಸಿ ನಡೆಯುವ ವಂಚನೆಯ ಘಟನೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ. ‘ಸಿಮ್‌ಕಾರ್ಡ್’ ಖರೀದಿಸುವಾಗ ಗ್ರಾಹಕರು ನೀಡಿದ ಹೆಸರು ಈ ಸಂಖ್ಯೆಯೊಂದಿಗೆ ಕಾಣಿಸಲಿದೆ.

೨. ‘ಟ್ರಾಯ್’ನ ಶಿಫಾರಸ್ಸಿನ ಪ್ರಕಾರ, ‘ಸಿ.ಎನ್.ಎ.ಪಿ.’ ಅನ್ನು ಭಾರತೀಯ ‘ಟೆಲಿಕಾಂ ನೆಟ್‌ವರ್ಕ್’ನಲ್ಲಿ ‘ಸಪ್ಲಿಮೆಂಟರಿ ಸರ್ವೀಸ್’ (ಪೂರಕ ಸೇವೆ) ಆಗಿ ಸೇರಿಸಲಾಗುವುದು. ಜಿಯೋ, ಏರ್‌ಟೆಲ್, ವಿಐ, ಬಿ.ಎಸ್.ಎನ್.ಎಲ್. ಮುಂತಾದ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.