ದೀಪಾವಳಿ ಹಬ್ಬದ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗೆ 301 ಕೋಟಿ ರೂಪಾಯಿಗಳ ದಾಖಲೆಯ ಆದಾಯ

ಪುಣೆ ವಿಭಾಗಕ್ಕೆ ಪ್ರಥಮ ಸ್ಥಾನ

ಮುಂಬಯಿ – ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗೆ ಈ ವರ್ಷದ ದೀಪಾವಳಿ ಹಬ್ಬದ ಅವಧಿಯಲ್ಲಿ ದಾಖಲೆಯ ಆದಾಯ ಲಭಿಸಿದೆ. ಅಕ್ಟೋಬರ್ 18 ರಿಂದ 27 ರ ವರೆಗಿನ 10 ದಿನಗಳ ಅವಧಿಯಲ್ಲಿ ಸಾರಿಗೆ ಸಂಸ್ಥೆಯು 301 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಇದರಲ್ಲಿ ಪುಣೆ ವಿಭಾಗವು ಗರಿಷ್ಠ 20 ಕೋಟಿ 47 ಲಕ್ಷ ರೂಪಾಯಿಗಳ ಆದಾಯ ಗಳಿಸಿದ್ದು, ಧುಳೆ ವಿಭಾಗ 15 ಕೋಟಿ 60 ಲಕ್ಷ ರೂಪಾಯಿಗಳು ಮತ್ತು ನಾಸಿಕ್ ವಿಭಾಗ 15 ಕೋಟಿ 41 ಲಕ್ಷ ರೂಪಾಯಿಗಳ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಸಾರಿಗೆ ಸಂಸ್ಥೆಯ ಆದಾಯ 37 ಕೋಟಿ ರೂಪಾಯಿ ಹೆಚ್ಚಾಗಿದೆ ಎಂದು ಸಾರಿಗೆ ಸಚಿವರು ಮತ್ತು ಎಸ್‌ ಟಿ ನಿಗಮದ ಅಧ್ಯಕ್ಷರಾದ ಪ್ರತಾಪ ಸರನಾಯಕ ಅವರು ಮಾಹಿತಿ ನೀಡಿದ್ದಾರೆ.