ತಾಜ ಮಹಲ್ ಹಿಂದೂ ದೇವಾಲಯ ಎಂದು ಅವರ ಅರ್ಜಿಯ ಮೇಲೆ ಚಲನಚಿತ್ರ ತಯಾರಿಸಲಾಗಿದೆ ಎಂಬ ದಾವೆ

ನವದೆಹಲಿ – ಅಯೋಧ್ಯೆಯ ಭಾಜಪ ನಾಯಕ ಮತ್ತು ವಕ್ತಾರ ರಜನೀಶ್ ಸಿಂಗ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಲಿಖಿತ ದೂರು ನೀಡಿ, ‘ದಿ ತಾಜ್ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಈ ಚಲನಚಿತ್ರವು ಸಿಂಗ್ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಷಯವನ್ನು ಆಧರಿಸಿದೆ ಎಂದು ಅವರು ದಾವೆ ಮಾಡಿದ್ದಾರೆ. ರಜನೀಶ್ ಸಿಂಗ್ ಅವರು 2022 ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖಾನೌ ಪೀಠದಲ್ಲಿ ಅರ್ಜಿಯನ್ನು ಸಲ್ಲಿಸಿ, ತಾಜ್ ಮಹಲ್‌ನಲ್ಲಿ ಬೀಗ ಹಾಕಲಾದ 22 ಕೊಠಡಿಗಳನ್ನು ತೆರೆಯುವಂತೆ ಬೇಡಿಕೆ ಇಟ್ಟಿದ್ದರು. ‘ತಾಜ್ ಮಹಲ್ ಇರುವ ಸ್ಥಳದಲ್ಲಿ ದೇವಸ್ಥಾನವಿತ್ತು’ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು, ಜೊತೆಗೆ ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಸಮಿತಿಯನ್ನು ರಚಿಸಿ ತಾಜ್ ಮಹಲ್ ಅನ್ನು ಪರಿಶೀಲಿಸಬೇಕು’ ಎಂದು ಕೋರಲಾಗಿತ್ತು; ಆದರೆ, ಉಚ್ಚ ನ್ಯಾಯಾಲಯವು ಮೇ 2022 ರಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿತ್ತು.
🎬 BJP spokesperson Rajneesh Singh demands ban on film ‘The Taj Story’.
🔹 Says the movie is based on his court petition claiming Taj Mahal was once a Hindu Mandir.
🔹 Filed complaint with I&B Ministry and CBFC.
🔹 Alleges producers used his petition without permission,… pic.twitter.com/1HJTeQaK0b
— Sanatan Prabhat (@SanatanPrabhat) October 29, 2025
ನನ್ನ ಅನುಮತಿ ಪಡೆದಿಲ್ಲ!
ರಜನೀಶ್ ಸಿಂಗ್ ಅವರು ಕೇಂದ್ರ ಸರಕಾರ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಬರೆದ ಪತ್ರದಲ್ಲಿ, ‘ದಿ ತಾಜ್ ಸ್ಟೋರಿ’ ಚಲನಚಿತ್ರವು ನನ್ನ ಅರ್ಜಿಯನ್ನಾಧರಿಸಿದೆ ಎಂದು ನನಗೆ ತಿಳಿಯಿತು. ಚಲನಚಿತ್ರದ ಪೋಸ್ಟರ್, ಪ್ರಚಾರ ಸಾಮಗ್ರಿ ಮತ್ತು ಚಲನಚಿತ್ರದ ಕಥಾವಸ್ತುವಿನಲ್ಲಿ ಇದು ನ್ಯಾಯಾಲಯದ ಅರ್ಜಿಯ ಮೇಲೆ ಆಧಾರಿತವಾಗಿದೆ ಎಂದು ಹೇಳಲಾಗಿದೆ. ಚಲನಚಿತ್ರದ ಈ ಹೇಳಿಕೆಯು ದಾರಿತಪ್ಪಿಸುವಂತಿದೆ, ಜೊತೆಗೆ ನನ್ನ ಬೌದ್ಧಿಕ ಮತ್ತು ಕಾನೂನು ಹಕ್ಕುಗಳ ಉಲ್ಲಂಘನೆಯಾಗಿದೆ. ‘ಇದನ್ನು ಮಾಡುವ ಮೊದಲು ನನ್ನ ಅನುಮತಿ ಪಡೆದಿಲ್ಲ’ ಎಂದು ಸಹ ಅವರು ಆರೋಪಿಸಿದ್ದಾರೆ.
ಧಾರ್ಮಿಕ ಉದ್ವಿಗ್ನತೆ ಉಂಟಾಗಬಹುದು!
ರಜನೀಶ್ ಸಿಂಗ್ ಅವರು ಮಾತು ಮುಂದುವರೆಸಿ, ಇಂತಹ ಚಲನಚಿತ್ರದಿಂದ ನ್ಯಾಯಾಲಯದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಸಾಮಾಜಿಕ ಮತ್ತು ಧಾರ್ಮಿಕ ಉದ್ವಿಗ್ನತೆಯೂ ಉಂಟಾಗಬಹುದು ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ