ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಖಿಲ್ ಅಹ್ಮದ್‌ನ ಬಂಧನ

ಇಂದೋರ್ (ಮಧ್ಯಪ್ರದೇಶ) ಇಲ್ಲಿನ ಘಟನೆ

ಇಂದೋರ್ (ಮಧ್ಯಪ್ರದೇಶ) – ಭಾರತದಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಇದರ ಅಂಗವಾಗಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡವು ಪಂದ್ಯಕ್ಕಾಗಿ ಇಂದೋರ್‌ಗೆ ಬಂದಿದೆ. ಇಲ್ಲಿನ ‘ಹೋಟೆಲ್ ರಾಡಿಸನ್ ಬ್ಲೂ’ ಬಳಿ ಹಾದು ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಮತಾಂಧನೊಬ್ಬ ಇಬ್ಬರು ಮಹಿಳಾ ಆಟಗಾರ್ತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯಿಂದ ಇಬ್ಬರೂ ಆಟಗಾರ್ತಿಯರು ಭಯಭೀತರಾಗಿ ತಕ್ಷಣ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಖಿಲ್ ಅಹ್ಮದ್‌ನನ್ನು ಬಂಧಿಸಿದ್ದಾರೆ. ಈ ಘಟನೆ ಅಕ್ಟೋಬರ್ 23 ರಂದು ಬೆಳಿಗ್ಗೆ ಖಜ್ರಾನಾ ರಸ್ತೆಯಲ್ಲಿ ನಡೆದಿದೆ.

ಇಬ್ಬರೂ ಮಹಿಳಾ ಕ್ರಿಕೆಟಿಗರು ‘ದಿ ನೇಬರ್‌ಹುಡ್ ಕೆಫೆ’ಗೆ ಹೋಗುತ್ತಿದ್ದರು. ಆ ಸಮಯದಲ್ಲಿ, ಬಿಳಿ ಶರ್ಟ್ ಮತ್ತು ಕಪ್ಪು ಟೋಪಿ ಧರಿಸಿದ್ದ ಬೈಕ್ ಸವಾರನೊಬ್ಬ ಅವರನ್ನು ಹಿಂಬಾಲಿಸಿದ್ದಾನೆ. ಅವನು ವೇಗವಾಗಿ ಹತ್ತಿರ ಬಂದು ಒಬ್ಬ ಮಹಿಳಾ ಕ್ರಿಕೆಟಿಗರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ.

ಸಂಪಾದಕೀಯ ನಿಲುವು

ಮತಾಂಧ ಕಾಮುಕರಿಂದಾಗಿ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನವಾಗಿದೆ. ಆದ್ದರಿಂದ, ಇಂತಹ ಆರೋಪಿಗೆ ಷರಿಯತ್ ಕಾನೂನಿನ ಪ್ರಕಾರ ಕೈ-ಕಾಲು ಕತ್ತರಿಸುವ ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ!