ಆಂಧ್ರಪ್ರದೇಶ: ಅಪಘಾತದ ಬಳಿಕ ಬಸ್ಸಿಗೆ ಬೆಂಕಿ; ೨೦ ಪ್ರಯಾಣಿಕರ ಜೀವಂತ ದಹನ

ಕರ್ನೂಲ್ (ಆಂಧ್ರಪ್ರದೇಶ) – ಚಿನ್ನಾಟೇಕುರ್ ಬಳಿ ಒಂದು ಖಾಸಗಿ ಬಸ್ಸಿಗೆ ಬೆಂಕಿ ತಗುಲಿ ಬಸ್ಸಿನಲ್ಲಿದ್ದ ೨೦ ಪ್ರಯಾಣಿಕರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಈ ಘಟನೆಯು ಅಕ್ಟೋಬರ್ ೨೪ ರಂದು ಮುಂಜಾನೆ ೩.೩೦ರ ಸುಮಾರಿಗೆ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ಭಾಗ್ಯನಗರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೪ರಲ್ಲಿ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ದ್ವಿಚಕ್ರ ವಾಹನವು ಬಸ್ಸಿನ ಅಡಿಯಲ್ಲಿ ಸಿಲುಕಿ ಇಂಧನ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ಕಾರಣ, ಬಸ್ಸಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಬಸ್ಸಿನಲ್ಲಿ ಅಂದಾಜು ೪೦ ಪ್ರಯಾಣಿಕರಿದ್ದರು. ಅವರಲ್ಲಿ ೧೯ ಜನರು ಬಸ್ಸಿನಿಂದ ಹೊರಗೆ ಹಾರಿ ತಮ್ಮ ಪ್ರಾಣವನ್ನು ಕಾಪಾಡಿಕೊಂಡರು.